ಬ್ರೇಕಿಂಗ್ ನ್ಯೂಸ್
27-08-21 02:36 pm Mangaluru Correspondent ಕ್ರೈಂ
Photo credits : Representational
ಪುತ್ತೂರು, ಆಗಸ್ಟ್ 27: ಚಿನ್ನದ ಆಭರಣಗಳನ್ನು ಶೈನಿಂಗ್ ಮಾಡುವುದಾಗಿ ಹೇಳಿ ಬಂದಿದ್ದ ವ್ಯಕ್ತಿಯೊಬ್ಬ ಐದೂವರೆ ಪವನ್ ಚಿನ್ನವನ್ನು ಎಗರಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಚಿನ್ನ ಕಳಕೊಂಡ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆಯೂ ಆಗಿರುವ ಮಹಿಳೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ನಾಜೆ ನಿವಾಸಿ. ಗ್ರಾಪಂ ಸದಸ್ಯೆ ಇಂದಿರಾ ಮೋಸ ಹೋದವರು. ಆಟೋ ರಿಕ್ಷಾದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಚಿನ್ನ, ಬೆಳ್ಳಿ ಆಭರಣ, ಟಿವಿ ಸೆಟ್, ಶೋಕೇಸ್ ಇನ್ನಿತರ ಪರಿಕರಗಳನ್ನು ಹೊಳೆಯುವಂತೆ ಮಾಡುತ್ತೇನೆಂದು ಹೇಳಿ ನಂಬಿಸಿದ್ದ. ಅಲ್ಲದೆ, ಅದನ್ನು ಹೊಳೆಯುವಂತೆ ಮಾಡಬಲ್ಲ ಪೌಡರ್ ತನ್ನಲ್ಲಿದೆ, ಬೇಕಾದರೆ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ.
ಪರೀಕ್ಷೆ ಮಾಡುವುದಕ್ಕಾಗಿ ಬೆಳ್ಳಿಯ ತಟ್ಟೆ ಏನಾದ್ರೂ ಇದ್ದರೆ ಕೊಡಿ ಎಂದಿದ್ದಕ್ಕೆ, ಮಹಿಳೆ ಬೆಳ್ಳಿಯ ಆಭರಣ ಒಂದನ್ನು ಕೊಟ್ಟಿದ್ದರು. ಅದನ್ನು ಶುಚಿಗೊಳಿಸಿದಾಗ ಕೆಲವೇ ನಿಮಿಷದಲ್ಲಿ ಫಳ ಫಳ ಹೊಳೆದಿದ್ದನ್ನು ನೋಡಿ, ಚಿನ್ನಾಭರಣವೂ ಇದೇ ರೀತಿ ಹೊಳೆಯುತ್ತದೆ ಎಂದು ಹೇಳಿ ವ್ಯಕ್ತಿ ಮರುಳು ಮಾತಿನ ಮೂಲಕ ನಂಬಿಸಿದ್ದಾನೆ. ಅಷ್ಟರಲ್ಲಿ ಮಹಿಳೆ ತನ್ನಲ್ಲಿದ್ದ ಚಿನ್ನದ ಆಭರಣವನ್ನು ತೆಗೆದು ಕೊಟ್ಟಿದ್ದಾರೆ. ಆಗಂತುಕ ವ್ಯಕ್ತಿ ತನ್ನಲ್ಲಿದ್ದ ಹಳದಿ ಬಣ್ಣದ ಪೌಡರನ್ನು ಅದಕ್ಕೆ ಲೇಪಿಸಿದ್ದಾನೆ. ಅಲ್ಲದೆ, ಪಾಲಿಶ್ ಮಾಡುವ ರೀತಿ ಯಾವುದೋ ಜೆಲ್ ಹಾಕಿ, ಉಜ್ಜ ತೊಡಗಿದ್ದ. ಆಬಳಿಕ ತನ್ನಲ್ಲಿದ್ದ ಬ್ಯಾಟರಿ ಚಾಲಿತ ಯಂತ್ರದಲ್ಲಿ ನೀರಿನಲ್ಲಿ ಹಾಕಿ, ಬಿಸಿ ಮಾಡಬೇಕೆಂದು ಹೇಳಿ ಬಂಗಾರವನ್ನು ಅದರಲ್ಲಿಟ್ಟು ಬಿಸಿ ಮಾಡಿದ್ದಾನೆ.
ಸ್ವಲ್ಪ ಹೊತ್ತು ನೀರಿನಲ್ಲಿಟ್ಟು ಬಿಸಿ ಮಾಡಿ, ಅದರಿಂದ ತೆಗೆದು ಮತ್ತೆ ತನ್ನಲ್ಲಿದ್ದ ಹಳದಿ ಬಣ್ಣದ ಪೌಡರನ್ನು ಲೇಪಿಸಿದ್ದಾನೆ. ಆನಂತರ, ಆಭರಣವನ್ನು ಪೇಪರಿನಲ್ಲಿ ಕಟ್ಟಿ ಮಹಿಳೆಯ ಕೈಗೆ ಕೊಟ್ಟಿದ್ದು, ಅರ್ಧ ಗಂಟೆಯ ಬಳಿಕ ಹೊರತೆಗೆಯಿರಿ. ಫಳ ಫಳ ಹೊಳೆಯುತ್ತದೆ ಎಂದು ಹೇಳಿ ಅಲ್ಲಿಂದ ಹೊರ ನಡೆದಿದ್ದಾನೆ.
ಆದರೆ, ಇಂದಿರಾಗೆ ಏನೋ ಸಂಶಯ ಬಂದು ಆತ ಹೋದ ಕೆಲವೇ ನಿಮಿಷಗಳಲ್ಲಿ ಪೇಪರಲ್ಲಿ ಕಟ್ಟಿಕೊಟ್ಟಿದ್ದ ಬಂಗಾರವನ್ನು ತೆಗೆದು ನೋಡಿದ್ದಾರೆ. ಅದರಲ್ಲಿ ನೋಡಿದರೆ, ಆಭರಣ ಗಾತ್ರದಲ್ಲಿ ಸಣ್ಣದಾಗಿರುವುದು ಕಂಡಿದ್ದು, ಏನೋ ಮೋಸ ಆಗಿದೆ ಎನ್ನುವ ಅರಿವಾಗಿದೆ. ಕೂಡಲೇ ಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ, ಆಗಂತುಕ ವ್ಯಕ್ತಿ ಮೊದಲು ಆ ಮನೆಗೂ ಬಂದಿದ್ದು, ಬಂಗಾರ ಹೊಳಪು ಮಾಡುವ ಬಗ್ಗೆ ಹೇಳಿದ್ದ. ನಾವು ಅದ್ಯಾವುದೂ ಬೇಡವೆಂದು ಹೊರಕ್ಕೆ ಕಳಿಸಿದ್ದೆವು ಎಂದಿದ್ದಾರೆ. ಪಕ್ಕದ ಮನೆಯವರ ಮಾತು ಕೇಳಿ, ಮಹಿಳೆಗೆ ಗಾಬರಿಯಾಗಿದ್ದು ತನ್ನಲ್ಲಿದ್ದ ಆಭರಣವನ್ನು ಜುವೆಲ್ಲರಿಯಲ್ಲಿ ನೋಡಿದಾಗ ಅರ್ದಕ್ಕರ್ಧ ಚಿನ್ನ ಮಾಯವಾಗಿದ್ದು ಕಂಡುಬಂದಿದೆ.
ಆಗಂತುಕ ವ್ಯಕ್ತಿ ಚಿನ್ನವನ್ನು ಯಾವುದೋ ಕೆಮಿಕಲ್ ನೀರಿನಲ್ಲಿ ಹಾಕಿಟ್ಟು ಕರಗುವಂತೆ ಮಾಡಿದ್ದಾನೆ ಎನ್ನುವ ಅನುಮಾನ ಕೇಳಿಬಂದಿದೆ. ಗ್ರಾಮ ಪಂಚಾಯತ್ ಸದಸ್ಯೆ ಆಗಿರುವ ಮಹಿಳೆ ಇಂದಿರಾ ತಾನು ಮೋಸ ಹೋದ ಬಗ್ಗೆ ಪುತ್ತೂರಿನ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಆಗಂತುಕ ವ್ಯಕ್ತಿ ಯಾವುದೇ ಅನುಮಾನ ಬರದಂತೆ ನಟಿಸುತ್ತಾ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
A gram panchayat member has filed complaint in the Sampya police station near here about having lost five and half sovereigns of gold ornaments, after believing in the promise made by a man that the ornaments will be left shining brightly.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm