ಬ್ರೇಕಿಂಗ್ ನ್ಯೂಸ್
27-08-21 10:32 pm Mangaluru Correspondent ಕ್ರೈಂ
ಮೈಸೂರು, ಆಗಸ್ಟ್ 27: ಎಂಬಿಎ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ತನಿಖೆಯ ಜಾಡು ಹಿಡಿದು ಹೊರಟ ಮೈಸೂರು ಪೊಲೀಸರಿಗೆ ಅಚ್ಚರಿಯ ಸುಳಿವು ಸಿಕ್ಕಿದೆ. ಅದರಂತೆ ಪೊಲೀಸರ ಒಂದು ತಂಡ ಶಂಕಿತ ಆರೋಪಿಗಳ ಜಾಡು ಹಿಡಿದು ಕೇರಳಕ್ಕೆ ತೆರಳಿದೆ.
ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ಘಟನೆ ನಡೆದಿರುವ ಚಾಮುಂಡಿಬೆಟ್ಟದ ತಪ್ಪಲು ಪ್ರದೇಶದ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದ್ದರು. ಆಗ ನಾಲ್ವರು ವಿದ್ಯಾರ್ಥಿಗಳ ಮೊಬೈಲ್ ನಂಬರ್ ಟ್ರೇಸ್ ಆಗಿತ್ತು. ಆದರೆ, ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸದ್ಯ ಎಲ್ಲಿರುವುದು ಅನ್ನುವುದನ್ನು ತೋರಿಸುತ್ತಿರಲಿಲ್ಲ. ಆದರೆ, ಆ ನಂಬರ್ ಹೊಂದಿದ್ದ ವಿದ್ಯಾರ್ಥಿಗಳ ಪತ್ತೆಗಾಗಿ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿಗೆ ಹೋದಾಗ ಅವರು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಗ್ಯಾಂಗ್ ರೇಪ್ ಘಟನೆ ಮಂಗಳವಾರ ರಾತ್ರಿ ನಡೆದಿದ್ದರೆ, ಬುಧವಾರ ಬೆಳಗ್ಗೆ ಇಂಜಿನಿಯರಿಂಗ್ ಪರೀಕ್ಷೆ ಇತ್ತು. ಆದರೆ, ಆ ನಾಲ್ವರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗೂ ಹಾಜರಾಗಿರಲಿಲ್ಲ. ಅಲ್ಲದೆ, ಅವರು ಉಳಿದುಕೊಂಡಿದ್ದ ರೂಮಿಗೆ ಹೋಗಿ ನೋಡಿದರೆ, ಅಲ್ಲಿಯೂ ವಿದ್ಯಾರ್ಥಿಗಳು ಇರಲಿಲ್ಲ.
ನಾಲ್ವರು ಕೂಡ ತಮಿಳುನಾಡು ಮತ್ತು ಕೇರಳದ ವಿದ್ಯಾರ್ಥಿಗಳಾಗಿದ್ದು ಯಾಕಾಗಿ ದಿಢೀರ್ ನಾಪತ್ತೆಯಾಗಿದ್ದಾರೆ ಎನ್ನುವ ಬಗ್ಗೆ ಪೊಲೀಸರಿಗೆ ಬಲವಾದ ಶಂಕೆ ಮೂಡಿದೆ. ಅಲ್ಲದೆ, ಈ ನಾಲ್ವರು ಕೂಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಅವರ ಮೇಲೆ ಸಂಶಯ ಮೂಡಿಸಿದೆ. ಅಲ್ಲದೆ, ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇದೇ ಗ್ಯಾಂಗ್ ಕೈವಾಡ ಇದೆಯಾ ಎನ್ನುವ ಅನುಮಾನ ಮೂಡಿಸಿದೆ. ನಾಲ್ವರು ಕೂಡ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ಅವರ ಪತ್ತೆಗಾಗಿ ಅತ್ತ ತೆರಳಿದ್ದಾರೆ.
ಈ ನಡುವೆ, ವಿದ್ಯಾರ್ಥಿನಿ ಜೊತೆಗಿದ್ದ ಯುವಕನನ್ನು ಪೊಲೀಸರು ತನಿಖೆ ನಡೆಸಿದ್ದು ಹೇಳಿಕೆ ದಾಖಲು ಮಾಡಿದ್ದಾರೆ. ಆತನಿಗೆ ಹಲ್ಲೆಗೈದು ಯುವತಿಯನ್ನು ಎಳೆದೊಯ್ದಿದ್ದ ಕಾಮುಕರು ತಮ್ಮ ಕೃತ್ಯದ ಬಳಿಕ ಆತನಲ್ಲಿ ಮೂರು ಲಕ್ಷ ರೂಪಾಯಿ ಹಣ ಕೇಳಿದ್ದರು. ಅಲ್ಲದೆ, ಯುವತಿ ಮತ್ತು ಆತನ ವಿಡಿಯೋ ಮಾಡಿದ್ದಾರೆ. ಯುವತಿ ನಿತ್ರಾಣಗೊಂಡಿದ್ದರಿಂದ ಬಳಿಕ ಆಕೆಯನ್ನು ಕರೆತಂದು ಆಸ್ಪತ್ರೆಗೆ ತಲುಪಿಸಿದ್ದಾಗಿ ಹೇಳಿದ್ದಾನೆ. ಆತನಿಗೆ ಕಾಮುಕ ಹುಡುಗರ ಬಗ್ಗೆ ಮಾಹಿತಿ ಇದೆಯೇ ಅನ್ನುವ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಯುವತಿಯಿನ್ನೂ ಆಘಾತದಿಂದ ಚೇತರಿಸಿಕೊಳ್ಳದ ಕಾರಣ ಆಕೆಯ ಹೇಳಿಕೆಯನ್ನು ಪೊಲೀಸರು ಪಡೆದಿಲ್ಲ. ಈ ನಡುವೆ, ಆರೋಪಿಗಳ ಬಂಧನಕ್ಕೆ ತೀವ್ರ ಒತ್ತಡ ಕೇಳಿಬಂದಿದೆ. ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿವೆ. ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿ ಪ್ರವೀಣ್ ಸೂದ್ ಮೈಸೂರಿಗೆ ಆಗಮಿಸಿ, ತನಿಖಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ, ಪ್ರವೀಣ್ ಸೂದ್ ಆರೋಪಿಗಳ ಬಗ್ಗೆ ಖಚಿತ ಸುಳಿವು ಸಿಕ್ಕಿರುವುದಾಗಿ ಹೇಳಿದ್ದಾರೆ.
Mysuru gang rape case Four engineering students involvement suspected police towards Kerala. Director General of Police Praveen Sood will supervise the probe into the gang rape of a college student in Mysuru, Karnataka Chief Minister Basavaraj S Bommai said on Friday. “The DGP is going to Mysuru. I have directed him to supervise the investigation and crack the case at the earliest,” he told the media.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm