ಬ್ರೇಕಿಂಗ್ ನ್ಯೂಸ್
01-09-21 11:35 am Headline Karnataka News Network ಕ್ರೈಂ
ಚಿಕ್ಕಮಗಳೂರು, ಸೆ.1 : ಕುದುರೆಮುಖ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯುವಕರ ತಂಡವೊಂದು ಎಣ್ಣೆ ಪಾರ್ಟಿ ನಡೆಸುತ್ತಿದ್ದುದನ್ನು ಪ್ರಶ್ನೆ ಮಾಡಿದ ಹಿರಿಯ ಪರಿಸರವಾದಿ ಡಿ.ವಿ.ಗಿರೀಶ್ ಮತ್ತು ಅವರ ತಂಡದ ಮೇಲೆ ಕಿರಾತಕರು ಯದ್ವಾತದ್ವಾ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು ಭಾರೀ ಆಕ್ರೋಶ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖ್ಯಾತ ಪರಿಸರವಾದಿ ಡಿ.ವಿ. ಗಿರೀಶ್ ಸೋಮವಾರ ಸಂಜೆ ತಮ್ಮ ಸಹಚರರಾದ ಶ್ರೀಪಾಲ್ ಜೈನ್, ದಿನೇಶ್, ಕೀರ್ತಿಕುಮಾರ್, ಜಬೀವುಲ್ಲಾ ಹಾಗೂ ದಿನೇಶ್ ಅವರ ಪುತ್ರಿ ಕರೀಷ್ಮಾ ಎಂಬವರೊಂದಿಗೆ ಕೆಮ್ಮಣ್ಣುಗುಂಡಿ ಸಮೀಪದಲ್ಲಿರುವ ಕ್ರೀಸ್ಟೋಫರ್ ಎಂಬವರ ಎಸ್ಟೇಟ್‌ಗೆ ಜಿಪ್ಸಿ ವಾಹನದಲ್ಲಿ ಹೋಗಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಸಿರವಾಸೆ ಗ್ರಾಮದ 2ನೇ ತಿರುವಿನಲ್ಲಿ ಯುವಕರು ಮದ್ಯಪಾನ ಮಾಡುತ್ತಿದ್ದರು. ಅರಣ್ಯ ಪ್ರದೇಶದಲ್ಲಿ ಈ ರೀತಿ ಮಾಡಬಾರದು ಎಂದು ಡಿ.ವಿ. ಗಿರೀಶ್ ತಮ್ಮ ವಾಹನದಲ್ಲಿದ್ದುಕೊಂಡೇ ಬುದ್ಧಿವಾದ ಹೇಳಿದ್ದರು. ಅದಕ್ಕೆ ತಿರುಗಿಬಿದ್ದಿದ್ದ ಯುವಕರು ಜಿಪ್ಸಿ ವಾಹನದಲ್ಲಿದ್ದ ಯುವತಿಯನ್ನು ಕಂಡು ಚುಡಾಯಿಸಿದ್ದಾರೆ. ಅಲ್ಲದೆ, ಗಿರೀಶ್ ಹಾಗೂ ವಾಹನದಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಗಿರೀಶ್ ಮತ್ತು ತಂಡ ಯುವಕರ ಜೊತೆ ವಾಗ್ವಾದಕ್ಕಿಳಿಯದೆ ತಮ್ಮ ವಾಹನದಲ್ಲಿ ಚಿಕ್ಕಮಗಳೂರಿನತ್ತ ತೆರಳಿದ್ದಾರೆ.





ಆದರೆ ಕುಡಿದ ಮತ್ತಿನಲ್ಲಿದ್ದ ಯುವಕರು ಮೂರು ಬೈಕ್‌ಗಳಲ್ಲಿ ಜಿಪ್ಸಿ ವಾಹನವನ್ನು ಚೇಸ್ ಮಾಡಿಕೊಂಡು ಬಂದಿದ್ದು ಕಂಬಿಹಳ್ಳ ಎಂಬಲ್ಲಿ ಗಿರೀಶ್ ಅವರಿದ್ದ ವಾಹನವನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಗಿರೀಶ್ ಜೊತೆಗಿದ್ದವರ ಮೇಲೂ ಎರಗಿದ ಆರೋಪಿಗಳು ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಆರೋಪಿಗಳು ಕಲ್ಲನ್ನು ತೂರಿದ್ದು ಕೀರ್ತಿಕುಮಾರ್ ಎಂಬವರು ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ.
ಯುವಕರ ಗುಂಪು ಡಿ.ವಿ.ಗಿರೀಶ್ ಮತ್ತವರ ತಂಡದ ಮೇಲೆ ದಾಳಿ ಮಾಡುತ್ತಿದ್ದುದನ್ನು ಕಂಡ ಸ್ಥಳೀಯ ನಿವಾಸಿಗಳು ಬಳಿಕ ಯುವಕರನ್ನು ತಡೆದು ಪರಿಸರವಾದಿಗಳ ತಂಡಕ್ಕೆ ರಕ್ಷಣೆ ನೀಡಿದ್ದಾರೆ. ಅಲ್ಲದೆ, ಹಲ್ಲೆ ನಡೆಸಿದ ಘಟನೆಯನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದಿದ್ದು ಕಿರಾತಕರ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಡಿ.ವಿ.ಗಿರೀಶ್ ನೇರವಾಗಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ಪೈಕಿ ಓರ್ವ ವ್ಯಕ್ತಿ ಚಿಕ್ಕಮಗಳೂರಿನ ಯುವಕ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಎಂಟು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Video:
Dundee militant DV Girish has assaulted a survivor of the Bhadra Wildlife Sanctuary in the district on Monday. The police lodged a complaint on Tuesday and traced the identity of the accused. Girish’s attack on the Shola grassland of Chikmagalur has been widely condemned.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm