ಬ್ರೇಕಿಂಗ್ ನ್ಯೂಸ್
01-09-21 02:48 pm Headline Karnataka News Network ಕ್ರೈಂ
ಬೆಂಗಳೂರು, ಸೆ.1: ಯಶವಂತ ಪೊಲೀಸರ ಕೈಗೆ ಕತರ್ನಾಕ್ ಕಳ್ಳಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಸಂಶಯಾಸ್ಪದ ನೆಲೆಯಲ್ಲಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿನ್ನದ ಆಭರಣಗಳನ್ನು ಕದ್ದಿರುವ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. 20 ಲಕ್ಷ ಮೌಲ್ಯದ 439 ಗ್ರಾಮ್ ಚಿನ್ನಾಭರಣವನ್ನು ವಿವಿಧ ಕಡೆಯಿಂದ ಮಹಿಳೆ ಕದ್ದಿರುವ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ.
ಮಹಿಳೆಯನ್ನು ಲಗ್ಗೆರೆ ನಿವಾಸಿ ಮಮತಾ (40) ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದ ಮೂಲದ ನಿವಾಸಿಯಾಗಿರುವ ಈ ಮಹಿಳೆ ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದಾಳೆ. ಈಕೆಯ ಮೊದಲ ಗಂಡ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು, ಆನಂತರ ಇತ್ತೀಚೆಗೆ ಹತ್ತಿರದ ಸಂಬಂಧಿಕನಾಗಿರುವ ವ್ಯಕ್ತಿಯನ್ನು ಮದುವೆಯಾಗಿದ್ದಳು. ಮದುವೆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗಿ ಬರೋಣ ಎಂದು ಇತ್ತೀಚೆಗೆ ಪ್ರವಾಸ ಬಂದಿದ್ದರು.
ಆಗಸ್ಟ್ 19 ಧರ್ಮಸ್ಥಳಕ್ಕೆ ಬಂದಿದ್ದ ದಂಪತಿ, ಮರುದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಈ ವೇಳೆ, ಹೊಟೇಲ್ ಒಂದರಲ್ಲಿ ಉಪಹಾರಕ್ಕೆ ಕುಳಿತಿದ್ದಾಗ, ಪಕ್ಕದ ಟೇಬಲ್ ನಲ್ಲಿ ಕುಟುಂಬವೊಂದು ಮಕ್ಕಳ ಜೊತೆಗೆ ಉಪಾಹಾರ ಸೇವನೆಯಲ್ಲಿದ್ದರು. ಆನಂತರ ಅಲ್ಲಿಂದ ಕುಟುಂಬ ಕೈ ತೊಳೆಯಲೆಂದು ಟೇಬಲ್ ನಲ್ಲಿ ಬ್ಯಾಗನ್ನು ಇಟ್ಟು ತೆರಳಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿದ ಮಹಿಳೆ ಮತ್ತು ಆಕೆಯ ಗಂಡ ಬ್ಯಾಗನ್ನು ಎತ್ತಿಕೊಂಡು ತೆರಳಿದ್ದಾರೆ.
ಬ್ಯಾಗನ್ನು ದೂರಕ್ಕೆ ಒಯ್ದು ನೋಡಿದಾಗ ಬಂಗಾರದ ಆಭರಣಗಳಿದ್ದವು. ಆನಂತರ, ಬಂಗಾರವನ್ನು ಎತ್ತಿಕೊಂಡು ಬೆಂಗಳೂರಿಗೆ ಮರಳಿದ್ದು, ಯಾವುದೇ ಚಿಂತೆಯಿಲ್ಲದೆ ಜೀವನ ಮಾಡೋಣ ಎಂದುಕೊಂಡಿದ್ದರು. ಆನಂತರ ಆಭರಣಗಳನ್ನು ಒಂದೊಂದಾಗಿ ಜುವೆಲ್ಲರಿಗಳಲ್ಲಿ ಮಾರಲು ಆರಂಭಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಮಹಿಳೆ ಮತ್ತು ಆಕೆಯ ಗಂಡ ಯಶವಂತಪುರದ ಎಸ್.ಕೆ. ಜುವೆಲ್ಲರಿಗೆ ಬಂದಿದ್ದು, ಸಂಶಯಾಸ್ಪದವಾಗಿ ಹೊರಗಡೆ ತಿರುಗಾಡಿಕೊಂಡಿದ್ದರು. ಇದೇ ವೇಳೆ, ಗಸ್ತಿನಲ್ಲಿದ್ದ ಪೊಲೀಸರು ಮಹಿಳೆಯನ್ನು ಪ್ರಶ್ನೆ ಮಾಡಿದ್ದಾರೆ. ಮಹಿಳೆ ತಡಬಡಾಯಿಸಿದ್ದು ಜೊತೆಗಿದ್ದ ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಡ ಓಡಿ ತಪ್ಪಿಸಿಕೊಂಡಿದ್ದರಿಂದ ಸಂಶಯಗೊಂಡ ಪೊಲೀಸರು ಮಹಿಳೆಯನ್ನು ಯಶವಂತಪುರ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಪೊಲೀಸರು ಆಕೆಯ ಬ್ಯಾಗ್ ಪಡೆದು ತಪಾಸಣೆ ನಡೆಸಿದಾಗ, ಅದರಲ್ಲಿ ಹತ್ತು ಕಡೆ ಬಂಗಾರವನ್ನು ಅಡ ಇಟ್ಟಿರುವ ರಶೀತಿ ಸಿಕ್ಕಿದೆ. ಅಲ್ಲದೆ, ತಲಾ ನಾಲ್ಕು ಗ್ರಾಮ್ ಇದ್ದ ಎರಡು ಉಂಗುರವೂ ಸಿಕ್ಕಿದೆ. ಇಷ್ಟೊಂದು ಬಂಗಾರ ಅಡ ಇಟ್ಟಿರುವ ಬಗ್ಗೆ ಸಂಶಯಗೊಂಡು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಂಗಾರ ಕಳವು ಮಾಡಿದ್ದನ್ನು ಹೇಳಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಆಕೆಯ ಗಂಡನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಗಂಡ ಸಿಕ್ಕಿದ ಬಳಿಕ ಇವರು ಈ ಹಿಂದೆಯೂ ಇದೇ ರೀತಿ ಕಳವು ನಡೆಸಿದ್ದಾರೆಯೇ ಎಂಬ ಬಗ್ಗೆ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Yeshwantpur police have arrested a woman and confiscated gold ornaments weighing 439 grams valued at Rs 20 lac. It is said that she had posed as a pilgrim, visited Kukke Subrahmanya, and stolen ornaments belonging to some devotees.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm