ಬ್ರೇಕಿಂಗ್ ನ್ಯೂಸ್
02-09-21 02:45 pm Mangaluru Correspondent ಕ್ರೈಂ
ಮಂಗಳೂರು, ಸೆ.2: ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದ ಯುವತಿಗೆ ಮೋಸ ಮಾಡಿದ್ದಲ್ಲದೆ, ಆಕೆಯಿಂದಲೇ ಹಣ ಸಾಲ ಪಡೆದು ವಂಚಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಜಗನ್ನಾಥ್ ಎಸ್. ಸಜ್ಜನರ್ (34) ಎಂಬಾತ ವಂಚಿಸಿ ಸಿಕ್ಕಿಬಿದ್ದ ಯುವಕ. ಈತನನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ತನಗೆ ವಂಚನೆ ಆಗಿರುವ ಬಗ್ಗೆ ಸುರತ್ಕಲ್, ಮಧ್ಯ ಗ್ರಾಮದ ನಿವಾಸಿ ನಾಗಶ್ರೀ ಎಂಬ ಯುವತಿ ಪೊಲೀಸ್ ದೂರು ನೀಡಿದ್ದರು.
ಮಂಗಳೂರಿನ ಉಳ್ಳಾಲದ ನಿವಾಸಿಯೆಂದು ಹೇಳಿಕೊಂಡಿದ್ದ ಜಗನ್ನಾಥ್, ತಾನು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಅಲ್ಲದೆ, ತಾನು ಮದುವೆಯಾಗುತ್ತೇನೆ ಎಂದು ನಂಬಿಸಿ ಸಲುಗೆ ಬೆಳೆಸಿಕೊಂಡಿದ್ದ. ಆನಂತರ ಫ್ಲ್ಯಾಟ್ ಖರೀದಿಸಬೇಕೆಂದು ಹೇಳಿ ಯುವತಿಯಿಂದಲೇ ಹಣ ಸಾಲ ಪಡೆದಿದ್ದಾನೆ.

ನಾಗಶ್ರೀ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯಿಂದ ಮೂರು ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದ. ಆಕೆ, ತನ್ನ ಚಿನ್ನವನ್ನು ಫೈನಾನ್ಸ್ ನಲ್ಲಿ ಅಡವಿಟ್ಟು ಮೂರು ಲಕ್ಷ ರೂ. ಹಣವನ್ನು ಜಗನ್ನಾಥ್ ಗೆ ನೀಡಿದ್ದ. ಆನಂತರ, ಈ ನಡುವೆ ಒಂದೂವರೆ ಲಕ್ಷ ರೂಪಾಯಿಯನ್ನು ಯುವತಿಗೆ ಮರಳಿಸಿದ್ದ. ಆದರೆ, ಸ್ವಲ್ಪ ದಿನಗಳ ನಂತರ ಯುವತಿಯನ್ನು ನಂಬಿಸಿ ಆ ಹಣವನ್ನೂ ಮರಳಿ ಪಡೆದಿದ್ದ.

ಹಣ ಪಡೆದು ಹೋದ ಜಗನ್ನಾಥ್ ನಾಪತ್ತೆಯಾಗಿದ್ದರಿಂದ ಮೋಸಗೊಂಡಿದ್ದನ್ನು ತಿಳಿದು, ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಯುವತಿ ನೇರವಾಗಿ ಹೆಣ್ಣೂರು ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಬಹಳಷ್ಟು ಯುವತಿಯರಿಗೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು ಮೋಸ ಎಸಗಿದ್ದು ತಿಳಿದುಬಂದಿದೆ. ರಾಜ್ಯದ ವಿವಿಧ ಕಡೆ ಹತ್ತಕ್ಕೂ ಹೆಚ್ಚು ಠಾಣೆಗಳಲ್ಲಿ ಜಗನ್ನಾಥ್ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ.
Hennur Police on Wednesday arrested a 34-year-old man who allegedly cheated woman on a matrimonial site by pretending to be a civil engineer. The accused, identified as Jagannath S Sajjanar, had come out of prison on bail barely eight months ago and resumed his criminal activities since then, police said. Jagannath is a resident of Ullal, but originally hails from Vijayapura.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am