ಬ್ರೇಕಿಂಗ್ ನ್ಯೂಸ್
03-09-21 10:44 am Headline Karnataka News Network ಕ್ರೈಂ
ಚಿಕ್ಕಬಳ್ಳಾಪುರ, ಸೆ.3: ಹೈದರಾಬಾದ್ ನಿಂದ ಬರುತ್ತಿದ್ದ ಬೃಹತ್ ಕಂಟೈನರ್ ಲಾರಿಗಳನ್ನು ತಪಾಸಣೆ ಮಾಡುತ್ತಿದ್ದಾಗ ಟನ್ ಗಟ್ಟಲೆ ಜಾನುವಾರುಗಳ ಕೊಂಬು, ಮೂಳೆಗಳು ದೊರೆತ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೋತೇಪಲ್ಲಿ ಕ್ರಾಸ್ ಬಳಿ ನಡೆದಿದೆ.
ಹೈದರಾಬಾದ್ ಕಡೆಯಿಂದ ಉತ್ತರ ಪ್ರದೇಶ ನೊಂದಣಿಯ ಬೃಹತ್ ಗಾತ್ರದ ಕಂಟೈನರ್ ಲಾರಿ, ಕ್ಯಾಂಟರ್ ಸೇರಿದಂತೆ ಅಶೋಕ್ ಲೈಲಾಂಡ್ ಮೂರು ವಾಹನಗಳಲ್ಲಿ ಜಾನುವಾರುಗಳ ಕೊಂಬು, ಮೂಳೆಗಳನ್ನು ಹೊತ್ತು ತಂದಿದ್ದು ಅವನ್ನು ಬಾಗೇಪಲ್ಲಿಯಲ್ಲಿ ಇತರೇ ಚಿಕ್ಕ ವಾಹನಗಳ ಮೂಲಕ ಅಜ್ಞಾತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಾಗೇಪಲ್ಲಿ ಸಿಪಿಐ ನಾಗರಾಜು ಹಾಗೂ ಪಿಎಸ್‍ಐ ಗೋಪಾಲ್ ರೆಡ್ಡಿ, ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಕೊಂಬು, ಮೂಳೆಗಳು ಬರೋಬ್ಬರಿ 30 ಟನ್ ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಲಾರಿ ಚಾಲಕರಾದ ಸದಾಖತ್ ಆಲಿ, ತೌಸಿಫ್, ಮಹಮ್ ಬಷೀರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ನಡೆಸಿರುವ ಪೊಲೀಸರು, ಬಾಗೇಪಲ್ಲಿಯ ಸ್ಥಳೀಯ ವ್ತಕ್ತಿಯೊರ್ವ ಈ ಗೋವಿನ ಮೂಳೆ, ಕೊಂಬುಗಳನ್ನು ಹೈದರಾಬಾದ್ ನಿಂದ ಎಕ್ಸ್‌ಪೋರ್ಟ್ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಈ ಮೂಳೆನ ಕೊಂಬುಗಳನ್ನು ಪುಡಿ ಮಾಡಿ ಬೇರೆ ಕಡೆಗೆ ರವಾನೆ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
32 tons of cattle horns found in truck from Hyderabad seized in Chikkaballapur Bengaluru
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am