ಬ್ರೇಕಿಂಗ್ ನ್ಯೂಸ್
07-09-21 05:53 pm Headline Karnataka News Network ಕ್ರೈಂ
ಕೊಲಂಬೋ, ಸೆ.7: ಪಾಕಿಸ್ಥಾನ ಮೂಲದ ಏಳು ಮಂದಿ ನಿವಾಸಿಗಳು ಮೀನುಗಾರರ ಸೋಗಿನಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಸಾಗಿಸುತ್ತಿದ್ದ ಪ್ರಕರಣವನ್ನು ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಮುದ್ರ ಮಧ್ಯೆ ಪತ್ತೆಯಾಗಿದ್ದ ಮೀನುಗಾರಿಕೆ ಬೋಟನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಬರೋಬ್ಬರಿ 336 ಕೇಜಿ ಹೆರಾಯಿನ್ ಡ್ರಗ್ಸ್ ಪತ್ತೆಯಾಗಿದ್ದು ಏಳು ಮಂದಿ ಪಾಕಿಸ್ಥಾನೀಯರನ್ನು ಬಂಧಿಸಿದ್ದಾರೆ.
ಶ್ರೀಲಂಕಾದ ಮಾಲೆ ದ್ವೀಪದ ಬಳಿ ಪಾಕಿಸ್ಥಾನೀಯರು ಶ್ರೀಲಂಕಾದ ಬೋಟಿಗೆ ಹೆರಾಯಿನ್ ತುಂಬಿಸುತ್ತಿದ್ದಾಗ ನೌಕಾಪಡೆಯ ಕಣ್ಣಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. 336 ಕೇಜಿ ಹೆರಾಯಿನ್ ಮೌಲ್ಯ ಭಾರತದ ಕರೆನ್ಸಿಯಲ್ಲಿ 3.1 ಬಿಲಿಯನ್ ರೂಪಾಯಿ ಆಗುತ್ತದೆ. ಭಾರೀ ಪ್ರಮಾಣದ ಹೆರಾಯಿನ್ ದ್ರವ್ಯವನ್ನು ಪಾಕಿಸ್ಥಾನದಿಂದ ಮೀನುಗಾರಿಕಾ ಬೋಟಿನಲ್ಲಿ ಒಯ್ದು ಇನ್ನೊಂದು ಬೋಟಿಗೆ ತುಂಬಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬೋಟಿನಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿರುವ ಬಗ್ಗೆ ಮಾಹಿತಿಗಳಿಲ್ಲ.
ಕಳೆದ ಡಿಸೆಂಬರ್ ತಿಂಗಳಲ್ಲಿ ಇದೇ ರೀತಿ 2.5 ಬಿಲಿಯನ್ ರೂಪಾಯಿ ಮೌಲ್ಯದ ಹೆರಾಯಿನನ್ನು ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಸಮುದ್ರ ಮಧ್ಯೆ ಪತ್ತೆ ಮಾಡಿದ್ದರು. ನಾಲ್ಕು ಮಂದಿ ಪಾಕಿಸ್ಥಾನ ಮೂಲದವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಡ್ರಗ್ಸನ್ನು ಪಾಕಿಸ್ಥಾನದ ಗ್ವಾದರ್ ಬಂದರಿನಿಂದ ತರಲಾಗಿತ್ತು ಅನ್ನೋ ಮಾಹಿತಿ ಬಯಲಾಗಿತ್ತು. ಗ್ವಾದರ್ ಬಂದರು ಚೀನಾ ಹಿಡಿತದಲ್ಲಿದ್ದು, ಅಲ್ಲಿಂದ ಹೆರಾಯಿನನ್ನು ತಂದು ಶ್ರೀಲಂಕಾ ಮೂಲದ ಬೋಟ್ ಗಳ ಮೂಲಕ ಸಾಗಿಸುತ್ತಿದ್ದರು.
ಪಾಕಿಸ್ಥಾನದಿಂದ ಡ್ರಗ್ಸ್ ಸರಬರಾಜು ಅಂತಾರಾಷ್ಟ್ರೀಯ ಮಾಫಿಯಾ ಆಗಿದ್ದು, ಭಾರತ ಮತ್ತು ಶ್ರೀಲಂಕಾಗೆ ಇದೇ ರೀತಿ ಮೀನುಗಾರಿಕಾ ಬೋಟ್ ಗಳಲ್ಲಿಯೇ ಡ್ರಗ್ಸ್ ಪೂರೈಕೆ ಆಗುತ್ತಾ ಇದೆ ಎನ್ನುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
The Sri Lankan Navy has seized 336 Kilogram of heroin from a trawler in the high seas off the coast of Male on September 1. The navy had apprehended the trawler in the high seas and brought the same to capital Colombo on September 4. Seven Pakistani nationals who were aboard this trawler have also been taken into custody.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 10:04 pm
HK News Desk
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm