ಬ್ರೇಕಿಂಗ್ ನ್ಯೂಸ್
07-09-21 10:25 pm Headline Karnataka News Network ಕ್ರೈಂ
ಹೈದರಾಬಾದ್, ಸೆ 07 : ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಮೇಲೆ ಸ್ವಂತ ಗಂಡನೇ ಅತ್ಯಾಚಾರ ಮಾಡಲು ಹೆಂಡತಿ ಸಹಕರಿಸಿದ ಆರೋಪ ಕೇಳಿಬಂದಿದೆ.
ಗಂಡ - ಹೆಂಡತಿ ಇಬ್ಬರೂ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಕಳ್ಳತನ ಮಾಡಲು ಮುಂದಾಗಿದ್ದರು. ಆದರೂ ಅದಕ್ಕೂ ಮುನ್ನ ಅತ್ಯಾಚಾರ ಮಾಡಲು ಗಂಡ ಮುಂದಾದಾಗ ಹೆಂಡತಿಯೇ ಮುಂದೆ ನಿಂತು ಸಹಾಯ ಮಾಡಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಅತ್ಯಾಚಾರ ನಡೆಸಿದ ನಂತರ, ಮಹಿಳೆಯನ್ನು ಕೊಲೆ ಮಾಡಿ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಆರೋಪಿಗಳು ದೋಚಿದ್ದಾರೆ.
ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ದಿನಗೂಲಿ ನೌಕರಳಾಗಿದ್ದು, ಆಕೆಯ ಬಳಿ ಅಷ್ಟು ಹಣವೇನೂ ಇರಲಿಲ್ಲ. ಮೈಮೇಲಿದ್ದ ಒಡವೆಗಳು ಮಾತ್ರ ಆಕೆ ಬಳಿಯಿದ್ದ ಆಸ್ತಿ ಎಂದರೆ ತಪ್ಪಾಗಲಾರದು. ಆಕೆ ಘಟನೆಯ ಹಿಂದಿನ ದಿನ ಕೆಲಸಕ್ಕೆಂದು ಮಲ್ಲಂಪೇಟೆಯಿಂದ ಹೊರಟಿದ್ದಳು. ಆದರೆ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಭಯಗೊಂಡ ಕುಟುಂಬ ಕಾಣೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ವಿಚಾರಣೆ ಆರಂಭಿಸಿದ ಪೊಲೀಸರಿಗೆ, ಮಹಿಳೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಜತೆಗೆ ಅತ್ಯಾಚಾರವಾದ ಕುರುಹುಗಳೂ ಕಾಣಿಸಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಲ್ಲಂಪೇಟೆ ಮನೆಯಿಂದ ಮಲ್ಲಂಪೇಟೆಯಲ್ಲೇ ಇರುವ ದಿನಗೂಲಿ ನೌಕರರ ಅಡ್ಡೆಗೆ ಬೆಳಗ್ಗೆ ಎದ್ದು ಕೂಲಿಗೆಂದು ಮಹಿಳೆ ಹೋಗಿದ್ದಾರೆ. ಕೆಲಸದ ಹುಡುಕಾಡದಲ್ಲಿದ್ದ ಮಹಿಳೆಯನ್ನು ಸ್ವಾಮಿ ಮತ್ತು ನರಸಮ್ಮ ದಂಪತಿ ಭೇಟಿ ಮಾಡಿದ್ದಾರೆ. ಭೇಟಿಯ ನಂತರ, ದೇವಸ್ಥಾನದ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಕೊಡುತ್ತೀನಿ ಎಂದು ಆಕೆಯನ್ನು ಕರೆದೊಯ್ದಿದ್ದಾರೆ. ಮಲ್ಲಂಪೇಟೆಯಿಂದ ಜಿನ್ನಾರಮ್ ಎಂಬ ಏರಿಯಾಗಿದೆ ಆಕೆಯನ್ನು ಕರೆದೊಯ್ದಿದ್ದಾರೆ.
ಅದಾದ ನಂತರ ಜಿನ್ನಾರಮ್ನ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ಯಲಾಗಿದೆ. ಅಲ್ಲಿ ನರಸಮ್ಮ ಸಂತ್ರಸ್ತೆಯನ್ನು ನೆಲಕ್ಕೆ ಜೋರಾಗಿ ತಳ್ಳಿ ಕೈಗಳನ್ನು ಬಂಧಿಸಿದ್ದಾಳೆ. ಗಂಡ ಸ್ವಾಮಿ ಈ ವೇಳೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಕತ್ತು ಹಿಸುಕಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಕೆಯನ್ನು ಸ್ವಾಮಿ ಮತ್ತು ನರಸಮ್ಮ ಕೊಂದು ಹಾಕಿದ್ದಾರೆ. ಬೆಳ್ಳಿ ಬಳೆ ಮತ್ತು ಚಿನ್ನದ ಕಿವಿಯೋಲೆಗಳನ್ನು ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಸಂತ್ರಸ್ತೆಯ ಮೃತದೇಹ ಸಿಕ್ಕ ಬಳಿಕ, ಪೊಲೀಸರು ವಿಚಾರಣೆ ನಡೆಸಿದಾಗ, ಸ್ವಾಮಿ ಮತ್ತು ನರಸಮ್ಮ ಇಬ್ಬರೂ ಆಕೆಗೆ ಕೆಲಸ ಕೊಡುವುದಾಗಿ ಕೃತ್ಯ ನಡೆದ ದಿನ ಬೆಳಗ್ಗೆ ಕರೆದುಕೊಂಡು ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಧೃಡಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
A couple were arrested on Thursday by the Dundigal police on the charges of rape and murder of a 35-year-old woman who went missing from Dundigal. The missing woman found dead in Madaram village of Jinnaram mandal in Sangareddy district.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 08:20 pm
Mangalore Correspondent
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am