ಬ್ರೇಕಿಂಗ್ ನ್ಯೂಸ್
13-09-21 02:16 pm Headline Karnataka News Network ಕ್ರೈಂ
ತುಮಕೂರು, ಸೆ.13: ಸ್ವಂತ ಗಂಡನನ್ನು ಪತ್ನಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ಚರಂಡಿಗೆ ತಳ್ಳಿದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಾರಾಯಣ (52) ಎಂದು ಗುರುತಿಸಲಾಗಿದೆ. ಈತನ ಪತ್ನಿ ಅನ್ನಪೂರ್ಣ (45) ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಇದೇ ವಿಚಾರದಲ್ಲಿ ಪತಿ- ಪತ್ನಿ ನಡುವೆ ಜಗಳ ಆಗುತ್ತಿತ್ತು. ನೆಲಮಂಗಲದ ಬಳಿಯ ಟೋಲ್ ಗೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನಾರಾಯಣ ಪ್ರತಿ ದಿನ ಮನೆಗೆ ಬಂದು ಪತ್ನಿಯನ್ನು ಸಂಶಯದಿಂದ ನೋಡಿ, ತರಾಟೆಗೆತ್ತಿಕೊಂಡಿದ್ದ. ಇದರಿಂದ ರೋಸಿ ಹೋಗಿದ್ದ ಪತ್ನಿ ಅನ್ನಪೂರ್ಣ ಈತನ ಕತೆ ಮುಗಿಸಲು ಪ್ಲಾನ್ ಹಾಕಿದ್ದಳು ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಜಗಳ ನಡೆಯುತ್ತಿರುವಾಗಲೇ ಪೆಟ್ರೋಲ್ ಎರಚಿದ್ದು, ಬೆಂಕಿ ಕಡ್ಡಿ ಗೀರಿದ್ದಳು. ತೂರಾಡುತ್ತಲೇ ನೀರು ನೀರು ಎನ್ನುತ್ತಾ ಚರಂಡಿಯತ್ತ ಹೋಗಿದ್ದಾನೆ. ಹಿಂದಿನಿಂದ ಪತ್ನಿಯೇ ಚರಂಡಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಅರೆಸುಟ್ಟ ರೀತಿಯಲ್ಲಿ ಜೀವಂತವಾಗಿಯೇ ದಹಿಸಿ ಚರಂಡಿಯಲ್ಲೇ ನಾರಾಯಣ ಶವವಾಗಿದ್ದಾನೆ. ಕೊಲೆಗಡುಕಿ ಪತ್ನಿಯನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯ ಬೆಳಕಿಗೆ ಬರುತ್ತಲೇ ಭಾರೀ ಸಂಖ್ಯೆಯಲ್ಲಿ ಸ್ಥಳದಲ್ಲಿ ಜನ ಸೇರಿದ್ದರು.
Tumkur Extramarital affair wife sets Husband on fire and kills. The deceased has been identified as Narayana (52). Wife has been arrested by police.
23-09-25 07:26 pm
Bangalore Correspondent
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
23-09-25 11:01 pm
Mangalore Correspondent
ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿ...
23-09-25 06:58 pm
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪ...
23-09-25 05:49 pm
ದಸರಾ ನಂಬಿಕೆ, ಒಗ್ಗಟ್ಟಿನ ಪ್ರತೀಕ ; ಎನ್ಎಂಪಿಎ ಅಧ್ಯ...
22-09-25 10:08 pm
ಜಿಎಸ್ಟಿ 2.0 ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆ ಸ...
22-09-25 04:09 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am