ಬ್ರೇಕಿಂಗ್ ನ್ಯೂಸ್
17-09-21 05:18 pm Headline Karnataka News Network ಕ್ರೈಂ
ನವದೆಹಲಿ, ಸೆ.17: ದೆಹಲಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರು ಮಹತ್ವದ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. ದೇಶಾದ್ಯಂತ ಮೆಟ್ರೋ ನಗರಗಳನ್ನು ಟಾರ್ಗೆಟ್ ಮಾಡಿ, ವಿಧ್ವಂಸಕ ಕೃತ್ಯಕ್ಕೆ ಸಂಚು ಹೆಣೆಯಲಾಗಿತ್ತು ಅನ್ನೋದನ್ನು ತಿಳಿಸಿದ್ದಾರೆ. ಅಲ್ಲದೆ, ಇವರ ತಂಡದಲ್ಲಿ ಇನ್ನೂ 6ರಿಂದ ಏಳು ಮಂದಿ ಇದ್ದು, ಈಗಾಗ್ಲೇ ದೇಶದ ವಿವಿಧೆಡೆ ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನೂ ಅಧಿಕಾರಿಗಳಲ್ಲಿ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ನ್ಯೂಸ್ 18 ಸಿಎನ್ಎನ್ ನೆಟ್ವರ್ಕ್ ಸುದ್ದಿ ಬ್ರೇಕ್ ಮಾಡಿದೆ.
ಕನಿಷ್ಠ ಅಂದರೂ, ದೇಶದ ಐದು ಮಹಾನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಪ್ಲಾನ್ ಆಗಿತ್ತು. ಪಾಕಿಸ್ಥಾನದಿಂದ ತರಬೇತು ಪಡೆದಿದ್ದ ಜೀಶನ್ ಕಮಾರ್ ಮತ್ತು ಇತರ ಆರೋಪಿಗಳು ನೇರವಾಗಿ ಭಾರತಕ್ಕೆ ಬಂದು ಪೂರ್ವ ನಿಗದಿತ ಏಳು ಮಂದಿಯನ್ನು ಭೇಟಿಯಾಗಲು ಯೋಜಿಸಿದ್ದರು. ಆದರೆ, ಇದೇ ಸಂದರ್ಭದಲ್ಲಿ ಭಯೋತ್ಪಾದನಾ ಜಾಲ ಲೀಕ್ ಆಗಿದ್ದು, ದೆಹಲಿಯ ವಿಶೇಷ ಪೊಲೀಸ್ ತಂಡ ಆರು ಮಂದಿಯನ್ನು ಬಂಧಿಸಿದೆ.
ಪಾಕಿಸ್ಥಾನದ ಕರಾಚಿಯ ಫಾರ್ಮ್ ಹೌಸ್ ನಲ್ಲಿ ಆರು ಮಂದಿ ಆರೋಪಿಗಳೂ ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ತರಬೇತಿ ಪಡೆದಿದ್ದರು. ಐಇಡಿ ಸೇರಿದಂತೆ ಸ್ಫೋಟಕಗಳನ್ನು ನಿಯೋಜಿಸುವುದು, ಬಾಂಬ್ ತಯಾರಿಸುವುದು, ಗನ್ ಬಳಸುವುದನ್ನು ತರಬೇತಿ ನೀಡಲಾಗಿತ್ತು. ಜೈಶ್ ಇ- ಮೊಹಮ್ಮದ್ ಮತ್ತು ಲಷ್ಕರ್ ಇ-ತೈಬಾ ಉಗ್ರರು ಸೇರಿಕೊಂಡು 15 ದಿನಗಳ ಕಾಲ ತರಬೇತು ನೀಡಿದ್ದರು ಎನ್ನುವುದನ್ನು ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ದೆಹಲಿ ವಿಶೇಷ ಪೊಲೀಸ್ ಪಡೆ ಮತ್ತು ಉತ್ತರ ಪ್ರದೇಶದ ಭಯೋತ್ಪಾದಕಾ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶದಲ್ಲಿ ಆರು ಮಂದಿಯನ್ನು ಬಂಧಿಸಿದ್ದರು.
ಒಸಾಮ, ಜೀಶಾನ್ ಸೇರಿ ಆರು ಮಂದಿಯೂ ಬೇರೆ ಬೇರೆ ಮಾರ್ಗಗಳ ಮೂಲಕ ಪಾಕಿಸ್ಥಾನ ತಲುಪಿದ್ದರು. ಕೆಲವರು ಸಮುದ್ರ ಮಾರ್ಗದಿಂದ ತಲುಪಿದ್ದರೆ, ಒಸಾಮಾ ಲಕ್ನೋದಿಂದ ಒಮಾನ್ ಗೆ ತೆರಳಿ ಅಲ್ಲಿಂದ ಪಾಕಿಸ್ಥಾನಕ್ಕೆ ತಲುಪಿದ್ದ. ಒಮಾನ್ ದೇಶದಿಂದ ಮಾನವ ಕಳ್ಳಸಾಗಾಣಿಕೆ ಮೂಲಕ ಪಾಕಿಸ್ಥಾನಕ್ಕೆ ರವಾನಿಸಲಾಗಿತ್ತು ಅನ್ನೋದನ್ನು ಒಸಾಮಾ ಹೇಳಿದ್ದಾನೆ. ಲಕ್ನೋದಿಂದ ವ್ಯಾಲಿಡ್ ಪಾಸ್ಪೋರ್ಟ್ ಪಡೆದೇ ವಿಮಾನದಲ್ಲಿ ಒಮಾನ್ ತಲುಪಿದ್ದರೂ, ಆನಂತರ ಯಾವುದೇ ಕಡೆ ಇವರನ್ನು ತಪಾಸಣೆ ಮಾಡಿರಲಿಲ್ಲ. ಕರಾಚಿಯಲ್ಲಿ ಆಸಿಫ್, ಹಂಝ ಮತ್ತು ಜಬ್ಬಾರ್ ಎಂಬ ಮೂವರು ತರಬೇತಿ ನೀಡಿದ್ದರು ಎಂದು ಒಸಾಮ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಈ ಆಪರೇಶನ್ ಮಾಡುವುದಕ್ಕಾಗಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ದುಬೈನಲ್ಲಿರುವ ಒಸಾಮಾನ ತಂದೆ ಒಸಾದುರ್ ನೀಡಿದ್ದ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಂಟರ್ ಪೋಲ್ ನೋಟೀಸ್ ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ದುಬೈ ಜೊತೆಗೆ ಮಾತುಕತೆ ಮಾಡಿ, ಅಲ್ಲಿಂದ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
The Pakistan-backed terror module that was busted two days ago in a multi-state operation had planned serial blasts across the country, highly-placed sources told CNN-News18, which has accessed interrogation details of one of the six arrested men, Zeeshan Qamar (28). Sources said the gang wanted to carry out serial terror attacks in all the metro cities. Zeeshan, during his interrogation, told the investigators that he overheard this plan from his trainers in Karachi.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm