ಬ್ರೇಕಿಂಗ್ ನ್ಯೂಸ್
18-09-21 11:34 am Headline Karnataka News Network ಕ್ರೈಂ
ಮೈಸೂರು, ಸೆ: 18: ನಟ ದರ್ಶನ್ ಒಡೆತನದ ವಿನೇಶ್ ಫಾರಂ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ವಿನೇಶ್ ಫಾರಂ ಹೌಸ್‌ನ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರಿ ವ್ಯಕ್ತಿಯೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆಯ ತಾಯಿ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದಿಂದ ಬಂದ ಕುಟುಂಬವೊಂದು ವಿನೇಶ್ ಫಾರಂ ಹೌಸ್‌ನಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಕುಟುಂಬದಲ್ಲಿ ತಾಯಿ, ತಂದೆ ಜೊತೆಗೆ 10 ವರ್ಷದ ಮಗಳು ಹಾಗೂ ಮಗನೊಬ್ಬನಿದ್ದ. ವರ್ಗಾವಣೆ ಪತ್ರದ ಸಮಸ್ಯೆಯಿಂದ ಮಗಳು ಶಾಲೆಗೆ ಹೋಗದೆ ಕುಟುಂಬದ ಜೊತೆಯೇ ವಾಸವಿದ್ದಳು. ಅದೇ ಫಾರಂ ಹೌಸ್‌ನಲ್ಲಿ ಕುದುರೆಗೆ ಲಾಯ ಹೊಡೆಯುವ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ನಜೀಮ್ ಎಂಬಾತ ಇದ್ದ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ಸೆಪ್ಟೆಂಬರ್ 13 ರಂದು ನಡೆದಿದ್ದು, ಸಂತ್ರಸ್ತೆಯ ತಾಯಿ ಸೆಪ್ಟೆಂಬರ್ 15 ರಂದು ದೂರು ನೀಡಿದ್ದಾರೆ.
ಮಗಳ ಮೇಲೆ ನಜೀಮನಿಂದ ಅತ್ಯಾಚಾರ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಫಾರಂನ ಮ್ಯಾನೇಜರ್ ನಾಗರಾಜುಗೆ ಕರೆ ಮಾಡಿದಾಗ ಕೂಡಲೇ ಬಂದ ಅವರು ಪೊಲೀಸರಿಗೆ ದೂರು ನೀಡಿರೆಂದು ಸಲಹೆ ನೀಡಿ ಅವರೇ ದೂರು ಸಹ ಕೊಡಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
A lady has filed a complaint with the city police, alleging that her minor daughter was raped in Vinesh Farmhouse owned by actor Darshan. The police have registered a first information report. It is said that a person who works in the stable for horses in the farmhouse had raped a minor girl belonging to a family of Shivamogga origin which worked in the said farmhouse.
14-02-25 10:48 pm
HK News Desk
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನವನ್ನು ಒದ್ದು ಕಿತ್ಕೋ...
14-02-25 06:16 pm
Praveen Subhash, Navy Jawan, Misfire: ಆಕಸ್ಮಿಕ...
14-02-25 05:45 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm