ಪಾಕ್- ಪಂಜಾಬ್ ಗಡಿಯಲ್ಲಿ ತಯಾರಾಗ್ತಿದ್ಯಾ ಟಿಫಿನ್ ಬಾಂಬ್ ; ತಿಂಗಳ ಅಂತರದಲ್ಲಿ ನಾಲ್ಕು ಕಡೆ ಬಾಂಬ್ ಪತ್ತೆ !

19-09-21 01:03 pm       Headline Karnataka News Network   ಕ್ರೈಂ

ಟಿಫಿನ್ ಬಾಕ್ಸ್ ಬಾಂಬ್ ಬಗ್ಗೆ ದೇಶದ ಪಶ್ಚಿಮ ಕರಾವಳಿಯಲ್ಲಿ ಎಲರ್ಟ್ ಘೋಷಣೆ ಮಾಡಿರುವಾಗಲೇ ಪಾಕಿಸ್ಥಾನದ ಗಡಿಭಾಗ ಪಂಜಾಬ್ ರಾಜ್ಯದಲ್ಲಿ ಮತ್ತೆರಡು ಕಡೆ ಟಿಫಿನ್ ಬಾಕ್ಸ್ ನಲ್ಲಿಟ್ಟಿದ್ದ ಬಾಂಬ್ ಪತ್ತೆಯಾಗಿದೆ.

ಚಂಡೀಗಢ, ಸೆ.19: ಟಿಫಿನ್ ಬಾಕ್ಸ್ ಬಾಂಬ್ ಬಗ್ಗೆ ದೇಶದ ಪಶ್ಚಿಮ ಕರಾವಳಿಯಲ್ಲಿ ಎಲರ್ಟ್ ಘೋಷಣೆ ಮಾಡಿರುವಾಗಲೇ ಪಾಕಿಸ್ಥಾನದ ಗಡಿಭಾಗ ಪಂಜಾಬ್ ರಾಜ್ಯದಲ್ಲಿ ಮತ್ತೆರಡು ಕಡೆ ಟಿಫಿನ್ ಬಾಕ್ಸ್ ನಲ್ಲಿಟ್ಟಿದ್ದ ಬಾಂಬ್ ಪತ್ತೆಯಾಗಿದೆ. ಸೆ.15ರಂದು ಜಲಾಲಬಾದ್ ನಗರದ ಬಳಿ ಆಗಿದ್ದ ಬೈಕ್ ಸ್ಫೋಟ ಘಟನೆಗೂ ಟಿಫಿನ್ ಬಾಕ್ಸ್ ಕಾರಣವಾಗಿತ್ತು ಅನ್ನೋದನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧಿಸಿ ಪರ್ವೀನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಇಂಡೋ- ಪಾಕ್ ಗಡಿಯಿಂದ ಮೂರು ಕಿಮೀ ದೂರದಲ್ಲಿರುವ ಧರ್ಮಪುರದ ನಿವಾಸಿಯಾಗಿರುವ ಪರ್ವೀನ್ ಕುಮಾರ್, ಜಮೀನಲ್ಲಿ ಹುದುಗಿಸಿಟ್ಟಿದ್ದ ಲಂಚ್ ಬಾಕ್ಸ್ ಬಾಂಬನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಜಲಾಲಬಾದ್ ನಗರದಿಂದ ಎಂಟು ಕಿಮೀ ದೂರದ ಫಜಿಲ್ಕಾ ಎಂಬಲ್ಲಿ ಸೆ.15ರಂದು ರಾತ್ರಿ ಬೈಕ್ ಸ್ಫೋಟಗೊಂಡು ಬಲ್ವಿಂದರ್ ಸಿಂಗ್ ಎಂಬಾತ ಸಾವು ಕಂಡಿದ್ದ. ಘಟನೆ ಸಂಬಂಧಿಸಿ ಎನ್ಐಎ ಮತ್ತು ಎನ್ಎಸ್ ಜಿ ಕಮಾಂಡೋಗಳು ಪೊಲೀಸರ ಜೊತೆ ಸೇರಿ ತನಿಖೆ ನಡೆಸುತ್ತಿದ್ದಾಗಲೇ ಪರ್ವೀನ್ ಕುಮಾರ್ ಬಗ್ಗೆ ಸುಳಿವು ಲಭಿಸಿತ್ತು.

ಪರ್ವೀನ್ ಕುಮಾರ್ ವಿಚಾರಣೆಯಲ್ಲಿ ಟಿಫಿನ್ ಬಾಂಬ್ ಬಗ್ಗೆ ಮಾಹಿತಿ ನೀಡಿದ್ದಾನೆ. ಮೋಟರ್ ಸೈಕಲಿನಲ್ಲಿ ಬಾಂಬ್ ಇಟ್ಟುಕೊಂಡು ಬಲ್ವಿಂದರ್ ಸಿಂಗ್ ಬೈಕ್ ಓಡಿಸುತ್ತಿದ್ದ. ಜಲಾಲಬಾದ್ ನಗರದ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಇಡುವ ಉದ್ದೇಶ ಇತ್ತು. ಅದರ ನಡುವಲ್ಲೇ ಬಾಂಬ್ ಸ್ಫೋಟಗೊಂಡಿತ್ತು ಎಂದು ಮಾಹಿತಿ ನೀಡಿದ್ದಾನೆ. ಟಿಫಿನ್ ಬಾಕ್ಸ್ ಬಾಂಬ್ ಗಳನ್ನು ಫಿರೋಜ್ ಪುರದ ಸುಖವಿಂದರ್ ಸಿಂಗ್ ಅಲಿಯಾಸ್ ಸೂಖಾ ಎಂಬಾತನ ಮನೆಯಲ್ಲಿ ತಯಾರಿಸಲಾಗಿತ್ತು. ಗುರುಪ್ರೀತ್ ಸಿಂಗ್ ಈ ಕೃತ್ಯಕ್ಕೆ ಸಾಥ್ ನೀಡಿದ್ದ ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ಅವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ನಾಲ್ವರು ಕೂಡ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಪೊಲೀಸ್ ಲಿಸ್ಟಲ್ಲೇ ಇದ್ದವರು.  

ಕಳೆದ ಆಗಸ್ಟ್ 8ರಂದು ಅಮೃತಸರದ ಗ್ರಾಮಾಂತರ ಠಾಣೆ ಪೊಲೀಸರು ದಲೇಕ್ ಎನ್ನುವ ಗ್ರಾಮದಲ್ಲಿ ಐದು ಹ್ಯಾಂಟ್ ಗ್ರೆನೇಡ್ ಮತ್ತು ಒಂದು ಟಿಫಿನ್ ಬಾಕ್ಸ್ ಬಾಂಬ್ ಅನ್ನು ಪತ್ತೆ ಮಾಡಿದ್ದರು. ಆ.20ರಂದು ಕಪುರ್ತಲಾ ಪೊಲೀಸರು ಫಾಗ್ವಾರಾ ಎಂಬಲ್ಲಿ ಎರಡು ಹ್ಯಾಂಡ್ ಗ್ರೆನೇಡ್ ಮತ್ತು ಒಂದು ಟಿಫಿನ್ ಬಾಕ್ಸ್ ಬಾಂಬನ್ನು ವಶಕ್ಕೆ ಪಡೆದಿದ್ದರು. ಆಗಸ್ಟ್ 8ರಂದು ಅಜ್ನಾಲಾ ಎಂಬಲ್ಲಿ ಟ್ಯಾಂಕರ್ ಅಡಿಯಲ್ಲಿ ಇಟ್ಟಿದ್ದ ಟಿಫಿನ್ ಬಾಕ್ಸ್ ಬಾಂಬ್ ಪತ್ತೆಯಾಗಿತ್ತು. ಇದೇ ಪ್ರಕರಣದ ಜಾಡು ಹಿಡಿದು ಹೊರಟ ದೆಹಲಿ ಪೊಲೀಸರಿಗೆ ದೇಶದ ಪ್ರಮುಖ ನಗರಗಳಲ್ಲಿ ಇದೇ ಮಾದರಿಯಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿರುವುದು ತಿಳಿದುಬಂದಿತ್ತು.

Tiffin bomb recovered from the house after overcoming the accused of Jalalabad bike blast conspiracy was part of the terrorist incident | Tiffin bomb recovered from the house after controlling the accused of conspiracy, had to explode by parking a motorcycle in a crowded area.