ಬ್ರೇಕಿಂಗ್ ನ್ಯೂಸ್
20-09-21 10:38 am Mangaluru Correspondent ಕ್ರೈಂ
ಉಳ್ಳಾಲ, ಸೆ.20: ಉಳ್ಳಾಲ ಮಾಸ್ತಿಕಟ್ಟೆ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಪಂಚಲೋಹದ ಮೊಗವನ್ನ ಕಳ್ಳರು ಎಗರಿಸಿದ್ದಾರೆ.
ಮಾಸ್ತಿಕಟ್ಟೆಯ ತೀಯ ಸಮಾಜ ಕುಟುಂಬಸ್ಥರ ಆರಾಧ್ಯ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಗುಡಿಯ ಬಾಗಿಲ ಬೀಗ ಒಡೆದು ಪಂಚಲೋಹದ ಮೊಗವನ್ನ ಕಳವು ಮಾಡಲಾಗಿದೆ. ಮೊಗವನ್ನ ಕ್ಷೇತ್ರಕ್ಕೆ ದಾನ ಮಾಡಿದ್ದ ಹತ್ತಿರದ ಮನೆಯ ನಿವಾಸಿ ನವೀನ್ ಡಿ ಕುಟ್ಟಪ್ಪ ಅವರು ಬೆಳಗ್ಗೆ ವಾಕಿಂಗ್ ಮಾಡುವಾಗ ಅಣ್ಣಪ್ಪನ ಗುಡಿಯ ಬಾಗಿಲು ತೆರೆದಿರುವುದನ್ನ ಕಂಡಿದ್ದಾರೆ. ಕೂಡಲೇ ಅವರು ದೈವಸ್ಥಾನದ ಮುಖ್ಯ ಅರ್ಚಕರಾದ ಭುಜಂಗ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರ್ಚಕರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೈವಸ್ಥಾನದ ಹತ್ತಿರದ ಜಾಗೃತ ವಿವಿಧೋದ್ದೇಶ ಸಂಘ ಇನ್ನಿತರ ಮಳಿಗೆಗಳ ಸಿಸಿ ಕ್ಯಾಮೆರಾ ಫೂಟೇಜನ್ನ ತಪಾಸಣೆ
ನಡೆಸುತ್ತಿದ್ದಾರೆ.



ಕೇವಲ ಮೊಗವನ್ನ ಮಾತ್ರ ಕದ್ದೊಯ್ದರು !
ಅಣ್ಣಪ್ಪ ದೈವದ ಗುಡಿಯ ಬೀಗ ಒಡೆದ ಕಳ್ಳರು ಒಳಗಿದ್ದ ಸುಮಾರು ಒಂದು ಲಕ್ಷ ಬೆಳೆ ಬಾಳುವ ಪಂಚ ಲೋಹದ ಮೊಗವನ್ನು ಮಾತ್ರ ಎಗರಿಸಿ ಅಲ್ಲಿದ್ದ ಪ್ರಭಾವಳಿ, ಬೆಳ್ಳಿ ಮತ್ತು ಲೋಹದ ಕಡ್ಸಲೆ ಇತರ ದೈವೀ ಪರಿಕರಗಳನ್ನು ಹಾಗೇ ಬಿಟ್ಟು ಹೋಗಿದ್ದಾರೆ. ಕಳ್ಳರು ದೈವಸ್ಥಾನದ ಪ್ರಾಂಗಣದಲ್ಲಿರುವ
ಪಾಡಂಗರ ಭಗವತಿ ಗುಡಿಯ ಬಾಗಿಲ ಬೀಗವನ್ನೂ ಮುರಿಯಲು ಪ್ರಯತ್ನಿಸಿ ವಿಫಲವಾಗಿದ್ದು ಕಂಡುಬಂದಿದೆ.
ಉಳ್ಳಾಲದಂತಹ ಸೂಕ್ಷ್ಮ ಪ್ರದೇಶದಲ್ಲಿ ಹಿಂದೂಗಳ ನಂಬಿಕೆಗೆ ಘಾಸಿ ಉಂಟಾಗುವ ಕುಕೃತ್ಯಗಳು ನಡೆಯುತ್ತಿದ್ದು ಪೊಲೀಸರು ಆದಷ್ಟು ಶೀಘ್ರನೆ ಕಳ್ಳತನ ನಡೆಸಿದ ಆರೋಪಿಗಳನ್ನ ಬಂಧಿಸಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆಗ್ರಹಿಸಿದ್ದಾರೆ.




ಕಾರಣೀಕ ಕ್ಷೇತ್ರ ಪೂಮಾಲೆ ಭಗವತಿ
ಕ್ಷೇತ್ರದ ಪರಿವಾರ ದೈವ ನಾಗನ ಗುಡಿಯ ನಾಗನ ಕಲ್ಲನ್ನು ವರುಷಗಳ ಹಿಂದೆ ನಾಲ್ವರು ಅನ್ಯಮತೀಯರು ಸಮೀಪದ ಬಾವಿಗೆ ಎಸೆದಿದ್ದರಂತೆ. ಅದರ ಪ್ರತಿಫಲವಾಗಿ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನುಳಿದವರು ಕಷ್ಟಕ್ಕೆ ತುತ್ತಾಗಿ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅಣ್ಣಪ್ಪ ದೈವವೂ ಕಾರಣಿಕ ಶಕ್ತಿಯಾಗಿದ್ದು ಅದರಿಂದಲೇ ಅತೀ ಶೀಘ್ರದಲ್ಲಿ ಕಳ್ಳನ ಬಂಧನವಾಗುವುದೆಂದು ದೈವಸ್ಥಾನದ ಅರ್ಚಕರು ಹೇಳಿದ್ದಾರೆ.
Ullal Padangra Bhagavathi temple robbery lakhs worth idol stolen. When the priest opened the temple in the morning lakhs worth idol was missing. The ullal police are now investigating the case.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am