ಎಂಟನೇ ಕ್ಲಾಸ್ ವಿದ್ಯಾರ್ಥಿನಿಗೆ ಕಿರುಕುಳ, ಅಶ್ಲೀಲ ಮೆಸೇಜ್ ವೈರಲ್ ; ಹುಡುಗಿ ಸಾವಿಗೆ ಶರಣು, ಶಿಕ್ಷಕ ಮುಂಬೈನಲ್ಲಿ ಸೆರೆ

20-09-21 01:07 pm       Headline Karnataka News Network   ಕ್ರೈಂ

ಎಂಟನೇ ಕ್ಲಾಸ್ ವಿದ್ಯಾರ್ಥಿನಿಯ ಸಾವಿಗೆ ಕಾರಣ ಎನ್ನಲಾದ ಅಡೂರು ಮೂಲದ ಶಿಕ್ಷಕನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಕಾಸರಗೋಡು, ಸೆ.20: ಎಂಟನೇ ಕ್ಲಾಸ್ ವಿದ್ಯಾರ್ಥಿನಿಯ ಸಾವಿಗೆ ಕಾರಣ ಎನ್ನಲಾದ ಅಡೂರು ಮೂಲದ ಶಿಕ್ಷಕನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಎಂಬಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಉಸ್ಮಾನ್ (25) ಬಂಧಿತ ಆರೋಪಿ.

ಅದೇ ಶಾಲೆಯ ಎಂಟಲೇ ಕ್ಲಾಸ್ ವಿದ್ಯಾರ್ಥಿನಿ ಸೆ.8ರಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆನಂತರ, ಈಕೆಯ ಸಾವಿಗೆ ಶಿಕ್ಷಕನ ಕಿರುಕುಳ ಕಾರಣ ಎನ್ನುವ ಆರೋಪ ಕೇಳಿಬಂದಿದ್ದು ಪೊಲೀಸರು ಪೋಕ್ಸೋ ಕಾಯ್ದೆಯಡಿ ಮತ್ತು ಅಪ್ರಾಪ್ತ ಬಾಲಕಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕೇಸು ದಾಖಲಾಗುತ್ತಲೇ ಆರೋಪಿ ಉಸ್ಮಾನ್ ನಾಪತ್ತೆಯಾಗಿದ್ದ. ಪೊಲೀಸರು ಮೊಬೈಲ್ ಟ್ರೇಸ್ ಮಾಡಿದಾಗ, ಮುಂಬೈನಲ್ಲಿರುವುದು ಗೊತ್ತಾಗಿ ಅಲ್ಲಿಗೆ ತೆರಳಿದ ಸ್ಪೆಷಲ್ ಬ್ರಾಂಚ್ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ವಿದ್ಯಾರ್ಥಿನಿಯ ಜೊತೆಗೆ ಶಿಕ್ಷಕ ಉಸ್ಮಾನ್ ಸಂಭಾಷಣೆ ನಡೆಸುತ್ತಿದ್ದ ಆಡಿಯೋ ಮೆಸೇಜ್ ಮತ್ತು ಇನ್ನಿತರ ಸಂದೇಶಗಳು ಜಾಲತಾಣದಲ್ಲಿ ಲೀಕ್ ಆಗಿದ್ದು ವಿದ್ಯಾರ್ಥಿನಿಗೆ ಮುಜುಗರ ಸೃಷ್ಟಿಸಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ವಿದ್ಯಾರ್ಥಿನಿ ಮಾನಸಿಕವಾಗಿ ನೊಂದಿದ್ದಳು. ವಿಚಾರಣೆ ವೇಳೆ ಆರೋಪಿ ಉಸ್ಮಾನ್, ವಿದ್ಯಾರ್ಥಿನಿಯ ಜೊತೆ ಆಡಿಯೋ ಮೆಸೇಜ್ ಮಾಡುತ್ತಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗಿ ತಿಳಿದುಬಂದೆ. ಅಲ್ಲದೆ, ಅಪ್ರಾಪ್ತ ಬಾಲಕಿಗೆ ಕಾಮುಕ ಶಿಕ್ಷಕನೇ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.  

ಇದರಿಂದ ತೀವ್ರ ಆಘಾತಕ್ಕೀಡಾಗಿದ್ದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಳು. ಹುಡುಗಿಯ ಮೊಬೈಲ್ ಫೋನ್ ಮತ್ತು ಯುವಕನ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿದ್ದು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ

The police here on Sunday September 19 arrested a male teacher in connection with the alleged suicide of an eighth standard female student. The arrested man has been identified as A Usman (25), a teacher at a private school in Melparamba here. He is a resident of Adoor.