ಬ್ರೇಕಿಂಗ್ ನ್ಯೂಸ್
21-09-21 05:51 pm Headline Karnataka News Network ಕ್ರೈಂ
ಅಹ್ಮದಾಬಾದ್, ಸೆ.21: ಅಫ್ಘಾನಿಸ್ತಾನದಿಂದ ತರಲಾಗುತ್ತಿದ್ದ 19 ಸಾವಿರ ಕೋಟಿ ಮೌಲ್ಯದ ಮೂರು ಸಾವಿರ ಕೇಜಿ ಹೆರಾಯಿನ್ ಮಾದಕ ದ್ರವ್ಯವನ್ನು ಡಿಆರ್ ಐ ಅಧಿಕಾರಿಗಳು ಗುಜರಾತ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮೌಲ್ಯದ ಹೆರಾಯಿನ್ ಪತ್ತೆಯಾಗಿದ್ದು ಇದೇ ಮೊದಲಾಗಿದ್ದು, ಪ್ರಕರಣ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಇರಾನ್ ದೇಶದ ಬಾಂದಾರ ಅಬ್ಬಾಸ್ ಬಂದರಿನಿಂದ ಗುಜರಾತಿನ ಮುಂಡ್ರಾ ಬಂದರಿಗೆ ಕಂಟೇನರ್ ಗಳಲ್ಲಿ ಪಾರ್ಸೆಲ್ ತರಲಾಗಿತ್ತು. ಆಂಧ್ರ ಪ್ರದೇಶದ ವಿಜಯವಾಡದ ಆಶಿ ಟ್ರೇಡಿಂಗ್ ಕಂಪನಿ ಹೆಸರಲ್ಲಿ ಅಫ್ಘಾನಿಸ್ತಾನದಿಂದ ಸಂಸ್ಕರಿತ ಟಾಲ್ಕ್ ಸ್ಟೋನ್ ಗಳನ್ನು ಆಮದು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಅಫ್ಘಾನಿಸ್ತಾನದ ಮಾಲು ಆಗಿದ್ದರೂ, ಇರಾನ್ ದೇಶದಿಂದ ಲೋಡ್ ಆಗಿತ್ತು. ಆದರೆ, ಡೈರಕ್ಟರೇಟ್ ಆಫ್ ರೆವಿನ್ಯು ಇಂಟಲಿಜೆನ್ಸಿ ಅಧಿಕಾರಿಗಳು ಪಾರ್ಸೆಲ್ ನಲ್ಲಿ ನಾರ್ಕೋಟಿಕ್ ಡ್ರಗ್ಸ್ ಇರುವ ಬಗ್ಗೆ ಸುಳಿವು ಪಡೆದಿದ್ದರು.
ಇದರಂತೆ, ಡಿಆರ್ ಐ ಅಧಿಕಾರಿಗಳು ಗಾಂಧಿನಗರದ ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಯ ತಜ್ಞರ ಜೊತೆಗೆ ದಾಳಿ ನಡೆಸಿದ್ದು, ಬಂದರಿಗೆ ಬಂದಿದ್ದ ಎರಡು ಕಂಟೇನರನ್ನು ತಪಾಸಣೆ ನಡೆಸಿದ್ದಾರೆ. ತಜ್ಞರು ಪರಿಶೀಲನೆ ನಡೆಸಿದಾಗ, ಎರಡು ಕಂಟೇನರ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆರಾಯಿನ್ ತುಂಬಿರುವುದು ಕಂಡುಬಂದಿದೆ. ಒಂದು ಕಂಟೇನರಿನಲ್ಲಿ 1999.58 ಕೇಜಿ ಹೆರಾಯಿನ್ ಇದ್ದರೆ, ಮತ್ತೊಂದು ಕಂಟೇನರಿನಲ್ಲಿ 988.64 ಕೇಜಿ ಹೆರಾಯಿನ್ ಇರುವುದನ್ನು ಪತ್ತೆ ಮಾಡಿದ್ದಾರೆ. ಒಟ್ಟು 2,988.22 ಕೇಜಿ ಹೆರಾಯಿನ್ ಪತ್ತೆಯಾಗಿದ್ದು, ನಾರ್ಕೋಟಿಕ್ ಡ್ರಗ್ಸ್ ಕಾಯ್ದೆಯಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದರ ಬೆನ್ನಲ್ಲೇ ಪ್ರಕರಣ ಸಂಬಂಧಿಸಿ ಅಧಿಕಾರಿಗಳು ದೆಹಲಿ, ಚೆನ್ನೈ, ಅಹ್ಮದಾಬಾದ್, ಗಾಂಧಿಧಾಮ್ ಮತ್ತು ಮಾಂಡ್ವಿ ನಗರದಲ್ಲಿ ದಾಳಿ ನಡೆಸಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ಬಂದರು ಮತ್ತು ಟ್ರಾನ್ಸ್ ಪೋರ್ಟ್ ಸೇರಿದ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಜಗತ್ತಿನಲ್ಲಿ ಈವರೆಗೆ ಪತ್ತೆಯಾದ ಅತಿ ಹೆಚ್ಚು ಹೆರಾಯಿನ್ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಜುಲೈನಲ್ಲಿ ನವಿ ಮುಂಬೈನ ಬಂದರಿನಲ್ಲಿ 300 ಕೇಜಿ ಹೆರಾಯಿನ್ ಪತ್ತೆಯಾಗಿತ್ತು. ಇರಾನಿನ ಬಾಂದಾರ್ ಅಬ್ಬಾಸ್ ಬಂದರಿನಿಂದ ಪಾರ್ಸೆಲ್ ಬಂದಿದ್ದು, ಟಾಲ್ಕಮ್ ಪೌಡರ್ ಹೆಸರಲ್ಲಿ ತರಿಸಲಾಗಿತ್ತು. ಮುಂಬೈನ ಇದೇ ಬಂದರಿನಲ್ಲಿ 2020ರ ಆಗಸ್ಟ್ ತಿಂಗಳಲ್ಲಿ 191 ಕೇಜಿ ಹೆರಾಯಿನ್ ಪತ್ತೆ ಮಾಡಿ, ಮೂವರನ್ನು ಅಧಿಕಾರಿಗಳು ಬಂಧಿಸಿದ್ದರು. ಸುರೇಶ್ ಭಾಟಿಯಾ, ಮಹಮ್ಮದ್ ನೌಮಾನ್, ಮಹೇಂದ್ರ ನಿಗಮ್ ಎಂಬ ಖಾಸಗಿ ವ್ಯಕ್ತಿಗಳ ಜೊತೆಗೆ ಇಬ್ಬರು ಕಸ್ಟಮ್ ಏಜಂಟ್ ಗಳಾಗಿದ್ದ ಮೀನನಾಥ ಭೋಡ್ಕೆ ಮತ್ತು ಕೊಂಡಿಬಾವು ಗಂಜಾಲ್ ಎಂಬವರನ್ನು ಬಂಧಿಸಿದ್ದರು. ಈ ಪಾರ್ಸೆಲ್ ಕೂಡ ಇರಾನ್ ದೇಶದ ಛಬ್ಬಹಾರ್ ಬಂದರಿನಿಂದ ಪಾಕಿಸ್ಥಾನದ ಗ್ವಾದಾರ್ ಬಂದರು ಮೂಲಕ ಮುಂಬೈಗೆ ಬಂದಿತ್ತು. ಪಾರ್ಸೆಲ್ ನಲ್ಲಿ ಆಯುರ್ವೇದಿಕ್ ಉತ್ಪನ್ನಗಳು ಇರುವುದಾಗಿ ಹೇಳಲಾಗಿತ್ತು.
ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯುಳ್ಳ ಹೆರಾಯ್ನ್ ಮೂರು ಸಾವಿರ ಕೇಜಿಯಷ್ಟು ಒಂದೇ ಬಾರಿಗೆ ಪತ್ತೆಯಾಗಿದ್ದು ಜಗತ್ತಿನಲ್ಲೇ ಮೊದಲು. ಹೀಗಾಗಿ ಅಫ್ಘಾನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಪಾತಕಿಗಳು ಭಯೋತ್ಪಾದಕ ದಾಳಿಯ ನಡುವೆಯೇ ಭಾರತವನ್ನು ಡ್ರಗ್ಸ್ ಅಮಲಿನಲ್ಲಿ ತುಂಬಿಸಲು ಸಂಚು ನಡೆಸಿದ್ದಾರೆಯೇ ಎನ್ನುವ ಅನುಮಾನವೂ ಎದುರಾಗಿದೆ.
Nearly three tonnes of heroin with a street value of over ₹ 19,000 crore from Afghanistan have been seized from a port in Gujarat in a major bust, officials said Monday. Two men were arrested after the heroin, which was kept in two containers marked as carrying talc, was found by the Directorate of Revenue Intelligence (DRI) at Mundra Port in Gujarat, the government agency said.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm