ಬ್ರೇಕಿಂಗ್ ನ್ಯೂಸ್
22-09-21 04:21 pm Headline Karnataka News Network ಕ್ರೈಂ
ಕೋಟ, ಸೆ.22: ಆಂಟಿ ಮತ್ತು ಮಾವನೇ ಸೇರಿಕೊಂಡು 22 ವರ್ಷದ ಯುವಕನನ್ನು ಮನೆಯಲ್ಲಿ ಕೂಡಿಹಾಕಿ, ಕೈಕಾಲು ಕಟ್ಟಿ ಮೂತ್ರ ಕುಡಿಸಿದ ಕೃತ್ಯ ರಾಜಸ್ಥಾನದ ಕೋಟದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ವಿಶೇಷ ಅಂದ್ರೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಹುಡುಗನ ಆಂಟಿ ಮತ್ತು ಮಾವನೇ ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕ ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ಮಗಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನಂತೆ, ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಆದರೆ, ಯುವಕನ ಸೋದರ ಬೇರೆಯದೇ ಕತೆ ಹೇಳಿದ್ದಾನೆ. ಸೆ.14ರಂದು ಸಂಜೆ ಹೋಮ್ ಗಾರ್ಡ್ ಆಗಿರುವ ಮಾವನೇ ನನ್ನ ತಮ್ಮನನ್ನು ಮನೆಗೆ ಕರೆಸಿದ್ದರು. ಆತ ಅಲ್ಲಿಗೆ ತೆರಳಿದ ನಂತರ, ಕೈಕಾಲು ಕಟ್ಟಿ ಹಾಕಿ ಕೊಠಡಿಯಲ್ಲಿ ಕೂಡಿಹಾಕಿದ್ದರು. ರಾತ್ರಿಯಿಡೀ ಅಲ್ಲಿಯೇ ಕಳೆದಿದ್ದಾನೆ. ಆತನಲ್ಲಿದ್ದ ಮೊಬೈಲ್ ಫೋನ್, 22 ಸಾವಿರ ನಗದನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ, ಮೂತ್ರ ಕುಡಿಸಿ ಅವರೇ ವಿಡಿಯೋ ಮಾಡಿದ್ದಾರೆ. ಆನಂತರ ಕೈತಪ್ಪಿ ವಿಡಿಯೋವನ್ನು ಯಾರೋ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ ಎಂದು ಹೇಳಿದ್ದಾನೆ.
ಸಂತ್ರಸ್ತ ಯುವಕ ಅಹ್ಮದಾಬಾದ್ ನಗರದಲ್ಲಿ ಕೂಲಿ ಕಾರ್ಮಿಕನಾಗಿದ್ದು, ಕೆಲವು ದಿನಗಳ ಹಿಂದೆ ಕೋಟಕ್ಕೆ ಬಂದಿದ್ದ. ಈ ವೇಳೆ ಯುವಕನನ್ನು ಮನೆಗೆ ಕರೆಸಿ ಕೃತ್ಯ ನಡೆಸಲಾಗಿದೆ. ಆರೋಪಿ ಮಾವ ಹೋಮ್ ಗಾರ್ಡ್ ಆಗಿದ್ದಾನೆ. ಪೊಲೀಸರು ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
A 22-year-old man was allegedly tied up, beaten, forced to drink urine and robbed by his distant relatives in Rajasthan’s Kota. A video of the same went viral on social media and the police have now registered a case in the incident.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm