ಬ್ರೇಕಿಂಗ್ ನ್ಯೂಸ್
09-09-20 09:17 pm Headline Karnataka News Network ಕ್ರೈಂ
ನವದೆಹಲಿ, ಸೆಪ್ಟೆಂಬರ್ 9: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಇದಕ್ಕೇ ಇರಬೇಕು. 90 ವರ್ಷದ ವೃದ್ಧೆಯ ಮೇಲೆ 33 ವರ್ಷದ ಯುವಕನೊಬ್ಬ ಅತ್ಯಾಚಾರಗೈದಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಪೈಶಾಚಿಕ ಕೃತ್ಯ ರಾಜಧಾನಿಯಲ್ಲಿ ನಡೆದಿದೆ.
ಅಮಲು ಪದಾರ್ಥ ಸೇವಿಸಿದ್ದ ಸ್ಥಿತಿಯಲ್ಲಿದ್ದ ಯುವಕ ಸಂಜೆ ಹೊತ್ತಿಗೆ ಬಂದು ವೃದ್ಧೆಯ ಮನೆ ಬಾಗಿಲು ಬಡಿದಿದ್ದ. ಹೊರಗೆ ಕಾದಿದ್ದ ಆರೋಪಿ, ಬೆಳಗ್ಗೆ ಹಾಲು ಕೊಟ್ಟಿರಲಿಲ್ಲ. ಹಾಲು ಕೊಡಲು ಬಂದಿದ್ದೇನೆ ಎಂದು ಮನೆ ಒಳಗೆ ಬಂದಿದ್ದ. ವೃದ್ದ ಮಹಿಳೆ ಮನೆಯ ಒಳಗೆ ಹಾಲು ಇಡುವ ಜಾಗಕ್ಕೆ ಹೋಗುತ್ತಿದ್ದಂತೆ ಯುವಕ ಹಿಂದಿನಿಂದ ಬಂದಿದ್ದು ವೃದ್ಧೆಯನ್ನು ಹಿಡಿದುಕೊಂಡಿದ್ದಾನೆ. ಅಲ್ಲದೆ, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ವೃದ್ಧೆ ಅಂಗಲಾಚಿದ್ದು ನಿನ್ನ ಅಜ್ಜಿಯ ವಯಸ್ಸಾಗಿದೆ ನನಗೆ. ಬಿಟ್ಟು ಬಿಡು ಎಂದು ಗೋಗರೆದಿದ್ದಾಳೆ. ಆದರೆ ಯುವಕ ಆಕೆಯನ್ನು ಬಿಡುವ ಸ್ಥಿತಿಯಲ್ಲಿ ಇರಲಿಲ್ಲ. ವೃದ್ಧೆ ವಿರೋಧಿಸಿದ್ದಕ್ಕೆ ಹಲ್ಲೆ ನಡೆಸಿದ್ದು ಬಳಿಕ ಬಲಾತ್ಕಾರ ನಡೆಸಿದ್ದಾನೆ.
ಇದೇ ವೇಳೆ, ಹೊರಭಾಗದಲ್ಲಿ ನಡೆದು ಹೋಗುತ್ತಿದ್ದ ಯಾರಿಗೋ ವೃದ್ಧೆಯ ಅಳು, ಗೋಗರೆತ ಕೇಳಿದ್ದು ಮನೆಯ ಒಳಗೆ ಬಂದು ರಕ್ಷಣೆ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಸ್ಥಳೀಯರು ಸೇರಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವೃದ್ದೆಯನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಲೈಂಗಿಕ ಕಿರುಕುಳ ಆಗಿರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ, ವೃದ್ಧೆಯ ಮೇಲೆ ಹಲ್ಲೆ ಆಗಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ 6 ತಿಂಗಳ ಮಕ್ಕಳಿಂದ ಹಿಡಿದು 90 ವರ್ಷದ ವೃದ್ಧರ ವರೆಗೂ ಯಾವೊಬ್ಬ ಹೆಣ್ಣು ಕೂಡ ಸುರಕ್ಷಿತವಾಗಿಲ್ಲ. ಈ ಕೃತ್ಯವನ್ನು ನೋಡಿದರೆ ಇಂಥ ದುಷ್ಕೃತ್ಯ ಎಸಗಿದವರು ಮನುಷ್ಯರಲ್ಲ ಎಂದು ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm