ಬ್ರೇಕಿಂಗ್ ನ್ಯೂಸ್
24-09-21 04:13 pm Mangaluru Correspondent ಕ್ರೈಂ
ಉಳ್ಳಾಲ, ಸೆ.24: ಸೋಮೇಶ್ವರದ ಉಳ್ಳಾಲ ರೈಲ್ವೇ ಸ್ಟೇಷನ್ ಹಿಂಬದಿಯ ಬೀಚ್ ರಸ್ತೆಯಲ್ಲಿರುವ ಮನೆ ಮನೆಗಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಕ್ರೈಸ್ತ ಮಿಷನರಿಗಳ ಧರ್ಮ ಪ್ರಚೋದಿತ ಕರಪತ್ರ ಮತ್ತು ಪುಸ್ತಕಗಳನ್ನ ಹಂಚಿದ್ದು ಬಜರಂಗದಳ ಕಾರ್ಯಕರ್ತರು ಅಪರಿಚಿತ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.






ಇಂದು ಬೆಳಗ್ಗೆ ಲುಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಈ ಪ್ರದೇಶಕ್ಕೆ ಆಗಮಿಸಿದ್ದು ಕ್ರೈಸ್ತ ಧರ್ಮ ಪ್ರಚೋದಿತ ಮಳಯಾಲಂ ಮತ್ತು ಕನ್ನಡದಲ್ಲಿ ಮುದ್ರಿತ ಕರಪತ್ರ, ಪುಸ್ತಕಗಳನ್ನು ಇಟ್ಟು ಹೋಗಿದ್ದಾನೆ. ಸೋಮೇಶ್ವರದ ಬೀಚ್ ರಸ್ತೆಯಲ್ಲಿರುವ 15ಕ್ಕೂ ಹೆಚ್ಚು ಮನೆಗಳ ಹೊರಭಾಗ ಮತ್ತು ಗೇಟಲ್ಲಿ ಪುಸ್ತಕದ ಕಟ್ಟನ್ನು ಇಟ್ಟು ಹೋಗಿದ್ದಾನೆ. ಇದೇ ವೇಳೆ, ಸ್ಥಳೀಯ ವ್ಯಕ್ತಿಯೊಬ್ಬರು ಆತನಲ್ಲಿ ಸೇಲ್ಸ್ ಮೆನ್ ಎಂದುಕೊಂಡು ಮಾತನಾಡಿದ್ದು ಆತ ಕೊಟ್ಟ ಪುಸ್ತಕಗಳನ್ನು ನಿರಾಕರಿಸಿದ್ದಾನೆ. ಆದರೂ ಅವರ ಗೇಟಲ್ಲಿ ಪುಸ್ತಕ, ಸ್ಟಿಕ್ಕರ್, ಕರಪತ್ರಗಳನ್ನ ಇರಿಸಿ ಹೋಗಿದ್ದಾನೆ.






ಕರಪತ್ರ ಮತ್ತು ಪುಸ್ತಕಗಳಲ್ಲಿ ಸಂಪರ್ಕದ ಮೊಬೈಲ್ ಸಂಖ್ಯೆಯನ್ನೂ ನಮೂದಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಜರಂಗದಳ ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು ಮತ್ತು ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಕರಪತ್ರ, ಪುಸ್ತಕ ಹಂಚಿದ ಅಪರಿಚಿತ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ಮತಾಂತರ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆಯೆಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.
Christian books and Magazines found at the gates of Hindu houses in Ullal in Mangalore VHP condemns the act. New testament Bible along with some Kannada and Malayalam books were found.
24-10-25 06:04 pm
HK News Desk
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 11:57 am
Mangalore Correspondent
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
24-10-25 10:07 am
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm