ಬ್ರೇಕಿಂಗ್ ನ್ಯೂಸ್
24-09-21 05:43 pm Headline Karnataka News Network ಕ್ರೈಂ
ನವದೆಹಲಿ, ಸೆ.24: ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಭದ್ರತೆ ಇರುವ ಕೋರ್ಟ್ ಒಳಗಡೆಯೇ ರೌಡಿಗಳ ಕಾಳಗ ನಡೆದಿದೆ. ನಟೋರಿಯಸ್ ಗ್ಯಾಂಗ್ ಲೀಡರ್ ಒಬ್ಬನನ್ನು ಕೊಲ್ಲುವುದಕ್ಕಾಗಿ ಲಾಯರ್ ವೇಷದಲ್ಲಿ ಬಂದಿದ್ದ ಎದುರಾಳಿ ತಂಡದ ಇಬ್ಬರು ಕೋರ್ಟ್ ಹಾಲ್ ನಲ್ಲಿಯೇ ಗುಂಡಿನ ಮಳೆಗರೆದಿದ್ದಾರೆ. ಪೊಲೀಸರು ಕೌಂಟರ್ ಅಟ್ಯಾಕ್ ಮಾಡಿದ್ದು, ಗ್ಯಾಂಗ್ ಲೀಡರ್ ಸೇರಿ ಮೂರು ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಉತ್ತರ ದೆಹಲಿಯ ರೋಹಿಣಿ ಎಂಬಲ್ಲಿ ಘಟನೆ ನಡೆದಿದೆ. ಕಳೆದ ಒಂದು ವರ್ಷದಿಂದ ತಿಹಾರ್ ಜೈಲಿನಲ್ಲಿದ್ದ ನಟೋರಿಯಸ್ ಕ್ರಿಮಿನಲ್, ಗೋಗಿ ಗ್ಯಾಂಗಿನ ಲೀಡರ್ ಜಿತೇಂದ್ರ ಗೋಗಿಯನ್ನು ಇಂದು ವಿಶೇಷ ಕೋರ್ಟಿಗೆ ಹಾಜರು ಪಡಿಸಲಾಗಿತ್ತು. ಪ್ರಕರಣ ಒಂದರಲ್ಲಿ ವಿಚಾರಣೆಗಾಗಿ ನ್ಯಾಯಾಧೀಶರ ಎದುರು ಹಾಜರು ಪಡಿಸಿರುವಂತೆಯೇ ಎದುರಾಳಿ ಗ್ಯಾಂಗಿನ ಇಬ್ಬರು ಲಾಯರ್ ಧರಿಸಿಕೊಂಡಿದ್ದವರು ಜಿತೇಂದ್ರ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ, ಜಿತೇಂದ್ರ ಗೋಗಿ ಜೊತೆಗೆ ಸೆಕ್ಯುರಿಟಿ ಆಗಿದ್ದ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಅಲ್ಲಿಯೇ ಮರು ದಾಳಿ ನಡೆಸಿದ್ದಾರೆ. ಓಡಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಇಬ್ಬರು ಕೋರ್ಟ್ ಹಾಲ್ ನಲ್ಲಿಯೇ ಗುಂಡೇಟು ಬಿಟ್ಟು ಸಾವು ಕಂಡಿದ್ದಾರೆ. ಪೊಲೀಸರು ಮೂವತ್ತು ಸುತ್ತು ಗುಂಡು ಹಾರಿಸಿ, ಅರ್ಧ ಗಂಟೆಯ ಕಾರ್ಯಾಚರಣೆ ಬಳಿಕ ಹಂತಕರಿಬ್ಬರನ್ನು ಫಿನಿಶ್ ಮಾಡಿದ್ದಾರೆ.
ಜಿತೇಂದ್ರ ಗೋಗಿ ನಟೋರಿಯಸ್ ಗ್ಯಾಂಗ್ ಸ್ಟರ್ ಆಗಿದ್ದು ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈತನ ಎದುರಾಳಿ ಆಗಿದ್ದ ಟಿಲ್ಲು ಗ್ಯಾಂಗ್, ಇಂದು ಗೋಗಿಯನ್ನು ಕೋರ್ಟಿಗೆ ಹಾಜರು ಪಡಿಸುವಾಗಲೇ ಕೊಲ್ಲಲು ಸಂಚು ಹೂಡಿತ್ತು. ಆದರೆ, ಜಿತೇಂದ್ರ ಗೋಗಿ ಜೊತೆಗೆ ಭದ್ರತಾ ಪಡೆಗಳು ಸೆಕ್ಯುರಿಟಿ ಇದ್ದುದರಿಂದ ಆ ವೇಳೆಗೆ ದಾಳಿ ಸಾಧ್ಯವಾಗಿರಲಿಲ್ಲ. ಕೋರ್ಟ್ ಹಾಲ್ ನಲ್ಲಿ ಭದ್ರತಾ ಪಡೆಗಳಿಂದ ಹೊರತಾಗಿ ನ್ಯಾಯಾಧೀಶರ ಮುಂದೆ ನಿಂತಿರುವಾಗಲೇ ವಕೀಲರ ವೇಷದಲ್ಲಿ ಮೊದಲೇ ರೆಡಿಯಾಗಿದ್ದ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ.
ಕೋರ್ಟ್ ಒಳಗಡೆಯೇ ಗನ್ ಹಿಡಿದು ಬಂದು ನ್ಯಾಯಾಧೀಶರ ಎದುರಲ್ಲೇ ಈ ರೀತಿ ಗುಂಡಿನ ದಾಳಿ ನಡೆಸಿರುವುದು ದೊಡ್ಡ ಮಟ್ಟಿನ ಭದ್ರತಾ ವೈಫಲ್ಯ. ಈ ಬಗ್ಗೆ ಕೋರ್ಟಿಗೆ ಬಂದಿದ್ದ ಹಿರಿಯ ವಕೀಲರು ಭದ್ರತಾ ವೈಫಲ್ಯದ ಬಗ್ಗೆ ಕಿಡಿಕಾರಿದ್ದಾರೆ. ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು. ಸಾಕಷ್ಟು ವಕೀಲರೂ ಕೋರ್ಟ್ ಹಾಲ್ ನಲ್ಲಿದ್ದರು. ಆರೋಪಿ ಜಿತೇಂದರ್ ಗೋಗಿಯೂ ಅಲ್ಲಿದ್ದ. ಆದರೆ, ಲಾಯರ್ ವೇಷದಲ್ಲಿ ಬಂದಿದ್ದ ಇಬ್ಬರು ನೇರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಇದು ಯಾವ ರೀತಿಯ ಕೋರ್ಟ್. ಇಲ್ಲಿರುವ ಮೆಟಲ್ ಡಿಟೆಕ್ಟರ್ ವರ್ಕ್ ಆಗ್ತಿದ್ಯೋ ಇಲ್ಲವೋ.. ಅದು ಸರಿಯಾಗಿರುತ್ತಿದ್ದರೆ, ಕೋರ್ಟ್ ಹಾಲ್ ಗೆ ಗನ್ ಹೇಗೆ ಬಂತು ಎಂದು ವಕೀಲ ಲಲಿತ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಗೋಗಿ ಮತ್ತು ಟಿಲ್ಲು ಗ್ಯಾಂಗ್ ಪರಸ್ಪರ ವೈರಿಗಳಾಗಿದ್ದು, ಕಳೆದ ಹಲವು ವರ್ಷಗಳಿಂದ ಗ್ಯಾಂಗ್ ವಾರ್ ನಲ್ಲಿ ತೊಡಗಿವೆ. ಇದರಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜಿತೇಂದರ್ ಮನ್ನ್ ಗೋಗಿ ಪೊಲೀಸರ ಬಲೆಗೆ ಬಿದ್ದಿದ್ದ. ಈತನ ಬಂಧನ ದೆಹಲಿ ಪೊಲೀಸರ ದೊಡ್ಡ ಕಾರ್ಯಾಚರಣೆ ಎನ್ನಲಾಗಿತ್ತು. ಇದೀಗ ಪೊಲೀಸರ ವಶದಲ್ಲಿರುವಾಗಲೇ ಎದುರಾಳಿ ಹೊಸೆದ ಸಂಚಿಗೆ ಗೋಗಿ ಫಿನಿಶ್ ಆಗಿದ್ದಾನೆ.
Video:
Three gangsters were killed in a shootout inside a courtroom in Delhi that has left several people injured and raised serious questions about security in what should be a heavily protected and sanitised zone. In videos, gunshots are heard in court and policemen and lawyers are seen in a scramble in the building at Rohini in north Delhi.
31-08-25 07:17 pm
HK News Desk
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 10:34 pm
Mangalore Correspondent
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
31-08-25 10:55 pm
Mangalore Correspondent
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm