ಬ್ರೇಕಿಂಗ್ ನ್ಯೂಸ್
26-09-21 01:04 pm Mangaluru Correspondent ಕ್ರೈಂ
ಬೆಂಗಳೂರು, ಸೆ.26: ಪತ್ನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಅನುಮಾನಿಸಿದ್ದ ಗಂಡ ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ ಮಾಡಿಸಿದ್ದ. ತಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಪತ್ನಿಗೆ ದೇವರ ಮುಂದೆ ನಿಂತು ಆಣೆ ಪ್ರಮಾಣ ಮಾಡಿದ್ದಳು. ಆದರೆ, ದೇವಸ್ಥಾನದಲ್ಲಿ ಆಣೆ ಮಾಡಿ ಬಂದ ಮರುದಿನವೇ ಅದೇ ವಿಚಾರದಲ್ಲಿ ಜಗಳಕ್ಕಿಳಿದ ಗಂಡ ಪತ್ನಿಯನ್ನು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ.
ತನ್ನದೇ ಮನೆಯಲ್ಲಿ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಫೈನಾನ್ಸ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರದ ನಿವಾಸಿ ರೂಪಾ (34) ಕೊಲೆಯಾಗಿದ್ದು ಆಕೆಯ ಗಂಡ ಕಾಂತರಾಜು (39) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಸ್ಕ್ರೂ ಡ್ರೈವರ್, ಚಾಕು, ಎರಡು ಮೊಬೈಲ್, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಪತ್ನಿ ರೂಪಾ ಇಬ್ಬರು ವ್ಯಕ್ತಿಗಳ ಜತೆ ಸಲುಗೆ ಬೆಳೆಸಿಕೊಂಡಿದ್ದಾಳೆ ಎಂದು ಅನುಮಾನಿಸಿದ್ದ ಕಾಂತರಾಜು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಸಿನಿಮಾ ಸ್ಟೈಲಲ್ಲಿ ಪತ್ನಿಯನ್ನು ಹನಿಮೂನ್ ಟ್ರಿಪ್ ಕರೆದೊಯ್ದು ಜಲಪಾತದಿಂದ ತಳ್ಳಿ ಹತ್ಯೆ ಮಾಡುವುದಕ್ಕೂ ಪ್ಲಾನ್ ಹಾಕಿದ್ದ. 15 ದಿನಗಳ ಹಿಂದೆ ಎರಡು ದಿನ ಜೋಗ ಜಲಪಾತಕ್ಕೆ ಟೂರ್ ಹೋಗೋಣವೆಂದು ಹೇಳಿ ಪತ್ನಿಯನ್ನು ಕರೆದು ಹೋಗಿದ್ದ. ಜಲಪಾತ ತೋರಿಸುವ ನೆಪದಲ್ಲಿ ಜೋಗದ ಬಳಿ ಎತ್ತರ ಪ್ರದೇಶಕ್ಕೆ ಕರೆದೊಯ್ದಿದ್ದ. ಆದರೆ, ಪತ್ನಿ ರೂಪಾ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎಂದು ಹೇಳಿ ಅಲ್ಲಿಗೆ ಹೋಗಲು ನಿರಾಕರಿಸಿದ್ದಳು. ಪ್ರವಾಸದ ನಡುವೆಯೇ ಕೊಲೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ.
ಈ ನಡುವೆ, ಸೆ.22ರಂದು ಸಂಜೆ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ವಿಚಾರದಲ್ಲಿ ಜಗಳ ತೆಗೆದಿದ್ದ. ಬಳಿಕ ಪತ್ನಿಯ ತಲೆಗೆ ಕಬ್ಬಿಣದ ಪೈಪ್‌ನಿಂದ ಹೊಡೆದಿದ್ದಾನೆ. ಆಕೆ ಆಯತಪ್ಪಿ ಕೆಳಗೆ ಬಿದ್ದಾಗ ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಮನೆಯಿಂದ ಪರಾರಿಯಾಗಿದ್ದ. ಮಗ ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಫ್ಯಾನ್‌ನಲ್ಲಿ ಸೀರೆ ನೇತಾಡುತ್ತಿರುವುದು ಕಂಡುಬಂದಿತ್ತು. ನೇಣು ಹಾಕಲು ಪ್ರಯತ್ನಿಸಿದ ರೀತಿಯಲ್ಲಿ ಗಂಡನೇ ಬಿಂಬಿಸಿದ್ದ.
ಬೆಂಗಳೂರಿನಿಂದ ಪರಾರಿಯಾಗಿದ್ದ ಕಾಂತರಾಜು ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ್ದಾನೆ. ಪತ್ನಿಯ ಮೊಬೈಲ್ ತೆಗೆದುಕೊಂಡೇ ಧರ್ಮಸ್ಥಳಕ್ಕೆ ತೆರಳಿದ್ದ ಕಾಂತರಾಜು ಕೇಶಮುಂಡನ ಮಾಡಿಸಿಕೊಂಡಿದ್ದಾನೆ. ಎರಡು ದಿನಗಳ ಹಿಂದಷ್ಟೇ ಧರ್ಮಸ್ಥಳಕ್ಕೆ ತೆರಳಿ, ಪತ್ನಿಯಲ್ಲಿ ಆಣೆ ಮಾಡಿಸಿಕೊಂಡು ಬಂದಿದ್ದ ಆರೋಪಿ, ಪತ್ನಿಗೆ ದೇವರೇ ತನ್ನ ಕೈಯಲ್ಲಿ ಶಿಕ್ಷೆ ಕೊಡಿಸಿದ್ದಾನೆ ಎಂದು ಮತ್ತೆ ದೇವರ ಬಳಿಗೆ ತೆರಳಿ ಕೂದಲು ಹರಕೆ ಕೊಟ್ಟು ಬಂದಿದ್ದ.
ಹಾಸನದಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ಎಸೆದು ಹೋಗಿದ್ದ. ಬಳಿಕ ಬೆಂಗಳೂರಿಗೆ ಬಂದವನು ಮೈಸೂರಿಗೆ ಹೋಗಿದ್ದ. ಇದಾದ ಬಳಿಕ ಸೆ.24ರಂದು ಬೆಂಗಳೂರಿಗೆ ಬಂದು ಮಹಾಲಕ್ಷ್ಮಿಲೇಔಟ್ ಬಳಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಸುಳಿವು ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಂಧನ ಆಗದಿರುತ್ತಿದ್ದರೆ ಇನ್ನಿಬ್ಬರ ಕೊಲೆ ಮಾಡುತ್ತಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ. ಪತ್ನಿಗೆ ತನ್ನ ತಂಗಿಯ ಗಂಡನ ಜೊತೆಗೇ ಸಂಬಂಧ ಇದೆ ಎಂದು ಕಾಂತರಾಜು ಸಂಶಯ ಪಟ್ಟಿದ್ದ. ಹೀಗಾಗಿ, ಪತ್ನಿ ರೂಪಾಳ ತಂಗಿ ಮತ್ತು ಆಕೆಯ ಗಂಡನನ್ನೂ ಹತ್ಯೆ ಮಾಡಲು ಸಂಚು ರೂಪಿಸಿದ್ದ. ಈ ಬಗ್ಗೆ ರೂಪಾಳನ್ನು ಕೊಲೆಗೈದ ದಿನವೇ ಕಾಂತರಾಜು ನೇರವಾಗಿ ಆಕೆಯ ತಂಗಿಯ ಗಂಡನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಆಕೆಯನ್ನು ಮುಗಿಸಿದ್ದೇನೆ, ನಿನ್ನನ್ನೂ ಬಿಡುವುದಿಲ್ಲ ಎಂದು ಹೇಳಿ, ಓಪನ್ನಾಗಿ ಚಾಲೆಂಜ್ ಮಾಡಿದ್ದ.
ಆದರೆ, ಕೊಲೆಗಾರನ ಸುಳಿವು ಅಲ್ಲಿಂದಲೇ ಪೊಲೀಸರಿಗೆ ಸಿಕ್ಕಿತ್ತು. ತನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದನ್ನು ಸ್ವತಃ ಆತ ಪೊಲೀಸರಿಗೆ ತಿಳಿಸಿದ್ದ. ಕಾಂತರಾಜುವೇ ಈ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಆತನೇ ಹೇಳಿಕೊಂಡು ಬೆದರಿಕೆ ಹಾಕಿದ್ದು ಪೊಲೀಸರಿಗೆ ಸಾಕ್ಷಿಯನ್ನು ಒದಗಿಸಿತ್ತು.
A 34-year-old woman was allegedly murdered by her husband at their house in Annapurneshwari Nagar on Wednesday. The accused, Kantharaju (39), absconded after committing the crime. He was allegedly suspecting her fidelity. The deceased has been identified as Roopa, and the couple have an 8-year-old son. Kantharaju is a realtor, who also runs a finance company in Arogya Layout. A senior police officer said the incident took place around 4 pm. Roopa had just attended a phone call. Her husband reportedly checked her call records and picked a fight with her, suspecting her fidelity.
31-08-25 07:17 pm
HK News Desk
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 10:34 pm
Mangalore Correspondent
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
31-08-25 10:55 pm
Mangalore Correspondent
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm