ಜಮೀನು ವಿಚಾರದಲ್ಲಿ ತಕರಾರು ; ಸ್ಥಳಕ್ಕೆ ತೆರಳಿದ್ದ ಮಹಿಳೆ, ಕುಟುಂಬಕ್ಕೆ ಅಶ್ಲೀಲ ನಿಂದನೆ, ವಕೀಲನ ತಂಡದಿಂದ ಜೀವ ಬೆದರಿಕೆ

27-09-21 04:43 pm       Mangaluru Correspondent   ಕ್ರೈಂ

ಜಮೀನು ನಿಮಿತ್ತ ತೆರಳಿದ್ದ ಮಹಿಳೆ ಮತ್ತು ಕುಟುಂಬಕ್ಕೆ ಮಂಗಳೂರಿನ ವಕೀಲ ಸೇರಿದಂತೆ ನಾಲ್ವರು ಗುಂಪು ಸೇರಿಕೊಂಡು ಜೀವ ಬೆದರಿಕೆ ಒಡ್ಡಿದ ಘಟನೆ ಮಂಚಿ ಗ್ರಾಮದಲ್ಲಿ ನಡೆದಿದೆ. 

ಬಂಟ್ವಾಳ, ಸೆ.27: ಜಮೀನು ನಿಮಿತ್ತ ತೆರಳಿದ್ದ ಮಹಿಳೆ ಮತ್ತು ಕುಟುಂಬಕ್ಕೆ ಮಂಗಳೂರಿನ ವಕೀಲ ಸೇರಿದಂತೆ ನಾಲ್ವರು ಗುಂಪು ಸೇರಿಕೊಂಡು ಅಶ್ಲೀಲ ಪದಗಳಿಂದ ನಿಂದಿಸಿದ್ದಲ್ಲದೆ, ಜಮೀನಿಗೆ ಪ್ರವೇಶಿಸದಂತೆ ಜೀವ ಬೆದರಿಕೆ ಒಡ್ಡಿದ ಘಟನೆ ಮಂಚಿ ಗ್ರಾಮದಲ್ಲಿ ನಡೆದಿದೆ. 

ಮಂಗಳೂರಿನ ನಾಗೇಶ್ ರಾವ್ ಪತ್ತುಮುಡಿ ಎಂಬವರು ತನ್ನ ಪತ್ನಿ ಮತ್ತು ಮಗನ ಜೊತೆ ಮಂಚಿ ಗ್ರಾಮದಲ್ಲಿರುವ ತಮ್ಮ ಕೃಷಿ ಜಮೀನಿಗೆ ಹೋಗಿದ್ದ  ಸಂದರ್ಭದಲ್ಲಿ ಘಟನೆ ನಡೆದಿದೆ. ರಸ್ತೆಗೆ ಅಡ್ಡಗಟ್ಟಿದ ಮಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿರುವ ಚಿದಾನಂದ ರಾವ್, ಅವರ ಸಹೋದರ ನಿವೃತ್ತ ಬಿಎಸ್ಸೆನ್ನೆಲ್ ಅಧಿಕಾರಿ ಯಜ್ಞೇಶ್ವರ ರಾವ್, ಸಂಬಂಧಿಕರಾದ ಆತ್ಮರಂಜನ ಕಾರಂತ ಮತ್ತು ಶರತ್ಚಂದ್ರ ಕಾರಂತ ಎಂಬವರು ಮಹಿಳೆಯೆಂದು ನೋಡದೇ ತೀರಾ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗೆ ನಿಂದಿಸಿ ಬೆದರಿಕೆ ಹಾಕಿದ್ದನ್ನು ನಾಗೇಶ ರಾವ್ ಮಗ ವಿಡಿಯೋ ಮಾಡಿದ್ದಾರೆ. ವಿವಾಹಿತ ಮಹಿಳೆಯನ್ನು ತೀರಾ ಅಸಹ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಕೃಷಿ ಜಮೀನಿಗೆ ಹೋಗದಂತೆ ತಡೆದು ಜೀವ ಬೆದರಿಕೆ ಒಡ್ಡಿದ್ದಾರೆ. 

ಮಂಚಿ ಗ್ರಾಮದಲ್ಲಿ ನಾಗೇಶ ರಾವ್ ಕುಟುಂಬಕ್ಕೆ 4.5 ಎಕ್ರೆ ಜಮೀನು ಇದ್ದು ಈ ವಿಚಾರದಲ್ಲಿ ಪಕ್ಕದಲ್ಲಿ ಜಮೀನು ಹೊಂದಿರುವ ಚಿದಾನಂದ ರಾವ್ ಮತ್ತು ತಂಡದವರು ಕಳೆದ ಹಲವು ಸಮಯದಿಂದ ಜಟಾಪಟಿ ನಡೆಸುತ್ತಿದ್ದಾರೆ. ಜಮೀನು ವಿಚಾರದ ವ್ಯಾಜ್ಯ ಸದ್ಯ ಎಸಿ ಕೋರ್ಟಿನಲ್ಲಿದ್ದು ಸದ್ರಿ ಜಮೀನಿಗೆ ಬಾರದಂತೆ ಚಿದಾನಂದ ರಾವ್ ತಡೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. 

ಸೆ.24 ರಂದು ಮಧ್ಯಾಹ್ನ ಜಮೀನಿಗೆ ತೆರಳಿದ್ದ ವೇಳೆ ರಸ್ತೆಗೆ ಕಲ್ಲು ಇಡಲಾಗಿತ್ತು. ಇದನ್ನು ತೆರವು ಮಾಡಲು ಪ್ರಯತ್ನಿಸಿದಾಗ ಅಡ್ಡಗಟ್ಟಿದ ತಂಡ ಅವಾಚ್ಯ ಪದಗಳಿಂದ ನಿಂದಿಸಿದೆ. ಅಲ್ಲದೆ, ತಾವು ತೆರಳಿದ್ದ ಓಮ್ನಿ ಕಾರಿಗೆ ಹಾನಿ ಮಾಡಿದ್ದಾರೆ ಎಂದು ನಾಗೇಶ್ ರಾವ್ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Bail matter dispute Mangalore Lawyer harrasing woman with vulgur words and life threatening statements video goes viral. A case has been registered at the Bantwal rural police station. The lawyer has been identided as Chidananda Rao.