ಬ್ರೇಕಿಂಗ್ ನ್ಯೂಸ್
28-09-21 04:22 pm Headline Karnataka News Network ಕ್ರೈಂ
ಸೇಲಂ, ಸೆ.28: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳನ್ನು ಸಾಯಿಸಿ ಮರಕ್ಕೆ ನೇಣು ಹಾಕಿಸಿದ್ದು, ಬಳಿಕ ತಾನೂ ಸಾಯುವ ಮೊದಲು ಅದನ್ನು ತೋರಿಸಿ ವಿಡಿಯೋ ಮಾಡಿದ್ದಾನೆ.
33 ವರ್ಷದ ವ್ಯಕ್ತಿಯಾಗಿರುವ ಮಂಗಳಪಟ್ಟಿ ನಿವಾಸಿಯಾಗಿದ್ದು, 13 ವರ್ಷಗಳಿಂದ ಹೊಟೇಲಿನಲ್ಲಿ ಕೆಲಸದಲ್ಲಿದ್ದ. ಹತ್ತು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲೇ ಉಳಿದಿದ್ದ. ಈ ಸಂದರ್ಭದಲ್ಲಿ ಪತ್ನಿ ಬೇರೆ ಯಾರದ್ದೋ ಜೊತೆಯಲ್ಲಿ ಗುಪ್ತವಾಗಿ ಮಾತನಾಡುತ್ತಿದ್ದನ್ನು ಕಂಡಿದ್ದ ಪತಿ, ಅದರಿಂದ ಸಂಶಯಪಟ್ಟಿದ್ದ. ಇದೇ ವಿಚಾರದಲ್ಲಿ ಪತ್ನಿ ಜೊತೆ ಜಗಳವನ್ನೂ ಮಾಡಿದ್ದಾನೆ.
ಆನಂತರ, ಆತ ಯಾರೇ ಆಗಿದ್ದರೂ, ನೀನು ಆ ರೀತಿ ಮಾತನಾಡುವುದನ್ನು ಬಿಟ್ಟುಬಿಡಬೇಕು ಎಂದು ಪತಿ ಷರತ್ತು ಹಾಕಿದ್ದ. ಆದರೆ, ಪತ್ನಿಯ ಮೋಸದಾಟ ಮುಂದುವರಿದಿದ್ದ ಬಗ್ಗೆ ಶಂಕೆಯಲ್ಲಿ ಪತಿ ರೋಸಿ ಹೋಗಿದ್ದ. ಮೊನ್ನೆ ಭಾನುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಗ, ಹತ್ತಿರದ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದು, ಜೊತೆಗೆ 9 ವರ್ಷದ ಮಗ ಮತ್ತು 5 ವರ್ಷದ ಪುತ್ರಿಯನ್ನೂ ಕರೆದೊಯ್ದಿದ್ದಾನೆ. ಜೊತೆಗೆ, ಪತ್ನಿಯ ಮೊಬೈಲನ್ನೂ ಹಿಡಿದುಕೊಂಡು ಹೋಗಿದ್ದ.
ಆದರೆ, ಮಕ್ಕಳ ಜೊತೆಗೆ ತೆರಳಿದ್ದ ಪತಿ ಮರಳಿರಲಿಲ್ಲ. ನಾಪತ್ತೆಯಾಗಿದ್ದ ಬಗ್ಗೆ ಮರುದಿನ ಪತ್ನಿ ಪೊಲೀಸ್ ದೂರು ದಾಖಲು ಮಾಡಿದ್ದಳು. ಪೊಲೀಸರು ಹುಡುಕಾಡಿದಾಗ ಮಾವಿನ ತೋಟದಲ್ಲಿ ಮಕ್ಕಳು ಮತ್ತು ತಂದೆಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅಲ್ಲದೆ, ತನ್ನ ಮೊಬೈಲಿನಲ್ಲಿ ಕೊನೆಯ ಬಾರಿಗೆ ಪತ್ನಿಯನ್ನು ಉದ್ದೇಶಿಸಿ ವಿಡಿಯೋ ಮಾಡಿದ್ದು, ನಿನಗೆ ನಾವು ಸಾಯಬೇಕೆಂಬ ಬಯಕೆ ಇತ್ತಲ್ಲ. ಈಗ ನೋಡು ನಾವು ಸತ್ತಿದ್ದೇವೆ ಎಂದು ಹೇಳುತ್ತಾ ಸಾವಿಗೆ ಶರಣಾಗಿದ್ದಾನೆ.
A man in Tamil Nadu suspected his wife's character and felt that his wife was having an affair elsewhere. On this suspicion, he hanged his children, 9 and 5, from a tree and sent the video to relatives. The incident has come to light from Salem District in Tamil Nadu. Murugan, 33, was married to Murugeshwari and had two children, including a 9-year-old boy and a 5-year-old girl. Murugan had been working in a restaurant for 13 years.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm