ಬ್ರೇಕಿಂಗ್ ನ್ಯೂಸ್
29-09-21 05:50 pm Headline Karnataka News Network ಕ್ರೈಂ
ಬೆಂಗಳೂರು, ಸೆ. 29: ಹಣಕ್ಕಾಗಿ ವಕೀಲರೊಬ್ಬರನ್ನು ಅಪಹರಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಬಿಲ್ಡರ್, ಫೈನಾನ್ಷಿಯರ್, ಐಟಿ ಕಂಪನಿ ಮಾಲೀಕ, ಗ್ಯಾಂಗ್ ಆರ್ಟಿಸ್ಟ್ ಮತ್ತು ಬೌನ್ಸರ್‍ಗಳು ಸೇರಿದಂತೆ 9 ಮಂದಿಯ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಗಳರ ಪಾಳ್ಯ ಕರಿಹೋಬನಹಳ್ಳಿ ವಾಸಿ ಸಿದ್ದೇಶ್ (31), ಡಾಲರ್ಸ್ ಕಾಲೋನಿ 2ನೆ ಮೈನ್ ವಾಸಿ ವಿಜಯ್‍ಕುಮಾರ್.ಜಿ (33), ಬೊಮ್ಮನಹಳ್ಳಿ ನಿವಾಸಿ ಸಂಜಯ್.ಎಸ್ ಅಲಿಯಾಸ್ ಸಂಜು (27), ಶಾಂತಿಪ್ರಿಯ ಲೇಔಟ್‍ನ ನೆಲ್ಸನ್‍ಕುಮಾರ್.ಎಫ್ ಅಲಿಯಾಸ್ ನೆಲ್ಸನ್ (23), ಕತ್ರಿಗುಪ್ಪೆಯ ಯುಗಾನಂದ್.ಜಿ (22), ಬೆಟ್ಟಹಳ್ಳಿ ಲೇಔಟ್ ವಾಸಿ ನರೇಶ್ (30), ಜಗಜೀವನರಾಂ ನಗರದ ಅರುಣ್‍ಕುಮಾರ್.ಎಲ್ ಅಲಿಯಾಸ್ ಅರುಣ (29), ನ್ಯೂ ಗುಡ್ಡದಹಳ್ಳಿಯ ಯುವರಾಜ್.ಆರ್ (31), ಚಿಕ್ಕಮಧುರೆ ಗ್ರಾಮದ ಅಶೋಕ.ಕೆ(31) ಬಂತ ಆರೋಪಿಗಳು.
ನಾಗರಬಾವಿ ಮುಖ್ಯರಸ್ತೆ ಸ್ವಾತಿ ಹೊಟೇಲ್ ಬಳಿ ಸೆಪ್ಟೆಂಬರ್ 20 ರಂದು ಬೆಳಗ್ಗೆ 11.30ರ ಸಮಯದಲ್ಲಿ ವಕೀಲರಾದ ಅಭಯ್ ಆರ್. ಕುಲಕರ್ಣಿ ಎಂಬುವವರನ್ನು ಹಣಕಾಸಿನ ವಿಚಾರಕ್ಕೆ ಈ ಆರೋಪಿಗಳು 2 ಫಾಚ್ರ್ಯೂನರ್ ಕಾರುಗಳಲ್ಲಿ ಬಂದು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದರು.
ನಂತರ ಮೊಬೈಲ್ ಮೂಲಕ ಅಭಯ್ ಆರ್.ಕುಲಕರ್ಣಿ ಅವರ ತಮ್ಮ ವರುಣ್ ಆರ್.ಕುಲಕರ್ಣಿ ಎಂಬುವವರಿಗೆ ಕರೆ ಮಾಡಿ 30 ಲಕ್ಷ ರೂ. ಹಣ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಬಂಧನದಲ್ಲಿಟ್ಟಿದ್ದ ವ್ಯಕ್ತಿಗೆ ಹಾಕಿ ಸ್ಟಿಕ್ ಹಾಗೂ ಕೈಮುಷ್ಠಿಯಿಂದ ಗುದ್ದಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು.
ಈ ಸಂಬಂಧ ವರುಣ್ ಆರ್.ಕುಲಕರ್ಣಿ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ಬಿಳಿ ಬಣ್ಣದ ಫಾಚ್ರ್ಯೂನರ್ ಕಾರು, 1 ಹಾಕಿ ಸ್ಟಿಕ್, 9 ವಿವಿಧ ಕಂಪೆನಿಗಳ ಮೊಬೈಲ್ ಫೆಪೊನ್‍ಗಳನ್ನು ವಶಪಡಿಸಿಕೊಂಡು ಅಪಹರಣಕ್ಕೊಳಕಾಗಿದ್ದ ವಕೀಲರನ್ನು ಪೊಲೀಸರು ರಕ್ಷಿಸಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ.ಸಂಜೀವ್ ಎಂ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪ ವಿಭಾಗದ ಸಹಾಯಕಪೊಲೀಸ್ ಕಮೀಷನರ್ ಯು.ಡಿ.ಕೃಷ್ಣಕುಮಾರ್ ನಿರ್ದೇಶನದಲ್ಲಿ ಅನ್ನಪೂರ್ಣೇಶ್ವರಿ ಠಾಣೆ ಇನ್ಸ್‍ಪೆಕ್ಟರ್ ಲೋಹಿತ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Bengaluru Kidnap Lawyer Kidnap Bengaluru Police Stunt Actors Sandalwood
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm