ಬ್ರೇಕಿಂಗ್ ನ್ಯೂಸ್
30-09-21 04:44 pm Mangaluru Correspondent ಕ್ರೈಂ
ಪುತ್ತೂರು, ಸೆ.30: ಹಿಂದು ಅಪ್ರಾಪ್ತ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ತನ್ನ ಮನೆಯಲ್ಲಿ ಕೂಡಿಹಾಕಿದ್ದಾನೆ ಎಂಬ ಸುದ್ದಿ ತಿಳಿದ ಹಿಂದು ಸಂಘಟನೆಯ ಯುವಕರು ಆತನ ಮನೆ ಮುಂದೆ ಜಮಾಯಿಸಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.
ಸೆ.29ರಂದು ಸಂಜೆ ಈಶ್ವರಮಂಗಲದ ಬಳಿಯ ಕೊಳ್ತಿಗೆ ಎಂಬಲ್ಲಿ ಘಟನೆ ನಡೆದಿದ್ದು, ಅಬುಬಕ್ಕರ್ ಸಿದ್ದಿಕ್ (26) ಎಂಬಾತ ಕೇರಳ – ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಆದೂರು ಠಾಣೆ ವ್ಯಾಪ್ತಿಯ ದಲಿತ ಬಾಲಕಿಯನ್ನು ಅಪಹರಿಸಿ ತಂದಿರಿಸಿದ್ದಾನೆಂದು ವದಂತಿ ಹರಡಿತ್ತು. ಅತ್ತ ಬಾಲಕಿಯ ಮನೆಯವರು ಕೂಡ 16 ವರ್ಷದ ಪುತ್ರಿ ನಾಪತ್ತೆಯಾಗಿದ್ದಾಗಿ ಆದೂರು ಠಾಣೆಯಲ್ಲಿ ದೂರು ನೀಡಿದ್ದರು.
ಮುಸ್ಲಿಂ ಮನೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿ, ಕೋಮು ದ್ವೇಷಕ್ಕೆ ಕಾರಣವಾಗುತ್ತಿರುವುದನ್ನು ಅರಿತ ಪೊಲೀಸರು ಮನೆಗೆ ಧಾವಿಸಿದ್ದಾರೆ. ಆದರೆ, ಪೊಲೀಸರು ಬಂದು ಮನೆಯ ಬಾಗಿಲು ತೆರೆಯುವಂತೆ ಹೇಳಿದರೂ, ಬಾಗಿಲು ತೆರೆಯಲಿಲ್ಲ. ಬಳಿಕ ಪೊಲೀಸರು ಮನೆಯವರಿಗೆ ಬಲವಂತಪಡಿಸಿ, ಬಾಗಿಲನ್ನು ತೆರೆಸಿದ್ದು, ಒಳಗೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಮನೆಯೊಳಗೆ ಬಾಲಕಿ ಇಲ್ಲದಿರುವುದನ್ನು ಖಚಿತಪಡಿಸಿ, ಆರೋಪಿ ಅಬುಬಕ್ಕರ್ ಸಿದ್ದಿಕ್ ನನ್ನು ವಶಕ್ಕೆ ಪಡೆದು ಠಾಣೆಗೆ ತೆರಳಿದ್ದಾರೆ.
ಆನಂತರ, ಸಿದ್ದಿಕ್ ನಿಜ ವಿಚಾರವನ್ನು ಹೇಳಿದ್ದಾನೆ. ಒಂದು ವರ್ಷದಿಂದ ಬಾಲಕಿಯ ಜೊತೆ ಸ್ನೇಹದಲ್ಲಿದ್ದು, ಆಕೆಯೇ ಮದುವೆಯಾಗುವಂತೆ ಹೇಳಿದ್ದರಿಂದ ಕಾರಿನಲ್ಲಿ ತನ್ನ ಮನೆಗೆ ಕರೆತಂದಿದ್ದೆ. ಆದರೆ, ಮನೆಯಲ್ಲಿರಿಸಿದರೆ ತೊಂದರೆ ಆಗುತ್ತದೆ ಎಂದು ಪುತ್ತೂರಿನಲ್ಲಿ ಆಕೆಯನ್ನು ಇರಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಆತನ ಮಾಹಿತಿಯಂತೆ, ಬೆಳ್ಳಾರೆ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ವಿಚಾರಣೆ ನಡೆಸಿದ ಬಳಿಕ ಯುವಕ ಮತ್ತು ಬಾಲಕಿಯನ್ನು ಕಾಸರಗೋಡಿನ ಆದೂರು ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಲ್ಲಿ ನಾಪತ್ತೆ ಕೇಸು ದಾಖಲಾಗಿದ್ದು, ಹುಡುಗಿ ಕೂಡ ಅಲ್ಲಿನ ನಿವಾಸಿಯಾಗಿರುವುದರಿಂದ ಅಲ್ಲಿನ ಪೊಲೀಸರೇ ವಿಲೇವಾರಿ ಮಾಡಲಿ ಎಂದು ಅವರ ವಶಕ್ಕೆ ಒಪ್ಪಿಸಿದ್ದಾರೆ.
After getting information that a minor Hindu girl had been abducted by Siddique from Koltige Kuntikan in the taluk and kept her in his home, the locals got together in large numbers in front of his house on Wednesday September 29. This development gave rise to a tense situation in the area.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 07:13 pm
HK News Desk
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm