ಬ್ರೇಕಿಂಗ್ ನ್ಯೂಸ್
30-09-21 09:20 pm Richard, Correspondent ಕ್ರೈಂ
ಕೊಚ್ಚಿ, ಸೆ.30: ಕಳೆದ ಬಾರಿ ಸ್ವಪ್ನಾ ಸುರೇಶ್ ಎಂಬ ಸುಂದರಿ ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಕೇರಳ ಸರಕಾರದ ಆಯಕಟ್ಟಿನ ಅಧಿಕಾರಿಗಳು, ಮುಖ್ಯಮಂತ್ರಿ, ಸಚಿವರನ್ನೇ ಬೋಳಿಸಿಕೊಂಡು ಕೇಜಿಗಟ್ಟಲೆ ಚಿನ್ನವನ್ನು ದುಬೈನಿಂದ ತಂದು ಸಿಕ್ಕಿಬಿದ್ದಿದ್ದು ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಮಾದರಿಯ ಮತ್ತೊಬ್ಬ ಮೋಸಗಾರನ ಅವಾಂತರದ ಸುದ್ದಿ ಹೊರಬಿದ್ದಿದೆ. ಒಬ್ಬಾತ, ಕೇರಳದ ಪ್ರಭಾವಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳನ್ನೇ ಮುಂದಿಟ್ಟು ತಾನೊಬ್ಬ ವಜ್ರದ ಡೀಲರ್, ಏಂಟಿಕ್ ಪೀಸ್ ಡೀಲರ್ ಎಂದು ತೋರಿಸಿಕೊಂಡು ಹಲವಾರು ಪ್ರಭಾವಿಗಳನ್ನು ಬೋಳಿಸಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದ ಪ್ರಸಂಗ ಕೇರಳದಲ್ಲಿ ಭಾರೀ ಸದ್ದು ಮಾಡಿದೆ.
ಆತನ ಹೆಸರು ಮೋನ್ಸನ್ ಮಾವುಂಕಾಲ್. ಕ್ರೈಮ್ ಬ್ರಾಂಚ್ ಪೊಲೀಸರು ಈತನನ್ನು ಆಲಪ್ಪುಳದಲ್ಲಿ ಅರೆಸ್ಟ್ ಮಾಡುತ್ತಲೇ ಕೇರಳದ ಸುದ್ದಿ ವಾಹಿನಿಗಳು ಮಾವುಂಕಾಲ್ ಬಗ್ಗೆ ಕ್ಷಣಕ್ಕೊಂದರಂತೆ ಸುದ್ದಿ ಬಿತ್ತರಿಸ ತೊಡಗಿದಾಗ ಅಲ್ಲಿನ ಜನರು ಇಷ್ಟಕ್ಕೂ ಈ ಮೋನ್ಸನ್ ಮಾವುಂಕಾಲ್ ಅಂದರೆ ಯಾರು ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಹೌದು.. ಮೋನ್ಸನ್ ಮಾವುಂಕಾಲ್ ಅಂದರೆ, ಅಲ್ಲಿನ ಜನ ಸಾಮಾನ್ಯರಿಗಂತೂ ಗೊತ್ತಿಲ್ಲ. ಯಾಕಂದ್ರೆ, ಆತ ರಾಜಕಾರಣಿಯಲ್ಲ. ಯಾವುದೇ ಅಧಿಕಾರಿ ವರ್ಗದವನೂ ಅಲ್ಲ. ಅಷ್ಟೇ ಅಲ್ಲ, ಒಬ್ಬ ಪ್ರಭಾವಿ ಉದ್ಯಮಿಯಾಗಿ ಗುರುತಿಸಲ್ಪಟ್ಟವನೂ ಅಲ್ಲ. ಆದರೆ, ಮಾವುಂಕಾಲ್ ಅರೆಸ್ಟ್ ಆಗಿದ್ದು ಮಲಯಾಳಂ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಹೆಡ್ ಲೈನ್ಸ್ ಆಗಿದ್ದು ರಾಜಕೀಯದ ನಂಟು ಮೆತ್ತಿಕೊಂಡು ಸದ್ದು ಮಾಡಿದೆ.
ಮೂಲತಃ ಆಲಪ್ಪುಳ ಜಿಲ್ಲೆಯ ಚೆರ್ತಲ ನಿವಾಸಿಯಾಗಿರುವ ಮೋನ್ಸನ್ ಮಾವುಂಕಾಲ್ ಕೆಲವು ವರ್ಷಗಳ ಹಿಂದೆ ತನ್ನ ನಿವಾಸವನ್ನು ಕೊಚ್ಚಿಗೆ ಬದಲಾಯಿಸಿದ್ದ. ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಮೋನ್ಸನ್, ತನ್ನನ್ನು ಶಾಂತಿ ಪ್ರತಿಪಾದಕ, ಮಾನವತಾವಾದಿ, ಶಿಕ್ಷಣ ತಜ್ಞ, ಪ್ರೇರಣಾದಾಯಿ ಭಾಷಣಕಾರ ಎಂದು ಹೇಳಿಕೊಳ್ಳುತ್ತಿದ್ದ. ಇದರ ಜೊತೆಗೆ, ತಾನೊಬ್ಬ ಹಳೆಯ ವಸ್ತುಗಳ ಸಂಗ್ರಾಹಕ. ಜಗತ್ತಿನ ಅತ್ಯುದ್ಭುತ ವಸ್ತುಗಳೆಲ್ಲ ತನ್ನಲ್ಲಿವೆ. ಅದಕ್ಕೆಂದೇ ಅತಿ ವಿಶಿಷ್ಟ ಮ್ಯೂಸಿಯಂ ಇಟ್ಟುಕೊಂಡಿದ್ದೇನೆ. ಜೀಸಸ್ ಕೊನೆಯ ಬಾರಿಗೆ ಧರಿಸಿದ್ದ ಬಟ್ಟೆಗಳು, ಜೀಸಸ್ ಜೂದರಿಗೆ ಕೊಟ್ಟಿದ್ದ ಅಪರೂಪದ 30 ನಾಣ್ಯಗಳು, ಪ್ರವಾದಿ ಮೊಹಮ್ಮದ್ ಪೈಗಂಬರ್ ಕುಡಿಯಲು ಬಳಸುತ್ತಿದ್ದ ಕಪ್ ಗಳು, ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಕತ್ತಿ, ಛತ್ರಪತಿ ಶಿವಾಜಿ ಓದಿಕೊಂಡಿದ್ದ ಭಗವದ್ಗೀತೆಯ ಪುಸ್ತಕ, ಔರಂಗಜೇಬ ಬಳಸುತ್ತಿದ್ದ ಉಂಗುರಗಳು ಇತ್ಯಾದಿ ಜಗತ್ತಿನ ಅಪರೂಪದ ವಸ್ತುಗಳು, ವಜ್ರದ ಹರಳುಗಳು ತನ್ನಲ್ಲಿವೆ ಎಂದು ನಂಬಿಸುತ್ತಿದ್ದ.
ಅಷ್ಟೇ ಅಲ್ಲ, ತನ್ನ ಮ್ಯೂಸಿಯಂಗೆ ಪ್ರಭಾವಿ ರಾಜಕಾರಣಿಗಳು, ಅಧಿಕಾರಿ ವರ್ಗದವರು ಭೇಟಿ ಕೊಟ್ಟಿದ್ದ ಫೋಟೋಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದ. ನಿವೃತ್ತ ಡಿಜಿಪಿ ಲೋಕನಾಥ್ ಬೆಹರಾ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದು ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದನ್ನು ಅಪ್ಲೋಡ್ ಮಾಡಿದ್ದ. ಬೆಹರಾ ಒಂದು ಕಡೆ ಕುಳಿತಿದ್ದಾಗ, ಮತ್ತೊಂದು ಕಡೆ ಎಡಿಜಿಪಿ ಮನೋಜ್ ಅಬ್ರಹಾಂ ಟಿಪ್ಪು ಸುಲ್ತಾನ್ ಕತ್ತಿಯನ್ನು ಹಿಡಿದು ನಿಂತಿದ್ದ ಫೋಟೋ ಕೂಡ ಇತ್ತು. ಇವರಷ್ಟೇ ಅಲ್ಲ ಚಿತ್ರನಟ ಮೋಹನಲಾಲ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ.ಸುಧಾಕರನ್, ಈಗಿನ ಸಚಿವರಾದ ರೋಶಿ ಆಗಸ್ಟಿನ್, ಅಹಮ್ಮದ್ ದೇವರಕೋವಿಲ್, ಐಜಿಪಿ ಲಕ್ಷ್ಮಣ್ ಗುಗುಲ್ಲತ್, ನಿವೃತ್ತ ಐಜಿಪಿ ಎಸ್.ಸುರೇಂದ್ರನ್ ಹೀಗೆ ಹಲವು ಖ್ಯಾತನಾಮರು ಮ್ಯೂಸಿಯಂ ಭೇಟಿ ನೀಡಿದ್ದರ ಫೋಟೋಗಳಿದ್ದವು.
ವಿದೇಶಿ ಖಾತೆಯಲ್ಲಿ ಸಿಕ್ಕಿಬಿದ್ದ 2.6 ಲಕ್ಷ ಕೋಟಿ !
ಇದಲ್ಲದೆ, ದುಬೈನ ರಾಜ ವಂಶಸ್ಥರಿಗೆ ಅಪರೂಪದ ವಸ್ತುವೊಂದನ್ನು ಕೊಟ್ಟಿದ್ದು ಅವರು ಪ್ರತಿಯಾಗಿ ನೀಡಿದ್ದ ದೊಡ್ಡ ಕೊಡುಗೆ ಸೇರಿದಂತೆ 2.6 ಲಕ್ಷ ಕೋಟಿ ಬೆಲೆಯ ದೊಡ್ಡ ಸಂಪತ್ತು ವಿದೇಶಿ ವಿನಿಮಯ ಕಾನೂನಿನ ತಕರಾರಿನಲ್ಲಿ ಸಿಕ್ಕಿಬಿದ್ದಿದೆ. ವಿದೇಶಿ ಬ್ಯಾಂಕ್ ಎಚ್ ಎಸ್ ಬಿಸಿಯಲ್ಲಿ ಖಾತೆ ಇದ್ದು, ವಿದೇಶಿ ವಿನಿಮಯದ ಕಾಯ್ದೆಯಡಿ ಅದನ್ನು ತರಿಸಿಕೊಳ್ಳಲಾಗದೆ ಕಷ್ಟ ಪಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಇನ್ನೊಂದೆಡೆ ಕೊಚ್ಚಿ ಗ್ಯಾಸ್ ಪೈಪ್ ಲೈನ್ ನಲ್ಲಿ ತನ್ನ ಪಾಲುದಾರಿಕೆ ಇದ್ದು, ಅದರಲ್ಲಿ ಹಣ ಹೂಡಿದ್ದು ಇಕ್ಕಟ್ಟಲ್ಲಿದ್ದೇನೆ. ಮತ್ತೊಂದು ಕಡೆ, ಗಲ್ಫ್ ರಾಷ್ಟ್ರಗಳಲ್ಲಿ ಬಡ್ಡಿ ರಹಿತ ಸಾಲ ಸಿಗಲಿದ್ದು ವಿದೇಶಿ ಖಾತೆಯ ಸಮಸ್ಯೆ ಸರಿಯಾದ ಕೂಡಲೇ ಹಣ ಬರಲಿದೆ.. ಹೀಗೆಲ್ಲಾ ಯೂಟ್ಯೂಬ್ ನಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಇಷ್ಟೇ ಅಲ್ಲದೆ, ತಾನೊಬ್ಬ ಡಾನ್ ರೀತಿ ಫೋಸ್ ಕೊಟ್ಟು ತನ್ನ ಜೊತೆ ಕಟ್ಟುಮಸ್ತಾದ ಹುಡುಗರು ಮತ್ತು ಹುಡುಗಿಯರು ಗನ್ ಹಿಡಿದು ನಿಂತುಕೊಂಡಿರುವುದು, ದೊಡ್ಡ ಸೀಟಿನಲ್ಲಿ ಕುಳಿತು ಅಕ್ಕಪಕ್ಕದಲ್ಲಿ ಎರಡು ನಾಯಿಗಳು ದಾಳಿಗೆ ಸಿದ್ಧವಾಗಿರುವ ರೀತಿಯ ಫೋಟೋಗಳನ್ನು ತೋರಿಸಿಕೊಂಡು ತಾನೋಬ್ಬ ಹೈಲೆವೆಲ್ ಅಸಾಮಾನ್ಯ ಮನುಷ್ಯ ಅನ್ನುವ ರೀತಿ ಪೋಸು ಕೊಟ್ಟಿದ್ದ..
ಆದರೆ, ಇಂಥ ನಯವಂಚಕ ವ್ಯಕ್ತಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಸೆ.26ರಂದು ಆಲಪ್ಪುಳ ಜಿಲ್ಲೆಯಲ್ಲೇ ಬಂಧಿಸಿದ್ದಾರೆ. ಇಷ್ಟಾಗುತ್ತಲೇ ಸ್ವಯಂಘೋಷಿತ ಡಾನ್, ನಕಲಿ ವಜ್ರದ ಡೀಲರ್, ಆಂಟಿಕ್ ಪೀಸ್ ಡೀಲರ್ ಪೊಲೀಸ್ ಬಲೆಗೆ ಎನ್ನುವುದು ಕೇರಳದ ಟಿವಿಗಳಲ್ಲಿ ಹೆಡ್ ಲೈನ್ಸ್ ಆಗಿದ್ದವು. ಜಗತ್ತಿನ ಅಪರೂಪದ ವಸ್ತುಗಳನ್ನು ಕೊಡಿಸುತ್ತೇನೆಂದು ನಂಬಿಸಿ ಹಲವರಿಂದ 24 ಕೋಟಿ ರೂಪಾಯಿಗೂ ಹೆಚ್ಚು ಪಡೆದು ವಂಚಿಸಿದ್ದಾನೆಂದು ಸುದ್ದಿಯಾಗಿದೆ. ಮಾಹಿತಿ ಪ್ರಕಾರ, ಆರು ಮಂದಿ ಮೋನ್ಸನ್ ಮಾವುಂಕಾಲ್ ವಿರುದ್ಧ ಹತ್ತು ಕೋಟಿ ರೂಪಾಯಿ ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ಬಿಸಿನೆಸ್ ಪಾಲುದಾರಿಕೆಯೆಂದು ಹಣ ಪಡೆದಿದ್ದ. ಈಗ ಫಾರಿನ್ ಎಕ್ಸ್ ಚೇಂಜ್ ಸಮಸ್ಯೆಯಾಗಿದ್ದು, ಕೇಂದ್ರ ಸರಕಾರ ತನ್ನ ಹಣವನ್ನು ಬ್ಲಾಕ್ ಮಾಡಿದ್ದಾಗಿ ಹೇಳಿಕೊಂಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಒಬ್ಬ ದೂರುದಾರನ ಪ್ರಕಾರ, ಆತ ಎರ್ನಾಕುಲಂ ಜಿಲ್ಲೆಯ ಕಾಲೂರಿನಲ್ಲಿರುವ ಮೋನ್ಸನ್ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದ. ಮೋನ್ಸನ್ ಬಳಿಯಲ್ಲಿದ್ದ ಅಪರೂಪದ ವಸ್ತುಗಳನ್ನು ನೋಡಿ ಈತನೊಬ್ಬ ಪ್ರಭಾವಿ ವ್ಯಕ್ತಿಯೆಂದು ನಂಬಿದ್ದ. ವ್ಯವಹಾರಕ್ಕಾಗಿ 2017ರಿಂದ 2020ರ ನಡುವೆ ಹಲವಾರು ಬಾರಿ ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದು ನಯಾ ಪೈಸೆಯನ್ನೂ ಹಿಂತಿರುಗಿಸಿಲ್ಲ ಎನ್ನುತ್ತಿದ್ದಾನೆ. ಇದರ ಜೊತೆಗೆ ಮೋನ್ಸನ್, ಜಾಗತಿಕ ಶಾಂತಿ ಪ್ರತಿಷ್ಠಾನದ ಸದಸ್ಯನೆಂದು ಹೇಳಿಕೊಳ್ಳುತ್ತಿದ್ದ. ಅದಲ್ಲದೆ, ಕೇರಳಿಗರ ಅಂತಾರಾಷ್ಟ್ರೀಯ ಅಸೋಸಿಯೇಶನ್- ಪ್ರವಾಸಿ ಮಲಯಾಳಿ ಅಸೋಸಿಯೇಶನ್ ಪೋಷಕ ಸದಸ್ಯನೂ ಆಗಿರುವುದಾಗಿ ಹೇಳಿಕೊಂಡಿದ್ದ. ಇಂಥ ದೊಡ್ಡ ಹುದ್ದೆಗಳ ಬಗ್ಗೆ ಹೇಳಿಕೊಂಡಿದ್ದರಿಂದ ಪ್ರಭಾವಿಗಳೂ ಈತನ ಮಾತಿಗೆ ಮರುಳಾಗುತ್ತಿದ್ದರು.
ಮೋನ್ಸನ್ ಮಾವುಂಕಾಲ್ ಬಂಧನ ಅನ್ನುವ ಸುದ್ದಿಯ ಬೆನ್ನಲ್ಲೇ ಆತನಿಗೆ ಸೇರಿದ್ದು ಎನ್ನಲಾದ ಕೊಚ್ಚಿಯ ಮ್ಯೂಸಿಯಂನತ್ತ ಪೊಲೀಸರು ಮತ್ತು ಮಾಧ್ಯಮಗಳ ಕಣ್ಣು ಬಿದ್ದಿದೆ. ಆತ ಹೇಳಿಕೊಳ್ಳುತ್ತಿದ್ದ ಅಪರೂಪದ ವಸ್ತುಗಳು, ಪ್ರಖ್ಯಾತ ಕಲಾವಿದರಾದ ಲಿಯೋನಾರ್ಡೋ ಡವಿನ್ಸಿ ಮತ್ತು ರಾಜಾ ರವಿವರ್ಮ ಬಿಡಿಸಿದ್ದ ಚಿತ್ರಗಳು, ಬೈಬಲ್ ನ ಹಳೆ ಒಡಂಬಡಿಕೆಯ ಹಳೆಕಾಲದ ಪ್ರತಿಗಳು, ನಾರಾಯಣಗುರು ಬಳಸುತ್ತಿದ್ದ ನೈಜ ಬೆತ್ತ, ಮೈಸೂರು ರಾಜರ ಕಾಲದಲ್ಲಿ ಆಗಿದ್ದ ಒಪ್ಪಂದದ ಒರಿಜಿನಲ್ ಪ್ರತಿಗಳು, ಬೈಬಲ್ಲಿನ ಮೊದಲ ಮುದ್ರಿತ ಪ್ರತಿ, ಸದ್ದಾಮ್ ಹುಸೇನ್ ಬಳಸುತ್ತಿದ್ದ ಖುರಾನ್ ಪುಸ್ತಕ ಹೀಗೆ ಆತ ಹೇಳಿಕೊಂಡಿದ್ದ ಪ್ರವರಗಳನ್ನು ಹುಡುಕಾಡಲು ಆರಂಭಿಸಿದ್ದಾರೆ.
ರಾಜಕಾರಣಿಗಳು, ಸೆಲೆಬ್ರಿಟಿಗಳನ್ನು ಮುಂದಿಟ್ಟು ವಂಚನೆ
ಆತನ ಹಿನ್ನೆಲೆ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಂಟನ್ನು ನೋಡಿದರೆ, ಅವರನ್ನು ಬಳಸ್ಕೊಂಡು ಮೋನ್ಸನ್ ಮಾವುಂಕಾಲ್ ತನ್ನನ್ನು ತಾನು ಮಾರ್ಕೆಟ್ ಮಾಡಿಕೊಳ್ಳುತ್ತಿದ್ದ ಅನ್ನೋದು ಸತ್ಯ. ಪ್ರಭಾವಿಗಳು, ಸೆಲೆಬ್ರಿಟಿಗಳನ್ನು ತನ್ನ ಮ್ಯೂಸಿಯಂಗೆ ಕರೆಯಿಸಿ ಫೋಟೋ ತೆಗೆಸ್ಕೊಂಡು ಯೂಟ್ಯೂಬ್ ನಲ್ಲಿ ಹಾಕಿಸಿ, ಅಭಿಮಾನಿಗಳನ್ನು ನಂಬಿಸುತ್ತಿದ್ದ. ತನ್ನ ಬಗ್ಗೆ ಕಪೋಲಕಲ್ಪಿತ ಕತೆಗಳನ್ನು ಕಟ್ಟಿ ಜನರನ್ನು ನಂಬಿಸುತ್ತಿದ್ದ. ಇದೇ ರೀತಿಯ ಆರೋಪವನ್ನು ಒಬ್ಬ ದೂರುದಾರನೂ ಮಾಡಿದ್ದಾನೆ. ಕೇರಳ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್, 2018ರ ನವೆಂಬರ್ ನಲ್ಲಿ ಎರ್ನಾಕುಲಂ ಜಿಲ್ಲೆಯ ಕಾಳೂರಿನ ಮನೆಗೆ ತೆರಳಿದ್ದರು. ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಿ, ಆತನ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ಕೊಟ್ಟಿದ್ದಾಗಿ ಮೋನ್ಸನ್ ಹೇಳಿಕೊಂಡಿದ್ದ. ಸುಧಾಕರನ್ ಮನೆಯಲ್ಲಿದ್ದಾಗಲೇ 25 ಲಕ್ಷ ಹಣವನ್ನು ವ್ಯವಹಾರ ನಿಮಿತ್ತ ಅವರ ಸಮ್ಮುಖದಲ್ಲಿಯೇ ಮೋನ್ಸನ್ ಕೈಗೆ ನೀಡಿದ್ದೆ ಎಂದು ದೂರುದಾರ ಹೇಳಿದ್ದಾನೆ. ಸುಧಾಕರನ್ ಮೇಲಿನ ನಂಬಿಕೆಯಿಂದ ಹಣ ಕೊಟ್ಟಿದ್ದಾಗಿ ಹೇಳುತ್ತಿದ್ದಾನೆ. ಆದರೆ, ಸುಧಾಕರನ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಮೋನ್ಸನ್ ಬಗ್ಗೆ ಗೊತ್ತು. ಆದರೆ, ಆತನ ವ್ಯವಹಾರದ ವಿಚಾರ ತನಗೇನು ಗೊತ್ತಿಲ್ಲ. ತನಗೂ ಆತನಿಗೂ ಸಂಬಂಧವೇ ಇಲ್ಲ ಎಂದಿದ್ದಾರೆ.
ಇದಲ್ಲದೆ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಲೇಖಾ, ಸಂಸದ ಹಿಬಿ ಈಡನ್, ನಿವೃತ್ತ ಮುಖ್ಯ ಕಾರ್ಯದರ್ಶಿ ಜಿಜಿ ಥಾಂಪ್ಸನ್, ಮಾಜಿ ಕಾಂಗ್ರೆಸ್ ಉಪಾಧ್ಯಕ್ಷ ಲಲ್ಲಿ ವಿಲ್ಸನ್, ಮಾಜಿ ಸಚಿವ ಮೋನ್ಸ್ ಜೋಸೆಫ್ ಕೂಡ ತನ್ನ ಮನೆಗೆ ಬಂದಿರುವುದನ್ನು ಫೋಟೋದಲ್ಲಿ ಮೋನ್ಸನ್ ತೋರಿಸಿಕೊಂಡಿದ್ದ ಎಂದು ದೂರುದಾರ ಆರೋಪಿಸಿದ್ದಾನೆ. ಈಗ ಮೋನ್ಸನ್ ಮಾವುಂಕಾಲ್ ಅರೆಸ್ಟ್ ಆಗುತ್ತಲೇ ನಿವೃತ್ತ ಅಧಿಕಾರಿ ಜಿಜಿ ಥಾಂಪ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಆಗೋದಕ್ಕೂ ಮೊದಲು ಪತ್ನಿಯ ಜೊತೆಗೆ ಆತನ ಮ್ಯೂಸಿಯಂ ನೋಡಲು ತೆರಳಿದ್ದೆ. ಆದರೆ, ಆತನ ಮಾತುಗಳ ನೈಜತೆ ಬಗ್ಗೆ ಆಗಲೇ ಸಂಶಯ ಬಂದಿತ್ತು ಎಂದು ಹೇಳಿದ್ದಾರೆ.
2019ರಲ್ಲಿ ತನ್ನ ವಿದೇಶಿ ಫಂಡ್ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾಗಿಯೂ ಮೋನ್ಸನ್ ಮಾವುಂಕಾಲ್ ಹೇಳಿದ್ದ. ಮೋದಿ ತನಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದ್ದಾಗಿ ಮತ್ತೊಬ್ಬ ದೂರುದಾರ ಹೇಳಿದ್ದಾನೆ. ಮೋಸಕ್ಕೊಳಗಾದ ಯಾಕೂಬ್ ಪುರಯಿಲ್, ಅನೂಪ್ ಅಹ್ಮದ್, ಸಲೀಂ ಎಡತ್ತಿಲ್, ಎಂ.ಟಿ.ಶಮೀರ್, ಸಿದ್ದಿಕ್ ಪುರಯಿಲ್, ಶನ್ನಿಮೋನ್ ಎಂಬ ಆರು ಮಂದಿ ಸದ್ಯಕ್ಕೆ ಮೋನ್ಸನ್ ವಿರುದ್ಧ ಕ್ರೈಮ್ ಬ್ರಾಂಚ್ ನಲ್ಲಿ ದೂರು ದಾಖಲಿಸಿದ್ದಾರೆ. ಸ್ವಯಂಘೋಷಿತ ಡಾನ್ ಕಂ ವಜ್ರದ ಡೀಲರನ ನೈಜ ಕತೆ ಹೊರಬೀಳುತ್ತಲೇ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಕೇರಳ ಸರಕಾರದ ವಿರುದ್ಧ ಆರೋಪ ಹೊರಿಸಿದ್ದಾರೆ. ಮೋನ್ಸನ್, ರಾಜ್ಯ ಸರಕಾರದ ಅಧಿಕಾರಿಗಳು, ರಾಜಕಾರಣಿಗಳ ನಂಟು ಇಟ್ಟುಕೊಂಡೇ ಕೋಟ್ಯಂತರ ರೂಪಾಯಿಯನ್ನು ಪಡೆದು ವಂಚಿಸಿದ್ದಾನೆ. ಕೇರಳ ಪೊಲೀಸರಿಂದ ಈ ಪ್ರಕರಣದಲ್ಲಿ ನ್ಯಾಯ ಕೊಡಿಸುವುದು ಸಾಧ್ಯವಿಲ್ಲ. ಪ್ರತ್ಯೇಕ ತನಿಖಾ ತಂಡಕ್ಕೆ ಈ ಪ್ರಕರಣವನ್ನು ಒಪ್ಪಿಸಬೇಕು. ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
A 52-year-old YouTuber was arrested for allegedly swindling crores of rupees by selling fake antiquities in Kerala's Alappuzha district. Monson Mavunkal, a resident of Cherthala, was arrested from Alappuzha district by the crime branch team on Sunday. Mavunkal, the Kerala-based YouTuber, had pretended to be a collector of artefacts and relics over the last several years and cheated people to the tune of Rs 10 crore, police said. Claiming that he has in possession of rarest of rare artefacts like Tipu Sultan's throne, Moses' staff, Aurangzeb' ring, Bhagavad Gita copy of Chhatrapati Shivaji, fingernail of St Antony and others, Monson Mavunkal had allegedly swindled money from people.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm