ಬ್ರೇಕಿಂಗ್ ನ್ಯೂಸ್
10-09-20 04:30 pm Bangalore Correspondent ಕ್ರೈಂ
ಬೆಂಗಳೂರು, ಸೆಪ್ಟೆಂಬರ್ 10: ಡಾಕ್ಟರ್ ಅಜೀಜ್ ಪಾಷಾ ಜತೆ ನಟಿ ಸಂಜನಾ ಗಲ್ರಾನಿ ಮದುವೆ ಆಗಿದ್ದಾರಾ ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಫೋಟೋವೊಂದು ವೈರಲ್ ಆಗಿದೆ.
ನನಗಿನ್ನೂ ಮದುವೆ ಆಗಿಲ್ಲ ಎಂದು ಸಂಜನಾ ಹೇಳುತ್ತಿದ್ದರು. ಡ್ರಗ್ಸ್ ಕೇಸ್ನಲ್ಲಿ ಸಂಜನಾ, ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಪಡುತ್ತಿದ್ದಂತೆ ಅವರ ಮದುವೆ ಕುರಿತಾಗಿ ತರಹೇವಾರಿ ಬಿಸಿಬಿಸಿ ಸುದ್ದಿಗಳು ಹರಿದಾಡಿತ್ತು. ಸಂಜನಾ ಮತ್ತು ಅಜೀಜ್ ಪಾಷಾ ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದರು ಎಂಬ ಸುದ್ದಿಯೂ ಹಬ್ಬಿತ್ತು. ಇದೀಗ ಅವರಿಬ್ಬರೂ ಮದುಮಕ್ಕಳ ಉಡುಗೆತೊಟ್ಟು ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ವೈರಲ್ ಆಗಿದೆ.
ಡ್ರಗ್ಸ್ ಮಾಫಿಯಾದಲ್ಲಿ ಸಂಜನಾ ಇರುವುದಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕಿಡಿಕಾರಿದ್ದರು. ತನ್ನ ಹೆಸರನ್ನು ಡ್ರಗ್ಸ್ ಪ್ರಕರಣದಲ್ಲಿ ಪ್ರಸ್ತಾಪಿಸಿದ್ದಕ್ಕೆ ಮೂರು ದಿನಗಳ ಹಿಂದಷ್ಟೇ ಪ್ರಶಾಂತ್ ಸಂಬರಗಿ ವಿರುದ್ಧ ಮಾಧ್ಯಮಗಳ ಮುಂದೆ ಕೆಂಡಾಮಂಡಲವಾದ ನಟಿ ಸಂಜನಾ, ‘ನಾನಿನ್ನೂ ಮದುವೆ ಆಗಿಲ್ಲ. ಮದುವೆ ಆಗದ ಹೆಣ್ಣುಮಗಳ ಬಗ್ಗೆ ಹೀಗೆಲ್ಲ ಮಾತಾಡೋದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದರು. ಬಳಿಕ ಸಂಜನಾ ಅರೆಸ್ಟ್ ಆಗುತ್ತಿದ್ದಂತೆ ಡಾ.ಅಜೀಜ್ ಪಾಷಾ ಜತೆ ಸಂಜನಾ ಆಪ್ತತೆ, ಸಂಜನಾ ಪಾಲ್ಗೊಳ್ಳುತ್ತಿದ್ದ ಎಲ್ಲ ಪಾರ್ಟಿಯಲ್ಲೂ ಆ ವೈದ್ಯ ಪಾಲ್ಗೊಳ್ಳುತ್ತಿದ್ದರು ಎಂಬುದರ ಬಗ್ಗೆಯೂ ಸುದ್ದಿಯಾಗಿತ್ತು. ಇದೀಗ ಅವರಿಬ್ಬರೂ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ ಆಗಿದ್ದು, ಹಲವು ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಬಹುಭಾಷಾ ನಟಿ ಸಂಜನಾ ಗಲ್ರಾನಿ ವೈದ್ಯ ಅಜೀಜ್ ಪಾಷಾರನ್ನು ಗುಪ್ತವಾಗಿ ಮದುವೆ ಆಗಿದ್ದಾರಾ? ಎಂಬ ಚರ್ಚೆ ಎಲ್ಲೆಡೆ ಆಗುತ್ತಿದೆ. ಗಂಡನ ಬಗ್ಗೆ ಸಂಜನಾ ಯಾಕೆ ವಿಷಯ ಮುಚ್ಚಿಟ್ಟಿದ್ರು, ತಾನು ಇನ್ನೂ ಮದುವೆಯನ್ನೇ ಆಗಿಲ್ಲ ಎಂದಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ರಿಯಲ್ ಗಂಡನ ಬಗ್ಗೆ ರೀಲ್ ಬಿಟ್ಟಿದ್ಯಾಕೆ? ಎಂದು ಅಭಿಮಾನಿಗಳು, ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಫೋಟೋ ಅಸಲಿಯತ್ತಿನ ಬಗ್ಗೆ ಸ್ವತಃ ನಟಿಯೇ ಉತ್ತರಿಸಬೇಕಿದೆ.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm