ಗಾಂಧೀಜಿ ಫೋಟೊ ಎಡಿಟ್ ಮಾಡಿ ವಿಕೃತಿ ; ಸಜ್ಜಿಗೆ, ಬಜಿಲ್ ಸ್ಟೇಟಸ್ ಹಾಕಿದ್ದ ಯುವಕನ ವಿರುದ್ಧ ಕೊಣಾಜೆ ಠಾಣೆಗೆ ದೂರು

02-10-21 04:14 pm       Mangaluru Correspondent   ಕ್ರೈಂ

ಗಾಂಧೀಜಿ ಯುವತಿಯೊಂದಿಗಿದ್ದ ಹಳೆಯ ಫೋಟೊ ಒಂದನ್ನು ತುಳುವಿನ ಸಜ್ಜಿಗೆ, ಬಜಿಲ್ ಹಾಡಿಗೆ ಹೆಜ್ಜೆ ಹಾಕಿದ ರೀತಿ ವೀಡಿಯೊ‌ ಸೃಷ್ಟಿಸಿ ವಿಕೃತಿ ಮೆರೆದ ಕಿಡಿಗೇಡಿಯ ವಿರುದ್ಧ ಕೊಣಾಜೆ ಠಾಣೆಗೆ ಡಿವೈಎಫ್ ಐ ಕಾರ್ಯಕರ್ತರು ದೂರು ನೀಡಿದ್ದಾರೆ. 

ಉಳ್ಳಾಲ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ದಿನವೇ ಗಾಂಧೀಜಿ ಯುವತಿಯೊಂದಿಗಿದ್ದ ಹಳೆಯ ಫೋಟೊ ಒಂದನ್ನು ತುಳುವಿನ ಸಜ್ಜಿಗೆ, ಬಜಿಲ್ ಹಾಡಿಗೆ ಹೆಜ್ಜೆ ಹಾಕಿದ ರೀತಿ ವೀಡಿಯೊ‌ ಸೃಷ್ಟಿಸಿ ಅದನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್ ಐ ಕಾರ್ಯಕರ್ತರು ದೂರು ನೀಡಿದ್ದಾರೆ. 

ದೇಶದೆಲ್ಲೆಡೆ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಜನ್ಮ ದಿನವನ್ನ ಆಚರಿಸುತ್ತಿದ್ದರೆ, ಹರೇಕಳ ಗ್ರಾಮದ ಪ್ರಜ್ವಲ್ ಎಂಬ ಯುವಕ ತನ್ನ ಮೊಬೈಲ್ ನಲ್ಲಿ ಗಾಂಧೀಜಿ ಕುರಿತಾಗಿದ್ದ ಎಡಿಟೆಡ್ ವೀಡಿಯೋವನ್ನ ವಾಟ್ಸಪ್ ಸ್ಟೇಟಸ್ ಹಾಕಿ, ವಿಕೃತಿ ಮೆರೆದಿರುವುದಾಗಿ ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ. 

ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನ ಅವರ ಜನ್ಮದಿನದಂದೇ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಈ ಕೃತ್ಯದಿಂದ ಪ್ರದೇಶದಲ್ಲಿ ಶಾಂತಿ ಕದಡುವ ಸ್ಥಿತಿ ಉಂಟಾಗಲಿದ್ದು ಸಂಘರ್ಷಕ್ಕೆ ಎಡೆಮಾಡಿಕೊಡುವ ಅವಕಾಶಗಳು ಬಹಳಷ್ಟು ಇದೆ. ಈತ ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದನೆಂದರೆ ದೇಶವನ್ನೇ ಅವಮಾನಿಸಿದಂತೆ. ಹಾಗಾಗಿ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಡಿವೈಎಫ್ ಐ ನಿಯೋಗ ಎಚ್ಚರಿಸಿದೆ. 

ದೂರು ನೀಡಿದ ನಿಯೋಗದಲ್ಲಿ DYFI ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಮುಖಂಡರಾದ ಅಶ್ರಪ್ ಹರೇಕಳ, ರಿಝ್ವಾನ್ ಖಂಡಿಗ, ರಶೀದ್, ಬದ್ರುದ್ದೀನ್, ಇಸ್ಮಾಯಿಲ್ ಖಂಡಿಗ ಮೊದಲಾದವರು ಇದ್ದರು.

Mangalore Gandhi photo morphed with woman and posted on status complaint filed at Konaje station. Such a status was posted on Whatsapp and had gone viral on social media. The status was put today as a mark of Gandhi Jayanti.