ಬ್ರೇಕಿಂಗ್ ನ್ಯೂಸ್
04-10-21 05:24 pm Headline Karnataka News Network ಕ್ರೈಂ
ಬೆಳಗಾವಿ, ಅ.4: ಹಿಂದು ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಯುವಕನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಬೆಳಗಾವಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಕರಣದಲ್ಲಿ ಪೊಲೀಸರು ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರೂ, ಆರೋಪಿಗಳನ್ನು ಬಂಧಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. 24 ವರ್ಷದ ಅರ್ಬಾಜ್ ಅಫ್ತಾಬ್ ಮುಲ್ಲಾ ಎಂಬ ಯುವಕನ ಶವ ಸೆ.28ರಂದು ರೈಲ್ವೇ ಹಳಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಕಂಡುಬಂದಿತ್ತು. ಆದರೆ, ಶವದ ಕೈಯನ್ನು ಹಿಂಬದಿಗೆ ಕಟ್ಟಿದ ಸ್ಥಿತಿಯಲ್ಲಿದ್ದುದು ಮತ್ತು ತಲೆಗೆ ಇರಿತದ ಗಾಯಗಳಿದ್ದುದು ಸಾವಿನ ಬಗ್ಗೆ ಸಂಶಯ ಮೂಡಿಸಿತ್ತು. ಆನಂತರ ಪೋಸ್ಟ್ ಮಾರ್ಟಂ ವರದಿಯೂ ಕೊಲೆಯ ಬಗ್ಗೆ ಅನುಮಾನಿಸಿದ್ದರಿಂದ ರೈಲ್ವೇ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.
ಬೆಳಗಾವಿ ಜಿಲ್ಲೆಯ ಆಜಾಮ್ ನಗರ್ ನಿವಾಸಿಯಾಗಿದ್ದ ಅರ್ಬಾಜ್, ಸಿವಿಲ್ ಇಂಜಿನಿಯರ್ ಪದವೀಧರನಾಗಿದ್ದು ಬೆಳಗಾವಿ ಪೇಟೆಯಲ್ಲಿ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ. ರೈಲ್ವೇ ಹಳಿಯಲ್ಲಿ ಶವ ದೊರೆತಿದ್ದರೂ, ತಲೆಗೆ ಇರಿತದ ಗಾಯಗಳಿದ್ದರಿಂದ ಪೋಸ್ಟ್ ಮಾರ್ಟಂ ವರದಿ ಕೊಲೆಯ ಬಗ್ಗೆ ಅನುಮಾನಿಸಿತ್ತು. ಹೀಗಾಗಿ ಯುವಕನನ್ನು ಯಾರೋ ಕೊಂದು ಹಾಕಿದ್ದಾರೆಂಬ ಸಂಶಯ ಬಂದಿತ್ತು. ಇದೇ ವೇಳೆ, ಆತನ ತಾಯಿ ನಜೀಮಾ ಶೇಖ್, ಅರ್ಬಾಜ್ ಪ್ರೀತಿಸುತ್ತಿದ್ದ ಯುವತಿಯ ತಂದೆ ಸೇರಿ ಮೂವರ ಬಗ್ಗೆ ಸಂಶಯಿಸಿ ಪೊಲೀಸ್ ದೂರು ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ರೈಲ್ವೇ ವಿಭಾಗದ ಎಸ್ಪಿ ಸಿರಿ ಗೌರಿ, ತಾಯಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲು ಮಾಡಿದ್ದೇವೆ. ಯುವಕ ರೈಲು ಬಡಿದು ಮೃತಪಟ್ಟಿದ್ದು ಅಲ್ಲವೆಂದಾದರೆ, ಬೆಳಗಾವಿ ಜಿಲ್ಲಾ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡುತ್ತೇವೆ. ಅವರೇ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಭಾನುವಾರದ ವರೆಗೂ ಪ್ರಕರಣವನ್ನು ಅಧಿಕೃತವಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರ ಮಾಡಿರಲಿಲ್ಲ ಎಂದು ಇಲ್ಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಅರ್ಬಾಜ್ ತಾಯಿ ನಜೀಮಾ ಶೇಖ್ ಈ ಬಗ್ಗೆ ಪತ್ರಿಕೆಯೊಂದಕ್ಕೆ ಮಾತನಾಡಿದ್ದಾರೆ. ಎರಡು ವರ್ಷಗಳ ಹಿಂದೆಯೇ ನನಗೆ ಮತ್ತು ಹುಡುಗಿಯ ಕುಟಂಬಕ್ಕೆ ಇವರಿಬ್ಬರ ಪ್ರೀತಿ ಬಗ್ಗೆ ಗೊತ್ತಿತ್ತು. ನಾವು ಮೊದಲು ಖಾನಾಪುರ್ ನಲ್ಲಿ ವಾಸವಿದ್ದೆವು. ಆನಂತರ ಆಕ್ಷೇಪ ಬಂದ ನಂತರ, ನಾನೇ ಖುದ್ದಾಗಿ ಹುಡುಗಿ ತಾಯಿ ಬಳಿ ಮಾತನಾಡಿದ್ದೆ. ಹುಡುಗಿಯನ್ನು ಅರ್ಬಾಜ್ ಜೊತೆ ಭೇಟಿಯಾಗದಂತೆ ನೋಡಿಕೊಳ್ಳಿ ಎಂದಿದ್ದೆ. ಇದೇ ಮಾತನ್ನು ಅರ್ಬಾಜ್ ಬಳಿಯೂ ಹೇಳಿ, ನೀನು ಆಕೆಯನ್ನು ಬಿಟ್ಟುಬಿಡು ಎಂದಿದ್ದೆ. ಈ ನಡುವೆ, ಹುಡುಗಿ ಮನೆಯವರಿಂದ ನಮಗೆ ಬೆದರಿಕೆ ಬಂದಿದ್ದು ನಾವು ವಾಸ್ತವ್ಯವನ್ನು ಬೆಳಗಾವಿ ನಗರಕ್ಕೆ ಬದಲಾಯಿಸಿದ್ದೆವು ಎಂದಿದ್ದಾರೆ.
ನಜೀಮಾ ಶೇಖ್ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಮೂರು ವರ್ಷಗಳ ಹಿಂದೆ ಗಂಡನನ್ನು ಕಳಕೊಂಡಿದ್ದರು. ಅವರ ಮಗಳು ಏರೋ ನಾಟಿಕಲ್ ಇಂಜಿನಿಯರಿಂಗ್ ಮಾಡಿದ್ದು, ಲಂಡನಲ್ಲಿ ಉದ್ಯೋಗದಲ್ಲಿದ್ದಾರೆ. ಸೆ.28ರಂದು ಮಗ ಅರ್ಬಾಜ್ ಕಾಣೆಯಾಗುವುದಕ್ಕಿಂತ ಮೊದಲು ತಾಯಿ, ಮಗನಿಗೆ ಮತ್ತೆ ಬೆದರಿಕೆ ಒಡ್ಡಲಾಗಿತ್ತು. ಹಿಂದು ಸಂಘಟನೆ ಕಾರ್ಯಕರ್ತರಾದ ಮಹಾರಾಜ್ ಮತ್ತು ಇನ್ನೊಬ್ಬ ಬಿರ್ಜೆ ಎನ್ನುವಾತ ಕರೆ ಮಾಡಿ, ಲವ್ ಮ್ಯಾಟರನ್ನು ಇತ್ಯರ್ಥ ಮಾಡಲು ಖಾನಾಪುರಕ್ಕೆ ಬರುವಂತೆ ಹೇಳಿದ್ದರು. ನಾವು, ಸೆ.26ರಂದು ಖಾನಾಪುರಕ್ಕೆ ಹೋಗಿದ್ದೆವು. ಅಲ್ಲಿ ಅವರ ಎದುರಲ್ಲೇ ಮಗನ ಫೋನಿಂದ ಹುಡುಗಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ನಮ್ಮ ಕೈಯಿಂದ ಸ್ವಲ್ಪ ಹಣವನ್ನೂ ಪಡೆದುಕೊಂಡಿದ್ದರು. ಆನಂತರ, ತಾಯಿ, ಮಗನನ್ನು ಮುಗಿಸಲು ಒಂದು ಸಾವಿರ ಜನ ರೆಡಿಯಾಗಿದ್ದಾರೆಂದು ತಿಳಿಸಿದ್ದರು. ಆದರೆ, ನಾನು ಅವರಲ್ಲಿ ನಮ್ಮನ್ನು ಬದುಕಲು ಬಿಡಿ. ನಿಮ್ಮಿಂದ ದೂರ ಇರುತ್ತೇವೆ. ದೂರದಲ್ಲಿಯೇ ಮನೆ ಮಾಡುತ್ತೇವೆ ಎಂದು ಕೇಳಿಕೊಂಡಿದ್ದೆ. ಅನಂತರ, ಅರ್ಬಾಜ್ ಹಳೆ ಸಿಮ್ ಅನ್ನು ಎಸೆದು ಬಿಟ್ಟು, ಹೊಸ ಸಿಮ್ ಪಡೆದಿದ್ದ ಎಂದು ನಜೀಮಾ ಹೇಳಿದರು.
ಸೆ.28ರಂದು ಪಾಸ್ಪೋರ್ಟ್ ವಿಚಾರದಲ್ಲಿ ಗೋವಾಕ್ಕೆ ತೆರಳಿದ್ದೆ. ಅಂದು ಸಂಜೆ ವರೆಗೂ ಮಗ ಮನೆಯಲ್ಲೇ ಇದ್ದ. ಸಂಜೆ 5 ಗಂಟೆಗೆ ಫೋನ್ ಮಾಡಿ, ನೀನು ಎಷ್ಟು ಗಂಟೆಗೆ ಮನೆ ತಲುಪುತ್ತೀಯಾ ಎಂದು ಕೇಳಿದ್ದ. ಏಳು ಗಂಟೆ ಆಗಬಹುದು ಎಂದು ಹೇಳಿ ಫೋನ್ ಇಟ್ಟಿದ್ದೆ. ಮಗನ ಬಗ್ಗೆ ಚಿಂತೆಯಾಗಿ, ಮನೆಯ ಒಳಗೇ ಇರು ಎಂದು ಹೇಳಿದ್ದೆ. ಬಳಿಕ ನಾನು ಮನೆಗೆ ತಲುಪಿದಾಗ, ಮಗ ಇರಲಿಲ್ಲ. ಮರುದಿನ ಪೊಲೀಸರು ಫೋನ್ ಮಾಡಿದಾಗಲೇ, ಮಗ ಸತ್ತಿದ್ದಾನೆಂದು ತಿಳಿದಿದ್ದು ಎಂದು ನೋವು ಹೇಳಿಕೊಂಡರು ನಜೀಮಾ. ಪೊಲೀಸರಿಗೆ ನೀಡಿದ ದೂರಿನಲ್ಲಿ ನಜೀಮಾ ಶೇಖ್, ಮೂವರ ಬಗ್ಗೆ ಸಂಶಯಪಟ್ಟಿದ್ದರು. ಹುಡುಗಿಯ ತಂದೆ, ಹಿಂದು ಸಂಘಟನೆಯ ಮಹಾರಾಜ್ ಮತ್ತು ಇನ್ನೊಬ್ಬ ಬಿರ್ಜೆ ಎಂದು ಹೇಳಿಕೊಂಡ ವ್ಯಕ್ತಿಯ ಬಗ್ಗೆ ಹೇಳಿದ್ದರು.
ಅರ್ಬಾಜ್ ಸಂಬಂಧಿಕರ ಪ್ರಕಾರ, ಬೆದರಿಕೆ ಒಡ್ಡಿದವರು ಶ್ರೀರಾಮ ಸೇನೆಯ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ. ಅಲ್ಲದೆ, ಅರ್ಬಾಜ್ ಜೊತೆ ಸೆಟ್ಲ್ ಮೆಂಟ್ ಮಾತುಕತೆ ಬಳಿಕ ಹಣ ಕೇಳಿದ್ದರು ಎನ್ನಲಾಗಿದೆ. ತನ್ನಲ್ಲಿದ್ದ ವೋಕ್ಸ್ ವೇಗನ್ ಕಾರನ್ನು 90 ಸಾವಿರಕ್ಕೆ ಮಾರಿ ಹಣ ಕೊಡುತ್ತೇನೆ ಎಂದು ಹೇಳಿದ್ದ. ಈ ನಡುವೆ, ಆತನೇ ಇಲ್ಲವಾಗಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದೇವೆ, ರೈಲ್ವೇ ಇಲಾಖೆಯಿಂದ ಇನ್ನೂ ಕೇಸ್ ಫೈಲ್ ಬಂದಿಲ್ಲ ಎನ್ನುತ್ತಿದ್ದಾರೆ.
A 24-year-old youth, whose body was found on the railway tracks in Belagavi on September 28, is now suspected to have been murdered over an inter-faith relationship. Though Arbaz Aftab Mullah’s body was found in a mutilated state, the investigations, including a post-mortem procedure, have revealed it to be a case of murder, police sources said, adding that they are looking closely at a relationship that the victim had with a Hindu girl over the last couple of years.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm