ಬ್ರೇಕಿಂಗ್ ನ್ಯೂಸ್
04-10-21 05:59 pm Headline Karnataka News Network ಕ್ರೈಂ
Photo credits : Representational
ಶಿವಮೊಗ್ಗ, ಅ.4: ಆಯುರ್ವೇದಿಕ್ ಉತ್ಪನ್ನ ಅಮೃತ್ ನೋನಿ ಬ್ರಾಂಡ್ ಹೆಸರಿನ ಔಷಧಿಯನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ.
ಲಕ್ಷಾಂತರ ಮೌಲ್ಯದ ನಕಲಿ ಅಮೃತ್ ನೋನಿ ಔಷಧಿ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 31 ಬಾಕ್ಸ್ ನಲ್ಲಿ ಇಡಲಾಗಿದ್ದ ಸುಮಾರು ಏಳು ಲಕ್ಷ ಮೌಲ್ಯದ 1100 ನಕಲಿ ನೋನಿ ಔಷಧಿ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ನಕಲಿ ಅಮೃತ್ ನೋನಿಯನ್ನು ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನ ಬಂದಿತ್ತು. ಈ ಬಗ್ಗೆ ಅಮೃತ್ ನೋನಿ ಕಂಪನಿಯ ವ್ಯಾಲ್ಯು ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ್ ನಾಡಿಗ್ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಾರ್ನಮಿ ಬೈಲಿನಲ್ಲಿರುವ ಅಶೋಕ್ ಎಂಬವರಿಗೆ ಸೇರಿದ ಫಾರ್ಮಾದಲ್ಲಿ ನಕಲಿ ನೋನಿ ಔಷಧಿಗಳಿರುವ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಡಿಎಸ್ಪಿ ಪ್ರಶಾಂತ್ ಮುನ್ನೋಳಿ ಮತ್ತು ದೊಡ್ಡಪೇಟೆ ಇನ್ಸ್ ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದ ತಂಡ ದಾಳಿ ನಡೆಸಿದ್ದು 31 ಬಾಕ್ಸ್ ನಕಲಿ ನೋನಿ ಔಷಧಿಯನ್ನು ವಶಪಡಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಅಮೃತ್ ನೋನಿ ಔಷಧಿಯ ಬ್ರಾಂಡಿಗೂ ಖದೀಮರು ಕನ್ನ ಹಾಕಿರುವುದು ಈ ಮೂಲಕ ಬಯಲಾಗಿದೆ. ಫಾರ್ಮಾಸಿಸ್ಟ್ ಅಶೋಕ್, ನಕಲಿ ಅಮೃತ್ ನೋನಿ ಔಷಧಿಯನ್ನು ಚಂಡೀಗಢದಿಂದ ತರಿಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಚಂಡೀಗಢದಲ್ಲಿ ಯಾರು ನಕಲಿ ಔಷಧಿ ತಯಾರಿಸುತ್ತಿದ್ದಾರೆ, ಯಾರು ಪೂರೈಕೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
Amruth Noni is said to be a fake health product Police bust fake factory in Chandigarh. 1100 bottles Amruth nony products seized in Shimoga for sale that was kept illegally.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 08:56 pm
Mangalore Correspondent
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
Mangalore, Dharmasthala Case, SIT, whistle bl...
26-07-25 10:05 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm