ಬ್ರೇಕಿಂಗ್ ನ್ಯೂಸ್
05-10-21 04:24 pm Mangaluru Correspondent ಕ್ರೈಂ
ಉಳ್ಳಾಲ, ಅ.5: ಬಸ್ಸಿನಿಂದ ಇಳಿದು ಮನೆ ಕಡೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಐ ಲವ್ ಯೂ ಅಂತ ಹೇಳಿ ಕೈ ಎಳೆದು ಅಪ್ಪಿಕೊಳ್ಳಲೆತ್ನಿಸಿದ ಅನ್ಯಕೋಮಿನ ಯುವಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದ ಘಟನೆ ಹರೇಕಳ ಗ್ರಾಮದಲ್ಲಿ ನಡೆದಿದೆ.
ಅಡ್ಯಾರ್ ಕಣ್ಣೂರು ನಿವಾಸಿ ಯಾಕೂಬ್ (43) ಬಂಧಿತ ಕಾಮುಕ. ವಿದ್ಯಾರ್ಥಿನಿ ಇಂದು ಮಧ್ಯಾಹ್ನ ಹರೇಕಳ ಗ್ರಾಮದ ಮಿಷನ್ ಕಂಪೌಂಡ್ ಬಸ್ ನಿಲ್ದಾಣದಲ್ಲಿ ಇಳಿದು ಕಲ್ಲೈ, ವಡ್ಡೆದಗುರಿ ದಾರಿಯಾಗಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ಯಾಕೂಬ್ ಅಡ್ಡಗಟ್ಟಿದ್ದಾನೆ. ಐ ಲವ್ ಯೂ ಅಂತ ಹೇಳಿ ಆಕೆಯ ಕೈ ಎಳೆದು ಅಪ್ಪಿಕೊಳ್ಳಲು ಮುಂದಾಗಿದ್ದು ಪ್ರತಿಭಟಿಸಿದ ಯುವತಿ ಕಾಮುಕನಿಂದ ತಪ್ಪಿಸಿ ಮಂದಕ್ಕೆ ಸಾಗಿದ್ದಾಳೆ. ಪಟ್ಟು ಬಿಡದ ಕಾಮುಕ ಯಾಕೂಬ್ ಪೊದೆಗಳಲ್ಲಿ ಅಡಗಿ ಯುವತಿಗೆ ಅಶ್ಲೀಲ ಸನ್ನೆಗೈದಿದ್ದು ಯುವತಿ ಬೊಬ್ಬೆ ಹೊಡೆದಿದ್ದಾಳೆ. ಯುವತಿಯ ಬೊಬ್ಬೆ ಕೇಳಿದ ಗ್ರಾಮಸ್ಥರು ಕಾಮುಕನನ್ನ ಹಿಡಿಯಲು ಯತ್ನಿಸಿದ್ದು ಕೊಣಾಜೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಳಿಕ ಎಲಿಯಾರ್ ಪದವು ಎಂಬಲ್ಲಿ ಆರೋಪಿ ಯಾಕೂಬನನ್ನ ಗ್ರಾಮಸ್ಥರು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಯಾಕೂಬ್ ಗೆ ದೇರಳಕಟ್ಟೆಯ ಅಡ್ಕರೆ ಎಂಬಲ್ಲಿ ಸಂಬಂಧಿಗಳ ಮನೆಯಿದೆ. ಅಲ್ಲಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಲಾಕ್ಡೌನ್ ವೇಳೆ ಯಾಕೂಬ್ ಕೊಣಾಜೆ ಪರಂಡೆಯ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನಿಸಿ ಮಾನಸಿಕ ಅಸ್ವಸ್ಥನಂತೆ ನಟಿಸಿದ್ದ. ಈತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈ ಹಿಂದೆಯೂ ಲೈಂಗಿಕ ಕಿರುಕುಳ ಪ್ರಕರಣವೂ ದಾಖಲಾಗಿತ್ತು.
Mangalore Man tries to Misbehave with Interfaith college-going Girl while getting down from the Bus. Konaje Police who reached the spot has taken him to Custody. Adyar Resident Ayub (43) is the man taken to custody.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 08:56 pm
Mangalore Correspondent
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
Mangalore, Dharmasthala Case, SIT, whistle bl...
26-07-25 10:05 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm