ಬ್ರೇಕಿಂಗ್ ನ್ಯೂಸ್
05-10-21 08:00 pm Mangaluru Correspondent ಕ್ರೈಂ
ಮಂಗಳೂರು, ಅ.5: ಪೆಟ್ರೋಲ್ ಪಂಪ್ ನಿಂದ ಹಣವನ್ನು ಬ್ಯಾಂಕಿಗೆ ಒಯ್ಯುತ್ತಿದ್ದಾಗ ರಾಬರಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಅದೇ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೇ ಪ್ರಕರಣದ ಸೂತ್ರಧಾರನಾಗಿದ್ದು, ಪೊಲೀಸರು ರಾಬರಿ ಪ್ಲಾನ್ ಭೇದಿಸಿದ್ದಾರೆ.
ಮಣ್ಣಗುಡ್ಡದ ಆಶೀರ್ವಾದ್ ಪೆಟ್ರೋಲ್ ಪಂಪ್ ನಿಂದ ಬಂಕ್ ಮ್ಯಾನೇಜರ್ ಭೋಜಪ್ಪ ಸೆ.28ರಂದು ಮಧ್ಯಾಹ್ನ 4.20 ಲಕ್ಷ ಹಣವನ್ನು ಚಿಲಿಂಬಿಯ ಸಾರಸ್ವತ ಬ್ಯಾಂಕಿಗೆ ಕಟ್ಟುವುದಕ್ಕಾಗಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಚಿಲಿಂಬಿ ಬಳಿ ಸ್ವಿಗ್ಗಿ ಟೀಶರ್ಟ್ ಧರಿಸಿ ಕಾದು ಕುಳಿತಿದ್ದ ಇಬ್ಬರು ಆಗಂತುಕರು ಭೋಜಪ್ಪ ಅವರಿಗೆ ಹಲ್ಲೆಗೈದು ಕೈಯಲ್ಲಿದ್ದ ಹಣದ ಬ್ಯಾಗನ್ನು ಕಿತ್ತು ಪರಾರಿಯಾಗಿದ್ದರು. ಹಾಡಹಗಲೇ ನಡೆದಿದ್ದ ಸುಲಿಗೆ ಪ್ರಕರಣ ಭಾರೀ ಆತಂಕ ಮೂಡಿಸಿತ್ತು.
ಪ್ರಕರಣ ದಾಖಲಿಸಿದ ಉರ್ವಾ ಠಾಣೆ ಪೊಲೀಸರು ಶಕ್ತಿ ನಗರ ನಿವಾಸಿ ಶ್ಯಾಮ್ ಶಂಕರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಶ್ಯಾಮಶಂಕರ್ ಈ ಹಿಂದೆ ಆಶೀರ್ವಾದ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕಿದ್ದು, ಆನಂತರ ಕೆಲಸ ಬಿಟ್ಟು ತೆರಳಿದ್ದ. ದಿನವೂ ಮಧ್ಯಾಹ್ನ ಹಣದ ಕಂತೆಯನ್ನು ಬ್ಯಾಗಿನಲ್ಲಿಟ್ಟು ಬೈಕಿನಲ್ಲಿ ತೆರಳುತ್ತಿದ್ದ ಬಗ್ಗೆ ತಿಳಿದಿದ್ದ ಶ್ಯಾಮ್, ಇತರ ಕೆಲವು ಯುವಕರ ಜೊತೆ ಸೇರಿಕೊಂಡು ರಾಬರಿಗೆ ಪ್ಲಾನ್ ರೂಪಿಸಿದ್ದರು. ಕೃತ್ಯಕ್ಕೆ ಸಹಕರಿಸಿದ್ದ ಅಭಿಷೇಕ್, ಕಾರ್ತಿಕ್ ಮತ್ತು ಸಾಗರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 60 ಸಾವಿರ ನಗದು, ವಾಹನ, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಕುಡುಪು ನಿವಾಸಿ ಅಭಿಷೇಕ್ ವಿರುದ್ಧ ಕೊಲೆ, ಕೊಲೆಯತ್ನ ಸೇರಿ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳಿವೆ. ಮುಂಬೈನಲ್ಲಿ ಬಾರ್ ನಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಅಪರಾಧ ಚಟುವಟಿಕೆಯ ಸಂಪರ್ಕ ಪಡೆದಿದ್ದ. ಶಕ್ತಿನಗರದ ಕಾರ್ತಿಕ್ ಪೈಂಟಿಂಗ್ ಕೆಲಸ ಮಾಡುತ್ತಿದ್ದು ಆತನ ವಿರುದ್ಧ ಆರು ಕೇಸುಗಳಿವೆ. ಇವರಲ್ಲದೆ, ಇತರ ಕೆಲವರು ಕೂಡ ಕೃತ್ಯದಲ್ಲಿ ಸಹಕರಿಸಿದ್ದು, ಹಣವನ್ನು ಪಾಲು ಮಾಡಿಕೊಂಡಿದ್ದಾರೆ. ಅವರನ್ನು ಕೂಡ ಸದ್ಯದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ವ್ಯಕ್ತಪಡಿಸಿದ್ದಾರೆ.
ತಂಡಕ್ಕೆ ಮುಂಬೈ, ಗೋವಾದಲ್ಲಿ ಸಂಪರ್ಕ ಇದ್ದು, ಇವರು ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೆಟ್ರೋಲ್ ಪಂಪ್ ಇನ್ನಿತರ ವಹಿವಾಟುಗಳಲ್ಲಿ ಸಂಗ್ರಹಗೊಂಡ ಹಣವನ್ನು ಒಯ್ಯುವ ವೇಳೆ ಜಾಗ್ರತೆ ವಹಿಸಬೇಕು. ಬೈಕಿನಲ್ಲಿ ತೆರಳುವಾಗ ಸೀಟು ಒಳಗಡೆ ಇಡಬಹುದು. ಅಥವಾ ಇಬ್ಬರು ಸೇರಿಕೊಂಡು ಬ್ಯಾಂಕಿಗೆ ತೆರಳಬಹುದು. ಕೇರ್ ಲೆಸ್ ಮಾಡುವುದರಿಂದ ಈ ರೀತಿಯ ಅಪರಾಧಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ ಕಮಿಷನರ್.
Mangalore Daylight robbery by stopping two-wheelers four accused arrested. The accused arrested have seven criminal cases registered against them.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm