ಬ್ರೇಕಿಂಗ್ ನ್ಯೂಸ್
09-10-21 10:22 pm Mangalore Reporter ಕ್ರೈಂ
ಬಂಟ್ವಾಳ, ಅ.9 : ಅಪ್ರಾಪ್ತ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಡುಬಿದ್ರೆ ಕಾಪು ನಿವಾಸಿ ಕೆ.ಎಸ್.ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತುಲ್ಲಾ ಬಂಧಿತರು. ಶರತ್ ಶೆಟ್ಟಿ ಎಂಬಾತ ಅಪ್ರಾಪ್ತ ಬಾಲಕಿಗೆ ಫೇಸ್ಬುಕ್ ನಲ್ಲಿ ಪರಿಚಯ ಆಗಿದ್ದು, ಆನಂತರ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಮಾತನಾಡಿಕೊಂಡು ಸಂಪರ್ಕದಲ್ಲಿದ್ದರು. ಈ ವೇಳೆ, ಶರತ್ ಶೆಟ್ಟಿ ತನ್ನ ಸಂಬಂಧಿ ಯುವಕನಾದ ಮಾರುತಿ ಮಂಜುನಾಥ್ ಎಂಬಾತನಿಗೂ ಬಾಲಕಿಯನ್ನು ಪರಿಚಯ ಮಾಡಿಸಿದ್ದು, ಆತನೂ ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೆ, ಬಾಲಕಿಯ ಜೊತೆ ವಾಟ್ಸಾಪ್ ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿ ಚಾಟ್ ಮಾಡಿಕೊಂಡಿದ್ದ.
ಈ ನಡುವೆ, ಅ.8ರಂದು ಬಾಲಕಿಯನ್ನು ಮಂಗಳೂರಿಗೆ ಬರುವಂತೆ ಶರತ್ ಶೆಟ್ಟಿ ತಿಳಿಸಿದ್ದು, ಅದರಂತೆ ಬಸ್ಸಿನಲ್ಲಿ ಬಂದಿದ್ದ ಬಾಲಕಿಯನ್ನು ಮಂಗಳೂರಿನ ಸಿಟಿ ಮಹಲ್ ಲಾಡ್ಜ್ ಬಳಿ ಭೇಟಿಯಾಗಿದ್ದಾನೆ. ಆನಂತರ, ಲಾಡ್ಜ್ ಗೆ ಹೋಗಿ ವಿಶ್ರಾಂತಿ ಮಾಡೋಣ ಎಂದು ಪುಸಲಾಯಿಸಿದ್ದು ಲಾಡ್ಜ್ ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆನಂತರ, ತನ್ನ ಸ್ನೇಹಿತ ಇದಾಯತುಲ್ಲಾ ಎಂಬಾತನನ್ನು ಕರೆದಿದ್ದು, ಒಂದು ಹುಡುಗಿ ಇದೆ ಎಂದು ಹೇಳಿ ಬರಹೇಳಿದ್ದಾನೆ. ಇದಾಯತುಲ್ಲಾ ಕೂಡ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ. ಇವರಿಗೆ ಲಾಡ್ಜ್ ವ್ಯವಸ್ಥೆಯನ್ನು ಶರತ್ ಶೆಟ್ಟಿ ಸ್ನೇಹಿತ ಸತೀಶ್ ಎಂಬಾತ ಮಾಡಿದ್ದು, ಅಲ್ಲದೆ, ಲಾಡ್ಜ್ ನಲ್ಲಿ ಹುಡುಗಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದ. ಆನಂತರ ಬಾಲಕಿ ಬಸ್ಸಿನ ಮೂಲಕ ಬಂಟ್ವಾಳಕ್ಕೆ ಬಂದಿದ್ದಳು.
ಬಾಲಕಿ ಅಪ್ರಾಪ್ತಳಾಗಿದ್ದರಿಂದ ಪ್ರಕರಣ ಸಂಬಂಧಿಸಿ ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಲೈಂಗಿಕ ಶೋಷಣೆ ಮತ್ತು ಬೆದರಿಕೆ ವಿಚಾರದಲ್ಲಿ ಕಲಂ 366 ಎ, 376ಡಿ ಮತ್ತು 506 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಶಾಲೆಗೆ ತೆರಳಿದ್ದ ಬಾಲಕಿಯನ್ನು ತಂಡವೊಂದು ಅಪಹರಿಸಿ, ಅಮ್ಟಾಡಿ ಎಂಬಲ್ಲಿಗೆ ಕರೆದೊಯ್ದು ಮತ್ತು ಬರಿಸುವ ಜ್ಯೂಸ್ ಕೊಟ್ಟು ಅತ್ಯಾಚಾರ ಎಸಗಿದ್ದಾಗಿ ಹೇಳಲಾಗಿತ್ತು. ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ನೈಜ ವಿಚಾರ ಹೊರಬಿದ್ದಿದೆ. ಅಲ್ಲದೆ, ಪ್ರಕರಣದಲ್ಲಿ ಬಾಲಕಿಯೇ ಯುವಕರ ಜೊತೆ ಸಲುಗೆಯಿಂದ ವರ್ತಿಸಿದ್ದು ಮತ್ತು ಫೇಸ್ಬುಕ್ ಜಾಲವನ್ನು ದುರುಪಯೋಗ ಮಾಡಿಕೊಂಡಿದ್ದು ಕಂಡುಬಂದಿದೆ.
Bantwal Gang rape case police arrest four accused girl was introduced on Facebook says prime accused. A minor girl from Bantwal was allegedly gang-raped by five men on Friday. The incident occured at Amtady where the accused kidnapped her from an auto rickshaw stand, took her to a secluded place and gang-raped her.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm