ಬ್ರೇಕಿಂಗ್ ನ್ಯೂಸ್
12-10-21 07:07 pm Headline Karnataka News Network ಕ್ರೈಂ
ನವದೆಹಲಿ, ಅ.12: ದೆಹಲಿ ಪೊಲೀಸರು ಪಾಕಿಸ್ತಾನದ ಮೂಲದ ಉಗ್ರನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಆತ ಹತ್ತು ವರ್ಷಗಳಿಂದ ವೇಷ ಮರೆಸಿಕೊಂಡು ದೆಹಲಿಯಲ್ಲಿ ನೆಲೆಸಿದ್ದ ಅನ್ನುವ ವಿಚಾರವನ್ನೂ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಅಶ್ರಫ್ ಹೆಸರಿನ ವ್ಯಕ್ತಿ ದೆಹಲಿಯಲ್ಲಿ ಅಹ್ಮದ್ ನೂರಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಶಾಸ್ತ್ರಿ ಸರ್ಕಲ್ ನಲ್ಲಿ ನೆಲೆಸಿದ್ದ ಎಂದು ದೆಹಲಿ ವಿಶೇಷ ಪೊಲೀಸ್ ಪಡೆಯ ಮೂಲಗಳನ್ನು ಉಲ್ಲೇಖಿಸಿ, ಇಂಡಿಯಾ ಟುಡೇ ವರದಿ ಮಾಡಿದೆ.
ದೆಹಲಿಯ ಲಕ್ಷ್ಮೀ ನಗರದಲ್ಲಿ ಮೊಹಮ್ಮದ್ ಅಶ್ರಫ್ ನನ್ನು ಬಂಧಿಸಲಾಗಿದೆ. ಆತನ ಮನೆಯಿಂದ ಎಕೆ 47 ರೈಫಲ್, ಒಂದು ಹೆಚ್ಚುವರಿ ಮ್ಯಾಗಜಿನ್, 60 ಸುತ್ತು ಗುಂಡುಗಳು, ಇನ್ನಿತರ ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಾಸವಿದ್ದ. ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿದ್ದು ಹಲವು ವಿಧ್ವಂಸಕ ಕೃತ್ಯಗಳಿಗೆ ಸ್ಲೀಪರ್ ಸೆಲ್ ಆಗಿ ಕಾರ್ಯ ನಿರ್ವಹಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ವಿಶೇಷ ಪೊಲೀಸ್ ದಳದ ಡಿಸಿಪಿ ಪ್ರಮೋದ್ ಕುಶ್ವಾಹ ತಿಳಿಸಿದ್ದಾರೆ.
ಬಾಂಗ್ಲಾದೇಶದ ಸಿಲಿಗುರಿ ಗಡಿಭಾಗದ ಮೂಲಕ ಭಾರತಕ್ಕೆ ಒಳನುಸುಳಿದ್ದ ಈತ, ಆನಂತರ ಅಹ್ಮದ್ ನೂರಿ ಹೆಸರಲ್ಲಿ ವಾಸವಿದ್ದ. ಆನಂತರ ಪೀರ್ ಮೌಲಾನಾ ಎಂಬ ಹೆಸರಲ್ಲಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ. ಪಾಕಿಸ್ಥಾನದ ಐಎಸ್ಐನಿಂದ ತರಬೇತು ಪಡೆದು ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದಕ ಕೃತ್ಯ ನಡೆಸಲು ನಿಯೋಜಿಸಲ್ಪಟ್ಟಿದ್ದ. ಪಾಕಿಸ್ಥಾನದ ಕಡೆಯಿಂದ ನಾಸಿರ್ ಎಂಬ ಸಾಂಕೇತಿಕ ವ್ಯಕ್ತಿಯಿಂದ ಈತನಿಗೆ ಸೂಚನೆ ಲಭಿಸುತ್ತಿತ್ತು ಎಂದು ಕುಶ್ವಾಹ ತಿಳಿಸಿದ್ದಾರೆ.
ಈ ನಡುವೆ, ಅಹ್ಮದ್ ನೂರ್ ಹೆಸರಿನಲ್ಲಿ ಪಾಸ್ಪೋರ್ಟ್ ಪಡೆದು ದೆಹಲಿಯಿಂದ ಥಾಯ್ಲೆಂಡ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದ. ಬಿಹಾರದ ಗಾಜಿಯಾಬಾದ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದು ಅಲ್ಲಿಯೇ ಭಾರತೀಯ ನಕಲಿ ಗುರುತಿನ ಚೀಟಿಯನ್ನು ಪಡೆದಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
Ahead of the festive season, the Delhi Police Special Cell foiled a big terror plan with the arrest of a Pakistani national from Laxmi Nagar today and seized an AK-47 rifle from his possession. According to the police, the accused was living with a fake identification of an Indian national and had obtained the Indian identity cards through forged documents. The special cell operation was monitored by the Commissioner of Police Rakesh Asthana. "It is a good catch by special cell ahead of the festive season. A big terror plan has been foiled by our team," Mr Asthana said.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm