ಕೋರ್ಟ್ ಕಾಂಪ್ಲೆಕ್ಸ್ ನಲ್ಲಿಯೇ ವಕೀಲನ ಗುಂಡಿಟ್ಟು ಕೊಲೆ, ಸಹ ವಕೀಲನಿಂದಲೇ ಕೃತ್ಯ

18-10-21 09:21 pm       Headline Karnataka News Network   ಕ್ರೈಂ

ಕೋರ್ಟ್ ಕಾಂಪ್ಲೆಕ್ಸ್ ಒಳಗಡೆಯೇ ಹಾಡಹಗಲೇ ವಕೀಲರೊಬ್ಬರನ್ನು ಗುಂಡಿಟ್ಟು ಸಾಯಿಸಿದ ಘಟನೆ ಉತ್ತರ ಪ್ರದೇಶದ ಶಹಜಾನ್ ಪುರ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ಲಕ್ನೋ, ಅ.18: ಕೋರ್ಟ್ ಕಾಂಪ್ಲೆಕ್ಸ್ ಒಳಗಡೆಯೇ ಹಾಡಹಗಲೇ ವಕೀಲರೊಬ್ಬರನ್ನು ಗುಂಡಿಟ್ಟು ಸಾಯಿಸಿದ ಘಟನೆ ಉತ್ತರ ಪ್ರದೇಶದ ಶಹಜಾನ್ ಪುರ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಮೃತ ವಕೀಲರನ್ನು ಭೂಪೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.

ಕೋರ್ಟ್ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿ ಘಟನೆ ನಡೆದಿದೆ. ಜಲಾಲಬಾದ್ ನಿವಾಸಿಯಾಗಿರುವ ಭೂಪೇಂದ್ರ ಸಿಂಗ್ ಇಂದು ಮಧ್ಯಾಹ್ನ ಕೋರ್ಟ್ ಮಹಡಿಗೆ ಬಂದಿದ್ದು, ಮೂರನೇ ಮಹಡಿಯಲ್ಲಿರುವ ಎಸಿಜೆಎಂಎಫ್ ಕೋರ್ಟ್ ಕಚೇರಿಗೆ ತೆರಳಿದ್ದರು. ಪ್ರಕರಣ ಒಂದಕ್ಕೆ ಸಂಬಂಧಿಸಿ ಕೋರ್ಟ್ ಕ್ಲರ್ಕ್ ಅನ್ನು ಭೇಟಿಯಾಗಲೆಂದು ತೆರಳಿದ್ದರು. ಇದೇ ವೇಳೆ, ಗುಂಡಿನ ಸದ್ದು ಕೇಳಿಬಂದಿದ್ದು , ಭೂಪೇಂದ್ರ ಸಿಂಗ್ ಮೃತರಾಗಿದ್ದರು.

ಶವದ ಬಳಿಯಿಂದ ದೇಸೀ ಪಿಸ್ತೂಲ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆತ್ಮಹತ್ಯೆಯೇ ಅನ್ನುವ ಅನುಮಾನ ಕೇಳಿಬಂದಿತ್ತು. ಆದರೆ, ಕೆಲವರು ಕೊಲೆ ಎನ್ನುತ್ತಲೇ ವಕೀಲರು ಕೋರ್ಟ್ ಆವರಣದಲ್ಲಿಯೇ ಪ್ರತಿಭಟನೆ ಆರಂಭಿಸಿದ್ದಾರೆ. ಕೂಡಲೇ ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಹಂತಕ ವಕೀಲನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯ ಬಾಯಿಬಿಟ್ಟಿದ್ದಾನೆ. ಪೂರ್ವ ದ್ವೇಷದಲ್ಲಿ ಭೂಪೇಂದ್ರ ಸಿಂಗ್ ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಪದೇ ಪದೇ ಈ ರೀತಿಯ ಕೃತ್ಯ ಮರುಕಳಿಸುತ್ತಿರುವುದು ಯೋಗಿ ಆದಿತ್ಯನಾಥ್ ಸರಕಾರದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನುವುದನ್ನು ತೋರಿಸುತ್ತಿದೆ ಎಂದು ನಾಯಕರು ದೂರಿದ್ದಾರೆ. 

A lawyer was allegedly shot dead inside a district court complex in Uttar Pradesh’s Shahjahanpur on Monday. The deceased lawyer has been identified as Bhupendra Pratap Singh. The body of the lawyer was found on the third floor of the court. A country-made pistol has been recovered from near the body of the deceased lawyer.