ಬ್ರೇಕಿಂಗ್ ನ್ಯೂಸ್
18-10-21 10:47 pm Headline Karnataka News Network ಕ್ರೈಂ
ಚಿತ್ರದುರ್ಗ, ಅ.18: ಟಿವಿ ಸೀರಿಯಲ್ ಗಳು ಕೆಲವೊಮ್ಮೆ ಎಳೆಯ ಪ್ರಾಯದವರಿಗೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದನ್ನು ಊಹಿಸೋಕೆ ಆಗಲ್ಲ. ಇಲ್ಲೊಬ್ಬ ಹುಡುಗಿ ಹೆತ್ತ ತಂದೆ, ತಾಯಿ, ಅಣ್ಣ , ತಂಗಿಯರಿಗೇ ವಿಷ ಹಾಕಿದ್ದು ಅದಕ್ಕೆ ಸೀರಿಯಲ್ ಸ್ಟೋರಿಯೇ ಕಾರಣವಂತೆ.
ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಎನ್ನುವ ಗ್ರಾಮದಲ್ಲಿ ಜುಲೈ 12ರಂದು ರಾತ್ರಿ ರಾಗಿ ಮುದ್ದೆ, ಹೆಸರು ಕಾಳಿನ ಸಾರು, ಅನ್ನ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಐದು ಜನರಿಗೆ ತಡರಾತ್ರಿ ವಾಂತಿ ಬೇಧಿಯಾಗಿ ಜಿಲ್ಲಾಸ್ಪತ್ರೆ ಸೇರಿದ್ದ ಘಟನೆ ನಡೆದಿತ್ತು. ಅಷ್ಟೇ ಅಲ್ಲ, ಕುಟುಂಬದ ಹಿರಿಯಜ್ಜಿ 80 ವರ್ಷದ ಗುಂಡೀಬಾಯಿ, ಮನೆಗೆ ಆಧಾರವಾಗಿದ್ದ 45 ವರ್ಷದ ತಿಪ್ಪೇಶ್ ನಾಯ್ಕ ಹಾಗು ಆತನ ಪತ್ನಿ 40 ವರ್ಷದ ಸುಧಾಬಾಯಿ ರಾತ್ರಿಯೇ ಕೊನೆಯುಸಿರೆಳೆದಿದ್ದರು. ತೀವ್ರ ಸ್ಥಿತಿಯಲ್ಲಿ ಬಳಲುತ್ತಿದ್ದ 19 ವರ್ಷದ ಮಗ ಚಂದ್ರಶೇಖರ್,16 ವರ್ಷದ ಮಗಳು ರಮ್ಯಳನ್ನ ದಾವಣಗೆರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಮೃತಪಟ್ಟಿದ್ದಳು. ಆದರೆ ಮತ್ತೊಬ್ಬ 17 ವರ್ಷದ ಮಗಳು ಮಾತ್ರ ಮುದ್ದೆ ತಿಂದೇ ಇಲ್ಲದ ಕಾರಣ ಆರೋಗ್ಯವಾಗಿ ಉಳಿದಿದ್ದಳು. ಆಕೆ ಮಾತ್ರ ಏನೂ ಆಗದೆ ಉಳಿದುಕೊಂಡಿದ್ದು ಮುದ್ದೆ ತಿನ್ನದೇ ಉಳಿದಿದ್ದು ಸಂಶಯಕ್ಕೂ ಕಾರಣವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಆಸ್ಪತ್ರೆಯಿಂದ ಗುಣಮುಖನಾಗಿ ಬಂದ ಚಂದ್ರಶೇಖರ್ ನೀಡಿದ ದೂರನ್ನು ಪಡೆದು ತನಿಖೆ ಕೈಗೊಂಡಿದ್ದರು. ಈ ನಡುವೆ ಮೃತರು ತಿಂದಿದ್ದ ಆಹಾರ, ವಾಂತಿ ಹಾಗು ಇನ್ನಿತರ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಎಫ್‌ಎಸ್‌ಎಲ್ ವರದಿ ಬಂದ ನಂತರ ಅನುಮಾನದ ಮೇಲೆ ತನಿಖೆಯನ್ನು ತೀವ್ರಗೊಳಿಸಿದಾಗ, ಮಗಳೇ ತನ್ನ ಇಡೀ ಕುಟುಂಬಕ್ಕೆ ವಿಷ ಹಾಕಿರುವುದು ಬಯಲಾಗಿದೆ.
ಅದರಂತೆ, 17 ವರ್ಷದ ಹುಡುಗಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. 17 ವರ್ಷದ ಬಾಲಕಿಯ ಮಾತು ಮಾತ್ರ ಪೊಲೀಸರನ್ನೂ ಚಕಿತಗೊಳಿಸಿತ್ತು. ನನಗೆ ಮನೆಯಲ್ಲಿ ಪ್ರತಿನಿತ್ಯ ಬೈಯುತ್ತಿದ್ದರು, ಕೈಕಾಲು ಕಟ್ಟಿ ಹೊಡೆಯುತ್ತಿದ್ದರು. ನನ್ನ ಅಣ್ಣ ಮತ್ತು ತಂಗಿಗೆ ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನನ್ನ ಜಮೀನು ಕೆಲಸಕ್ಕೆ ಕಳುಹಿಸುತ್ತಿದ್ದರು. ಮನೆಯಲ್ಲಿ ನಾನೇ ಅಡುಗೆ ಮಾಡಬೇಕಿತ್ತು, ಹೀಗಾಗಿ ಎಲ್ಲರನ್ನು ಸಾಯಿಸಿಬಿಟ್ಟರೆ ನಾನು ಚೆನ್ನಾಗಿ ಇರಬಹುದು ಎಂದುಕೊಂಡು ವಿಷ ಹಾಕಿದೆ. ವಿಷ ಹಾಕುವುದನ್ನು ನಾನು ಟಿವಿ ಸೀರಿಯಲ್ ನೋಡಿ ಕಲಿತುಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.
ಪೋಷಕರ ಟಾರ್ಚರ್ ತಡೆದುಕೊಳ್ಳಲಾಗದೆ ಇಡೀ ಕುಟುಂಬಕ್ಕೆ ವಿಷ ಹಾಕಿ ಎಲ್ಲರನ್ನೂ ಮುಗಿಸಿಬಿಟ್ಟಿದ್ದಾಳೆ. ಒಬ್ಬ ಅಣ್ಣ ಮಾತ್ರ ಆಪತ್ತಿನಿಂದ ಪಾರಾಗಿದ್ದಾನೆ. ವಿಶೇಷ ಅಂದ್ರೆ, ಮೂರು ತಿಂಗಳ ಹಿಂದೆಯೂ ಈಕೆ ಇದೇ ರೀತಿ ಸಾಂಬಾರ್ ನಲ್ಲಿ ವಿಷ ಬೆರೆಸಿದ್ದಳಂತೆ. ಆದರೆ ತುಂಬಾ ವಾಸನೆ ಬಂದ ಕಾರಣ ಯಾರೂ ಸಾಂಬಾರ್ ಸೇವಿಸಿರಲಿಲ್ಲ. ಹಾಗಾಗಿ ಬದುಕಿ ಉಳಿದಿದ್ದರು. ಆ ವೇಳೆ ತಾಯಿ ನನ್ನ ಮೇಲೆ ದೇವರು ಆವಾಹನೆಯಾಗಿದ್ದಾಳೆ ಎಂದು ಹೇಳಿ ಬೇರೆಯವರನ್ನ ಅನುಮಾನಿಸಿದ್ದೂ ನಡೆದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಮಗಳು ಮತ್ತೆ ವಿಷವಿಟ್ಟು ತನ್ನವರನ್ನೇ ಕೊಂದು ಮುಗಿಸಿದ್ದಾಳೆ.
The police of Sirigere station have succeeded in cracking the case in which four persons had died in Isamudra Gollarahatti inBharamasagara revenue division. The police investigation has revealed that the elder daughter of the house had mixed poison to ragi balls (mudde) and killed four persons. One family member survived. On July 12 evening, the girl's mother, who worked as a coolie, returned after work on July 12. She had kept ready vegetables, and other things for cooking the dinner. Power supply went off at that time. It was believed that miscreants would have added poison to a utensil on the hearth and killed the family members.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm