ಬ್ರೇಕಿಂಗ್ ನ್ಯೂಸ್
22-10-21 07:51 pm Mangalore Correspondent ಕ್ರೈಂ
ಮಂಗಳೂರು, ಅ.22: ಕಾವೂರು ಠಾಣೆ ವ್ಯಾಪ್ತಿಯಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.
ಅ.9ರಂದು ಆಶಿಕ್ ಮತ್ತು ಅಜೀಮ್ ಎನ್ನುವ ಇಬ್ಬರು ಯುವಕರ ಮೇಲೆ ಹಲ್ಲೆ ನಡೆದಿತ್ತು. ಆನಂತರ, ಅದಕ್ಕೆ ಪ್ರತೀಕಾರ ಎನ್ನುವಂತೆ ಅ.13ರಂದು ರಾಜೇಶ್ ಶೆಟ್ಟಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಂದು ರಾತ್ರಿ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ರಾಜೇಶ್ ಮೇಲೆ ಶಾಂತಿನಗರದಲ್ಲಿ ಅಡ್ಡಗಟ್ಟಿದ್ದ ತಂಡವೊಂದು ತಲವಾರು ದಾಳಿ ನಡೆಸಿ ಪರಾರಿಯಾಗಿತ್ತು. ರಾಜೇಶ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಅಬೀದ್ ಮತ್ತು ಸಫಾನ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಶಿಕ್ ಮತ್ತು ಅಜೀಮ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಘಟನೆ ನಡೆದ ಮರುದಿನವೇ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು. ಅದರಲ್ಲಿ ಇಬ್ಬರು ಅಪ್ರಾಪ್ತರು ಕೂಡ ಇದ್ದರು. ಆಶಿಕ್ ಮತ್ತು ಅಜೀಮ್ ಹದಿಹರೆಯದ ಹುಡುಗರಾಗಿದ್ದು ಇಬ್ಬರೂ ಸ್ನೇಹಿತರು. ಪಬ್ ಜಿ ಆಟದ ವಿಷಯದಲ್ಲಿ ಅವರದೇ ಕೋಮಿನ ಒಳಗಡೆ ಸಣ್ಣ ಜಗಳ ನಡೆದಿತ್ತು. ಅದಕ್ಕೆ ಎರಡೇಟು ಬಿಗಿಯಬೇಕೆಂದು ಇವರಿಬ್ಬರು ಸೇರಿ, ಅ.9ರಂದು ಮೈದಾನದಲ್ಲಿ ಆಟ ಆಡುತ್ತಿದ್ದ ಜಾಗಕ್ಕೆ ತೆರಳಿದ್ದರು. ಆದರೆ, ಅಲ್ಲಿ ಇತರ ಧರ್ಮೀಯ ಯುವಕರು ಕೂಡ ಇದ್ದು ಮಾತಿಗೆ ಮಾತು ಬೆಳೆದು ಅಲ್ಲಿದ್ದ ಹುಡುಗರೇ ಇವರ ಮೇಲೆ ಹಲ್ಲೆ ನಡೆಸಿದ್ದರು.
ಆನಂತರ, ಆಶಿಕ್ ಮೇಲಿನ ಹಲ್ಲೆ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಆತನ ಗೆಳೆಯ ಅಬೀದ್ ಮುಂದಾಗಿದ್ದ. ಯಾರಿಗಾದ್ರೂ ಹೊಡೆಯಬೇಕೆಂದು ನಿರ್ಧರಿಸಿ, ಸಫಾನ್ ಎಂಬಾತನ ಸಹಾಯ ಪಡೆದು ಪ್ಲಾನ್ ಹಾಕಿದ್ದಾರೆ. ಅ.13ರಂದು ರಾಜೇಶ್ ಶೆಟ್ಟಿ ಬೈಕಿನಲ್ಲಿ ತೆರಳುತ್ತಿದ್ದಾಗ ಸಂಚು ಹೂಡಿ ತಲವಾರು ಬೀಸಿದ್ದಾರೆ. ಅಷ್ಟರಲ್ಲಿ ಹಿಂದಿನಿಂದ ಬೇರೆ ವಾಹನ ಬಂದಿದ್ದರಿಂದ ಕೊಲ್ಲಲು ಬಂದಿದ್ದವರು ಅರ್ಧಕ್ಕೆ ಬಿಟ್ಟು ತಮ್ಮ ವಾಹನದಲ್ಲಿ ಪರಾರಿಯಾಗಿದ್ದರು. ಬೆನ್ನಿನ ಭಾಗಕ್ಕೆ ತಲವಾರು ದಾಳಿಗೆ ಈಡಾಗಿದ್ದ ರಾಜೇಶ್ ಶೆಟ್ಟಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಗಾಯಾಳುವನ್ನು ವಿಚಾರಿಸಿದಾಗ, ಹೆಚ್ಚಿನ ಮಾಹಿತಿ ಸಿಗಲಿಲ್ಲ. ಹಿಂದಿನ ಘಟನೆಗೂ, ಹಲ್ಲೆ ಕೃತ್ಯಕ್ಕೂ ಯಾವುದೇ ಸಂಬಂಧವೂ ಇರಲಿಲ್ಲ. ವಿಚಾರಣೆ ವೇಳೆ, ಇದೇ ರೀತಿ ಆರು ಬಾರಿ ಇರಿತದ ಪ್ರಯತ್ನ ಆಗಿದೆ ಎನ್ನುವುದನ್ನು ರಾಜೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಮೂರು ಬಾರಿ ಹತ್ತಿರದಿಂದ ಇರಿದು ಪರಾರಿಯಾಗಿದ್ದಾರೆ. ಆದರೆ, ಪ್ರತಿ ಬಾರಿಯೂ ಅದೇ ಸಮಯಕ್ಕೆ ಹಿಂದಿನಿಂದ ವಾಹನ ಬಂದಿದ್ದರಿಂದ ಬಚಾವಾಗಿದ್ದೇನೆ ಎಂದಿದ್ದಾನೆ. ಯಾವ ಕಾರಣಕ್ಕೆ ಹಲ್ಲೆ ಕೃತ್ಯ ಆಗಿದೆ ಅನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಈಗ ಬಂಧಿತರಾಗಿರುವ ಅಬೀದ್ ಶಾಂತಿನಗರ ನಿವಾಸಿಯಾಗಿದ್ದು, ಈ ಹಿಂದೆ ಹಲ್ಲೆ ಪ್ರಕರಣ ದಾಖಲಾಗಿದೆ. ಸಫಾನ್ ಪಂಜಿಮೊಗರು ನಿವಾಸಿಯಾಗಿದ್ದು ಮೂರು ಪ್ರಕರಣಗಳಿವೆ. ಆಶೀಕ್ ಮೇಲಿನ ಹಲ್ಲೆ ಘಟನೆಗೆ ಪ್ರತೀಕಾರ ತೀರಿಸಲು ಸಂಚು ನಡೆಸಿದ್ದರು. ರಾಜೇಶ್ ಶೆಟ್ಟಿ ಮೇಲೆ 2017ರ ಹಲ್ಲೆ ಪ್ರಕರಣದಲ್ಲಿ ಅಬೀದ್ ಗೆ ವೈಯಕ್ತಿಕ ದ್ವೇಷ ಇತ್ತು. ಇದಕ್ಕಾಗಿ ಬೇರೆ ಕೆಲವು ಯುವಕರನ್ನು ಸೇರಿಸಿಕೊಂಡು ಹಲ್ಲೆ ಕೃತ್ಯ ನಡೆಸಿದ್ದ. ಕೆಲವು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು ಖಚಿತ ಸಾಕ್ಷ್ಯ ಲಭಿಸಿದಲ್ಲಿ ಬಂಧಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
Stabbing case in Kavoor Two more arrested PUBG game revenge and plan for Murder exposed. Police who have arrested the accused have revealed shocking information.
28-12-24 06:57 pm
HK News Desk
Bidar Contractor suicide, Priyank Kharges, Ra...
27-12-24 04:07 pm
Manmohan Singh, Mangalore beach festival: ಮನಮ...
27-12-24 11:24 am
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
28-12-24 09:46 pm
HK News Desk
Manmohan Singh Wiki Kannada; ಪಾಕ್ನಲ್ಲಿ ಜನನ,...
27-12-24 10:38 am
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
29-12-24 03:22 am
Mangaluru Correspondent
Prosecution, Munirathna, U T Khader, Mangalor...
28-12-24 10:49 pm
Mangalore Kambala 2024: ಕ್ಯಾ.ಬ್ರಿಜೇಶ್ ಚೌಟ ಸಾರ...
28-12-24 07:35 pm
Puttur Accident, Mangalore: ಪುತ್ತೂರು ಪರ್ಲಡ್ಕದ...
28-12-24 12:14 pm
Mangalore Daiva, Kolya, Temple: ದೈವದ ವಲಸರಿ ನಡ...
27-12-24 11:02 pm
28-12-24 04:26 pm
Mangalore Correspondent
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm