ಕುಳೂರಿನಲ್ಲಿ ಕೋಟ್ಯಾನ್ ಕುಟುಂಬಸ್ಥರ ನಾಗನಕಟ್ಟೆ ಧ್ವಂಸಕ್ಕೆ ಯತ್ನ ; ಆರೋಪಿಗಳ ಬಂಧನಕ್ಕೆ ಬಜರಂಗದಳ ಆಗ್ರಹ

23-10-21 11:43 am       Mangalore Reporter   ಕ್ರೈಂ

ಕುಳೂರಿನ ಹೆದ್ದಾರಿ ಬದಿಯಲ್ಲೇ ಇರುವ ಕೋಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. 

ಮಂಗಳೂರು, ಅ.22 : ಕುಳೂರಿನ ಹೆದ್ದಾರಿ ಬದಿಯಲ್ಲೇ ಇರುವ ಕೋಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. 

ವಿಆರ್ ಎಲ್ ಲಾಜಿಸ್ಟಿಕ್ ಕಚೇರಿಯ ವಿರುದ್ಧ ದಿಕ್ಕಿನಲ್ಲಿರುವ ನಾಗನ ಕಟ್ಟೆಯ ಒಳಭಾಗಕ್ಕೆ ನುಗ್ಗಿರುವ ದುಷ್ಕರ್ಮಿಗಳು ನಾಗನ ಕಲ್ಲು ಮತ್ತು ಹಿತ್ತಾಳೆಯ ನಾಗನ ಜಿಡೆಯನ್ನು ಪುಡಿಗಟ್ಟಿದ್ದಾರೆ. ಎರಡು ದಿನಗಳ ನಡುವೆ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಕಾವೂರು ಪೊಲೀಸರು ಮತ್ತು ಬಜರಂಗದಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾಗನ ಕಟ್ಟೆಗೆ ಹಾನಿ ಎಸಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಬಜರಂಗದಳ ಆಗ್ರಹಿಸಿದೆ. 

ನಾಲ್ಕು ದಿನಗಳ ಹಿಂದೆ ಬೈಕಂಪಾಡಿಯ ಜಾರಂದಾಯ ದೈವಸ್ಥಾನದಲ್ಲಿ ಇದೇ ರೀತಿಯ ಕಿಡಿಗೇಡಿ ಕೃತ್ಯ ನಡೆದಿತ್ತು. ಮಾನಸಿಕ ಅಸ್ವಸ್ಥ ವ್ಯಕ್ತಿ ಕೃತ್ಯ ಎಸಗಿರುವುದು ತಿಳಿದುಬಂದು ಲೋಹಿತಾಶ್ವ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆತ ಅಲ್ಲಿಯೇ ಪರಿಸರದಲ್ಲಿ ರಸ್ತೆ ಬದಿ ಮಲಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ದೈವಸ್ಥಾನದಲ್ಲಿ ಬೆಳ್ಳಿ, ಬಂಗಾರ ಸಿಗದೆ ನಾಗನ ಕಲ್ಲು ಮತ್ತು ನಂದಿ ವಿಗ್ರಹಕ್ಕೆ ಹಾನಿ ಎಸಗಿದ್ದ.

Mangalore Miscreants vandalise Naga Katte near VRL office in Kulur. VHP demand immediate action and arrest of those miscreants.