ಬ್ರೇಕಿಂಗ್ ನ್ಯೂಸ್
25-10-21 11:27 am Bengaluru correspondent ಕ್ರೈಂ
ಬೆಂಗಳೂರು, ಅ.25: ಐಸಿಸ್ ಉಗ್ರರ ಸಂಪರ್ಕದ ಆರೋಪದಲ್ಲಿ ಎನ್ಐಎ ಅಧಿಕಾರಿಗಳು ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರುವ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಗುರಪ್ಪನಪಾಳ್ಯದ ಬಿಸ್ಮಿಲ್ಲಾ ಕಾಲನಿ ನಿವಾಸಿ ಮಹಮೂದ್ ತಾಕಿರ್ (33) ಬಂಧಿತ ಆರೋಪಿ.
2013-14ರಲ್ಲಿ ಆರು ಮಂದಿ ಯುವಕರನ್ನು ಬ್ರೇನ್ ವಾಷ್ ಮಾಡಿ ಸಿರಿಯಾಕ್ಕೆ ಕಳಿಸಿ, ಐಸಿಸ್ ಸಂಘಟನೆಗೆ ಸೇರ್ಪಡೆ ಮಾಡಿರುವ ಪ್ರಕರಣದಲ್ಲಿ ಮಹಮೂದ್ ತಾಕಿರ್ ಆರೋಪಿಯಾಗಿದ್ದಾನೆ. ಮಹಮೂದ್ ಸೇರಿದಂತೆ ನಾಲ್ಕು ಮಂದಿಯ ವಿರುದ್ಧ 2020ರ ಸೆ.19ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಝುಹೈಬ್ ಹಮೀದ್ ಅಲಿಯಾಸ್ ಶಕೀಲ್ ಮುನ್ನ, ಶಿಹಾಬ್ ಮತ್ತು ಇರ್ಫಾನ್ ನಾಸಿರ್ ಎಂಬವರನ್ನೂ ಆರೋಪಿಗಳೆಂದು ಹೆಸರಿಸಲಾಗಿತ್ತು. ಝುಹೈಬ್ ಹಮೀದ್ ತಿಲಕ್ ನಗರ ನಿವಾಸಿಯಾಗಿದ್ದು, ಕಂಪ್ಯೂಟರ್ ಎಪ್ಲಿಕೇಶನ್ ಸ್ಪೆಷಲಿಸ್ಟ್ ಆಗಿದ್ದ. ಫ್ರೇಸರ್ ಟೌನ್ ನಿವಾಸಿಯಾಗಿದ್ದ ಇರ್ಫಾನ್ ನಾಸಿರ್ ಅಕ್ಕಿ ವ್ಯಾಪಾರಿಯಾಗಿದ್ದ. ಶಿಹಾಬ್ ಗುರಪ್ಪನಪಾಳ್ಯ ನಿವಾಸಿಯಾಗಿದ್ದ.
ಅಹ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಎಂಬವರನ್ನು ಎನ್ಐಎ ಅಧಿಕಾರಿಗಳು ಈ ಹಿಂದೆಯೇ ಬಂಧಿಸಿದ್ದರು. ಪ್ರಕರಣದಲ್ಲಿ ಮಹಮ್ಮೂದ್ ತಾಕಿರ್ ಮೂರನೇ ಆರೋಪಿಯಾಗಿದ್ದ ಬಂಧಿಸಲ್ಪಟ್ಟಿದ್ದಾನೆ. ಮಹಮ್ಮೂದ್ ತಾಕಿರ್ ಮತ್ತು ಇತರರು ಸೇರಿಕೊಂಡು ಖುರಾನ್ ಸರ್ಕಲ್ ಎಂಬ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಯುವಕರನ್ನು ಪ್ರಚೋದಿಸುತ್ತಿದ್ದರು. ಐಸಿಸ್ ಬಗ್ಗೆ ಪ್ರಚೋದಿಸಿ, ಸಂಘಟನೆಗೆ ಸೇರುವಂತೆ ಮಾಡುತ್ತಿದ್ದರು. 2013ರಲ್ಲಿ ಇದೇ ರೀತಿ ಅಕ್ರಮವಾಗಿ ಬೆಂಗಳೂರಿನ ಆರು ಮಂದಿ ಯುವಕರನ್ನು ಸಿರಿಯಾಕ್ಕೆ ಕಳಿಸಿದ್ದರು. ಅದೇ ಸಂದರ್ಭದಲ್ಲಿ ತಾಕಿರ್ ಮತ್ತು ಇನ್ನಿತರ ಸಹವರ್ತಿಗಳು ಸಿರಿಯಾಕ್ಕೆ ಭೇಟಿ ನೀಡಿದ್ದು, ಭಾರತೀಯ ಮುಸ್ಲಿಮರು ಐಸಿಸ್ ಉಗ್ರರ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ವಾಗ್ದಾನ ನೀಡಿ ಬಂದಿದ್ದರು.
ವರ್ಷದ ಹಿಂದೆ ಬೆಂಗಳೂರಿನಲ್ಲಿ ಕಣ್ಣಿನ ವೈದ್ಯ ಅಬ್ದುರ್ ರಹಿಮಾನ್ ಮತ್ತು ಆತನ ಸಹವರ್ತಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ, ಮಹಮೂದ್ ತಾಕಿರ್ ಮತ್ತು ಇತರರ ಬಗ್ಗೆ ಸುಳಿವು ದೊರೆತಿತ್ತು. ಅಬ್ದುರ್ ರಹಿಮಾನ್ ಕೂಡ 2013-14ರಲ್ಲಿ ಮಹಮೂದ್ ಮತ್ತು ಮುನ್ನ ಎಂಬವರ ನೆರವಿನಲ್ಲಿ ಸಿರಿಯಾಕ್ಕೆ ಹೋಗಿ ಬಂದಿದ್ದಾಗಿ ತಿಳಿಸಿದ್ದ. ಇದರ ಆಧಾರದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದರು.
The National Investigation Agency (NIA) has arrested Muhammad Tauqir Mahmood, an accused in NIA Case RC-33/2020/NIA/DLI. NIA officials said on Sunday that Mahmood, 33, is a resident of Bengaluru. Saturday's arrest is a follow up to a case that NIA had registered under section 120B, 125 of IPC & Section 17, 18 & 18B of UA(P) Act against Muhammad Tauqir Mahmood, Zuhab Hameed alias Shakeel Manna
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm