ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತ, ಉಪ್ಪುಂದ ಮೂಲದ ಗುತ್ತಿಗೆದಾರನ ಮನೆಗೆ ಐಟಿ ದಾಳಿ, ಚುನಾವಣೆ ಹೊತ್ತಲ್ಲೇ ಚಿಗುರಿದ ಐಟಿ ಕಣ್ಣು !

28-10-21 03:49 pm       Mangaluru correspondent   ಕ್ರೈಂ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಬೈಂದೂರು ತಾಲೂಕಿನ ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ ಶೆಟ್ಟಿ ಮನಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಉಡುಪಿ, ಅ.28: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಬೈಂದೂರು ತಾಲೂಕಿನ ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ ಶೆಟ್ಟಿ ಮನಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಉಪ್ಪುಂದದ ಮನೆಯ ಮನೆಗೆ ಒಂಬತ್ತು ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಉಪ್ಪುಂದ ಮೂಲದ ಯುಬಿ ಶೆಟ್ಟಿ ಧಾರವಾಡದಲ್ಲಿ ನೆಲೆಸಿದ್ದು, ಅಲ್ಲಿಯೇ ಗುತ್ತಿಗೆದಾರನಾಗಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆ ವಹಿವಾಟಿನಲ್ಲಿ ನಷ್ಟ ಅನುಭವಿಸಿದ್ದರು. ಆನಂತರ, ಡಿಕೆ ಶಿವಕುಮಾರ್ ನೆರವಿನಲ್ಲಿ ಶೆಟ್ಟಿಯವರು ವ್ಯವಹಾರದಲ್ಲಿ ಮುನ್ನಡೆದಿದ್ದರು.

ವರ್ಷದ ಹಿಂದೆ ಬೈಂದೂರು ತಾಲೂಕಿನಲ್ಲಿ ಎರಡು ಶಾಲೆಗಳನ್ನು ಖರೀದಿಸಿದ್ದ ಯುಬಿ ಶೆಟ್ಟಿ, ಜೊತೆಗೆ ಮತ್ತೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದರು. ಎಚ್ಎಮ್ಎಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯನ್ನು ಶೆಟ್ಟಿ ಖರೀದಿಸಿದ್ದರು. ಉಪ್ಪುಂದದಲ್ಲಿ ಬಂಗಲೆಯನ್ನೂ ಹೊಂದಿದ್ದಾರೆ. ಮೊದಲಿನಿಂದಲೂ ಶ್ರೀಮಂತರಾಗಿದ್ದ ಶೆಟ್ಟಿ ಆಬಳಿಕ ಉತ್ತರ ಕರ್ನಾಟಕದಲ್ಲಿ ಗುತ್ತಿಗೆದಾರನಾಗಿ ಹೆಸರು ಮಾಡಿದ್ದರು.

ಹೆತ್ತವರ ನಿಧನದ ಬಳಿಕ ಉಪ್ಪುಂದದ ಮನೆಯಲ್ಲಿ ಕೆಲವೊಮ್ಮೆ ಬಂದು ಉಳಿದುಕೊಳ್ಳುತ್ತಿದ್ದರು. ಸೋದರರು ಕೂಡ ಅದೇ ಮನೆಯಲ್ಲಿ ಉಳಿದುಕೊಂಡಿದ್ದರು. ಇದೀಗ ಆ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಡಿಕೆಶಿ ಪರವಾಗಿ ನಿಂತ ಕಾರಣವೋ ಏನೋ, ಐಟಿ ಅಧಿಕಾರಿಗಳ ಕಣ್ಣು ಇವರ ಮೇಲೆ ಬಿದ್ದಿದೆ.

Income tax raids Kpcc president DK Shivakumar aide U B Shetty house in Udupi.