ಬ್ರೇಕಿಂಗ್ ನ್ಯೂಸ್
01-11-21 07:29 pm Headline Karnataka News Desk ಕ್ರೈಂ
ಕೊಚ್ಚಿ, ನ.1: ಗಲ್ಫ್ ರಾಷ್ಟ್ರಗಳಿಂದ ಭಾನುವಾರ ರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏಳು ಮಂದಿ ಖದೀಮರು ಅಕ್ರಮವಾಗಿ 5 ಕೇಜಿ ಚಿನ್ನವನ್ನು ತರುತ್ತಿದ್ದುದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿದ್ದು, ಏಳು ಮಂದಿಯನ್ನೂ ವಶಕ್ಕೆ ಪಡೆದಿದ್ದಾರೆ.
ಬೆಹ್ರೈನ್, ಶಾರ್ಜಾ ಮತ್ತು ದುಬೈನಿಂದ ಏಳು ಮಂದಿ ನಿನ್ನೆ ಮಧ್ಯರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ, ಕಸ್ಟಮ್ ಅಧಿಕಾರಿಗಳ ತಪಾಸಣೆಯಲ್ಲಿ ಅವರ ದೇಹದಲ್ಲಿ ಚಿನ್ನ ಇರುವುದು ಪತ್ತೆಯಾಗಿದ್ದು ತಪಾಸಣೆ ಕೈಗೊಂಡಿದ್ದಾರೆ. ಪ್ರಯಾಣಿಕರು ತಮ್ಮ ಗುದ ದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ, ಉಂಡೆಗಳಾಗಿಸಿ ತೂರಿಸಿಕೊಂಡಿದ್ದರು. ಅದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, 5.64 ಕೇಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪತ್ತನಂತಿಟ್ಟ, ಕೋಜಿಕೋಡ್, ಮಲಪ್ಪುರಂ, ತಮಿಳುನಾಡು ಮತ್ತು ಕರ್ನಾಟಕದ ನಿವಾಸಿಗಳಾಗಿದ್ದಾರೆ.
ಔಷಧಿ ಮಾತ್ರೆಗಳ ರೂಪದಲ್ಲಿ ಉಂಡೆಗಳನ್ನಾಗಿಸಿ, ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದರು. ಬೆಹ್ರೈನ್ ನಿಂದ ಬರುತ್ತಿದ್ದ ಅನಾಸ್ ಜಿಹಾದ್ ಎಂಬ ಪ್ರಯಾಣಿಕ ತನ್ನ ಗುದ ದ್ವಾರದಲ್ಲಿ 1.032 ಕೇಜಿ ಚಿನ್ನವನ್ನು ಹೊಂದಿದ್ದರೆ, ನೌಫಾಲ್ ಎಂಬಾತ 778 ಗ್ರಾಮ್ ಚಿನ್ನವನ್ನು ಹೊಂದಿದ್ದ. ಶಾರ್ಜಾದಿಂದ ಬಂದಿದ್ದ ಮೊಹಮ್ಮದ್ ಇರ್ಫಾನ್ ಆಲಿ ಬಳಿ 501 ಗ್ರಾಮ್ ಚಿನ್ನ ವಶಕ್ಕೆ ಪಡೆದರೆ, ಅಶರ್ ಮೊಹಮ್ಮದ್ ಅಮರ್ ಬಳಿ 543 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇದೇ ರೀತಿ ದುಬೈನಿಂದ ಬರುತ್ತಿದ್ದ ಸಿಬಿ ಸಾಜಿ, ಮುಸ್ಬಾ ಮಹಮ್ಮದ್ ಇಶಾಕ್ ಮತ್ತು ಅಂಜುಂ ಸೂಫಿಯಾನ್ ಕ್ರಮವಾಗಿ 1.071 ಕೇಜಿ, 597 ಗ್ರಾಮ್, 542 ಗ್ರಾಮ್ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈ ಏಳು ಮಂದಿಯನ್ನೂ ಕಸ್ಟಮ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
The air intelligence unit and customs sleuths at Cochin International Airport seized 5.064 kg of gold from seven passengers, including a woman, on Sunday. According to a report published in The New Indian Express (TNIE), the passengers had arrived at Kochi airport from Bahrain, Sharjah and Dubai flights in the early hours of Sunday. These passengers originally belonged to Pathanamthitta, Malappuram, Kozhikode, Tamil Nadu and Karnataka.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am