ಬ್ರೇಕಿಂಗ್ ನ್ಯೂಸ್
08-11-21 10:25 pm Headline Karnataka News Desk ಕ್ರೈಂ
ಕಣ್ಣೂರು, ನ.8: ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮೂಢನಂಬಿಕೆ ಬಿತ್ತಿ ಮಂಕುಬೂದಿ ಎರಚಿದ್ದಲ್ಲದೆ, ಖುರಾನ್ ಹೆಸರಲ್ಲಿ ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಣ್ಣೂರು ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಮಹಮ್ಮದ್ ಉವೈಸ್ ಎನ್ನುವಾತನೇ ಬಂಧಿತ ವ್ಯಕ್ತಿ. ಖುರಾನ್ ಪಠಣ ಮಾಡುವುದು ಮತ್ತು ಉಪವಾಸ ಇರುವುದರಿಂದ ರೋಗ ವಾಸಿಯಾಗುತ್ತದೆ ಎಂದು ಹೇಳಿ ಜನರನ್ನು ನಂಬಿಸಿದ್ದಲ್ಲದೆ, ಹಲವರ ಸಾವಿಗೆ ಕಾರಣವಾಗಿದ್ದ ಎಂಬ ಆರೋಪ ಈತನ ಮೇಲಿತ್ತು. ಇತ್ತೀಚೆಗೆ 11 ವರ್ಷದ ಬಾಲಕಿಗೆ ಜ್ವರ ಬಂದಿದ್ದರೂ, ಆಸ್ಪತ್ರೆಗೆ ದಾಖಲಿಸದಂತೆ ಒತ್ತಡ ಹೇರಿದ್ದು ಈಗ ಆತನಿಗೇ ಉಲ್ಟಾ ಆಗಿದೆ.
11 ವರ್ಷದ ಬಾಲಕಿಗೆ ಅ.26ರಂದು ತೀವ್ರ ಜ್ವರ ಉಂಟಾಗಿತ್ತು. ಮಹಮ್ಮದ್ ಉವೈಸ್ ಮೇಲೆ ಅಪಾರ ನಂಬಿಕೆ ಹೊಂದಿದ್ದ ಆಕೆಯ ತಂದೆ ಅಬ್ದುಲ್ ಸತ್ತಾರ್, ಮಗಳಿಗೆ ಜ್ವರ ಬಂತೆಂದು ಆತನ ಬಳಿಗೆ ಕರೆದೊಯ್ದಿದ್ದರು. ಉವೈಸ್ ತನ್ನ ಮನೆಯಲ್ಲೇ ಚಿಕಿತ್ಸಾ ಕೇಂದ್ರ ಮಾಡಿಕೊಂಡಿದ್ದು ಅಲ್ಲಿಯೇ ಔಷಧಿ ಕೊಟ್ಟಿದ್ದು ಬೇರೆ ವೈದ್ಯರ ಬಳಿ ಹೋಗದಂತೆ ತಡೆದಿದ್ದ. ವೈದ್ಯರು ರಾಕ್ಷಸರು. ಆಸ್ಪತ್ರೆಗಳಂದ್ರೆ ನರಕ. ನೀವು ಆಸ್ಪತ್ರೆಗೆ ಹೋಗಿ ಅಲ್ಲಿ ಸತ್ತರೂ ಸ್ವರ್ಗಕ್ಕೆ ಹೋಗುವುದಿಲ್ಲ. ಹಾಗಾಗಿ ಯಾವತ್ತೂ ಆಸ್ಪತ್ರೆಗೆ ಹೋಗಬಾರದು ಎಂದು ಹೇಳಿದ್ದ. ಮಗಳಿಗೆ ಜ್ವರ ಬರುತ್ತಿದ್ದರೂ, ಆತನೇ ತನ್ನ ಹೀಲಿಂಗ್ ಸೆಂಟರಿನಲ್ಲಿ ಇಟ್ಟುಕೊಂಡು ತನ್ನದೇ ರೀತಿಯ ಚಿಕಿತ್ಸೆ ಕೊಟ್ಟಿದ್ದ.
ಅ.31ರಂದು ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆನಂತರ ಹತ್ತಿರದ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ಬಾಲಕಿ ಸಾವು ಕಂಡಿದ್ದಳು. ಸೋದರ ಮಾವ ಈ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದು, ಬಾಲಕಿಯ ಸಾವಿಗೆ ಉವೈಸ್ ಕಾರಣ ಎಂದು ದೂರಿದ್ದ. ಪೊಲೀಸರು ಪೋಸ್ಟ್ ಮಾರ್ಟಮ್ ನಡೆಸಿದ್ದು, ಜ್ವರ, ಅನೀಮಿಯಾ ಮತ್ತು ಸೋಂಕಿನ ಕಾರಣದಿಂದಾಗಿ ಬಾಲಕಿ ಸಾವು ಕಂಡಿದ್ದಾಗಿ ವರದಿ ಬಂದಿತ್ತು. ಇದರಂತೆ, ಪೊಲೀಸರು ಚಿಕಿತ್ಸೆ ನೀಡಿದ ಮಹಮ್ಮದ್ ಉವೈಸ್ ಮತ್ತು ಆಕೆಯ ತಂದೆ ಅಬ್ದುಲ್ ಸತ್ತಾರ್ ನನ್ನು ವಶಕ್ಕೆ ಪಡೆದಿದ್ದಾರೆ.
ಅಬ್ದುಲ್ ಸತ್ತಾರ್ ಬಳಿ ಪೊಲೀಸರು ವಿಚಾರಣೆ ನಡೆಸಿದಾಗ, ಆಸ್ಪತ್ರೆಗೆ ಹೋಗದಂತೆ ತಡೆದಿದ್ದು ಉವೈಸ್ ಎಂದಿದ್ದಾನೆ. ಉವೈಸ್ ಬಳಿ ಕೇಳಿದರೆ, ಹೌದು.. ಆಸ್ಪತ್ರೆಗೆ ಹೋಗುವುದು ವೇಸ್ಟ್, ಅಲ್ಲಿ ಚಿಕಿತ್ಸೆ ದೊರಕುವುದಿಲ್ಲ ಎಂದಿದ್ದಾನೆ. ನಾನು ಖುರಾನ್ ಪಠಿಸುವುದರಿಂದ ರೋಗ ಗುಣಪಡಿಸುತ್ತೇನೆ. ಉಪವಾಸ ಮತ್ತು ಖುರಾನ್ ಪಠಿಸಿ ಮಂತ್ರಿಸಿದ ನೀರನ್ನು ಕೊಟ್ಟು ರೋಗ ವಾಸಿ ಮಾಡುತ್ತೇನೆ. ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, ಹಲವಾರು ಜನರು ನನ್ನ ಬಳಿಗೆ ಬರುತ್ತಾರೆ ಎಂದು ಹೇಳಿದ್ದಾನೆ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದು ಐಪಿಸಿ 304 ಪ್ರಕಾರ (ಕೊಲೆಯಲ್ಲ, ಸಾವಿಗೆ ಪ್ರೇರಣೆ ನೀಡಬಲ್ಲ) ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಡಿ ಕೇಸು ದಾಖಲಿಸಿದ್ದಾರೆ. ಕೋರ್ಟ್ ಅವರನ್ನು ನ.17ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಉವೈಸ್ ಬಗ್ಗೆ ಹಲವು ಬಾರಿ ಪ್ರಬಲ ಆರೋಪಗಳು ಕೇಳಿಬಂದಿದ್ದವು. ಆದರೆ, ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಕಳೆದ ಎಂಟು ವರ್ಷಗಳಲ್ಲಿ ನಾಲ್ವರ ಸಾವಿನ ಪ್ರಕರಣದಲ್ಲಿ ಉವೈಸ್ ಹೆಸರು ಕೇಳಿಬಂದಿತ್ತು. 2014ರಲ್ಲಿ 75 ವರ್ಷದ ಸಫಿಯಾ ಎನ್ನುವ ಮಹಿಳೆ ಸಾವು ಕಂಡಿದ್ದರು. ಉಸಿರಾಟದ ಸಮಸ್ಯೆ ಇದ್ದ ಅವರನ್ನು ಆಸ್ಪತ್ರೆಗೆ ತೆರಳದಂತೆ ಮತ್ತು ಅಲೋಪತಿ ಔಷಧಿಯನ್ನು ತೆಗೆದುಕೊಳ್ಳದಂತೆ ಉವೈಸ್ ತಡೆದಿದ್ದ.
ಆನಂತರ 2016ರ ಆಗಸ್ಟ್ ತಿಂಗಳಲ್ಲಿ ಸಫಿಯಾರ ಮಗ, 52 ವರ್ಷದ ಅಶ್ರಫ್ ಸಾವನ್ನಪ್ಪಿದ್ದ. 2017ರ ಎಪ್ರಿಲ್ ನಲ್ಲಿ ಸಫಿಯಾರ ಸೋದರಿ ನಫೀಸು ಸಂಶಯಾಸ್ಪದ ರೀತಿ ಸಾವು ಕಂಡಿದ್ದರು. 2018ರ ಮೇನಲ್ಲಿ 57 ವರ್ಷದ ಅನ್ವರ್ ಎಂಬಾತ ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಬಗ್ಗೆ ನಫೀಸು ಅವರ ಪುತ್ರ ಸಿರಾಜ್ ಪಡಿಕ್ಕಲ್ ಉವೈಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ, ಆ ಬಗ್ಗೆ ತನಿಖೆ ನಡೆಸಿರಲಿಲ್ಲ.
ಮನೋರಮಾ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಸಿರಾಜ್, ನನ್ನ ತಾಯಿಯ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪೊಲೀಸರು ದೂರಿನ ಬಗ್ಗೆ ಎಫ್ಐಆರ್ ದಾಖಲಿಸದೆ, ತನಿಖೆಯನ್ನೇ ನಡೆಸಿರಲಿಲ್ಲ. ಆರೋಪಿಯನ್ನು ಫ್ರೀಯಾಗಿ ಬಿಟ್ಟಿದ್ದರು. ಈಗ ಎಲ್ಲ ಸಾವಿನ ಪ್ರಕರಣದಲ್ಲಿಯೂ ತನಿಖೆ ನಡೆಸಬೇಕು ಎಂದಿದ್ದಾರೆ. ನಫೀಸು ಕಾಲಿನ ನೋವಿಗೆ ಅಲೋಪತಿ ವೈದ್ಯರಲ್ಲಿ ಚಿಕಿತ್ಸೆ ಮಾಡಿಕೊಂಡಿದ್ದರು. ಆದರೆ, 2017ರಲ್ಲಿ ಉವೈಸ್ ಅಲೋಪತಿ ವೈದ್ಯರ ಬಳಿ ಹೋಗದಂತೆ ತಾಯಿಯನ್ನು ತಡೆದಿದ್ದ. ಆನಂತರ ಕಾಲು ನೋವು ಜಾಸ್ತಿಯಾಗಿ ಕೊನೆಗೆ ಸಾವನ್ನಪ್ಪಿದ್ದರು ಎಂದು ಸಿರಾಜ್ ತಿಳಿಸಿದ್ದಾರೆ.
ಉವೈಸ್ ಆತನ ಸಂಬಂಧಿಕರು, ಪರಿಚಯಸ್ಥರನ್ನು ತನ್ನ ಮಾತಿನಲ್ಲಿಯೇ ಮೋಡಿ ಮಾಡುತ್ತಿದ್ದ. ಕಣ್ಣೂರು ನಗರ ಒಂದರಲ್ಲೇ ಹತ್ತಕ್ಕೂ ಹೆಚ್ಚು ಕುಟುಂಬಕ್ಕೆ ಇದೇ ರೀತಿ ಮಂಕುಬೂದಿ ಎರಚಿದ್ದಾನೆ. ಕೊರೊನಾ ಬಗ್ಗೆಯೂ ಜನರಲ್ಲಿ ಅಪನಂಬಿಕೆ ಹುಟ್ಟಿಸಿದ್ದಾನೆ. ತನ್ನ ಕುಟುಂಬಸ್ಥರು, ಸಂಬಂಧಿಕರು ಕೊರೊನಾ ಲಸಿಕೆಯನ್ನು ಪಡೆಯದಂತೆ ತಡೆದಿದ್ದಾನೆ. ಮಕ್ಕಳಿಗೆ ಇಮ್ಯುನಿಟಿಗಾಗಿ ಕೊಡುವ ಲಸಿಕೆಯನ್ನೂ ಕೊಡಿಸದಂತೆ ತಡೆದಿದ್ದಾನೆ ಎಂದು ಸಿರಾಜ್ ಹೇಳಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲದೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗುತ್ತಿದೆ. ಇದೀಗ ಸಿರಾಜ್ ಹೇಳಿಕೆ ಆಧರಿಸಿ ಪೊಲೀಸರು ಕೇಸು ದಾಖಲಿಸಿದ್ದು, ಕಳೆದ ಏಳು ವರ್ಷಗಳಲ್ಲಿ ನಡೆದಿರುವ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್. ಇಳಂಗೋ ತಿಳಿಸಿದ್ದಾರೆ.
The Kannur Police has arrested 35-year-old faith healer Muhammad Uwais after an 11-year-old girl died at his healing centre. As per a report in Manorama, she was forced to keep fast and recite verses of the Quran during the process. Kannur City is a densely populated neighbourhood under the Arakkal and Ayikkara divisions of the Kannur corporation.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm