ಬ್ರೇಕಿಂಗ್ ನ್ಯೂಸ್
09-11-21 11:40 am Headline Karnataka News Desk ಕ್ರೈಂ
ಕಣ್ಣೂರು, ನ.9: ಕ್ರಿಪ್ಟೋಕರೆನ್ಸಿ ತೆಗೆಸಿಕೊಡುತ್ತೇವೆಂದು ಹೇಳಿ 100 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಪ್ರಕರಣದಲ್ಲಿ ಕೇರಳದ ಕಣ್ಣೂರು ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಮೊಹಮ್ಮದ್ ರಿಯಾಜ್, ಶಫೀಕ್, ವಾಸಿಮ್ ವಾಸಿಮ್ ಮುನವರಳಿ ಮತ್ತು ಮಹಮ್ಮದ್ ಶಫೀಕ್ ಬಂಧಿತರು. ಕಣ್ಣೂರಿನ ನಿವಾಸಿಯೊಬ್ಬ ತನಗೆ ಬಿಟ್ ಕಾಯಿನ್ ತೆಗೆಸಿಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಪಡೆದಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳು ವಿವಿಧ ಕಡೆಗಳಲ್ಲಿ ಜನರನ್ನು ನಂಬಿಸಿ, ಕೋಟ್ಯಂತ ರೂಪಾಯಿ ಸಂಗ್ರಹಿಸಿದ್ದಾರೆ. ಕಣ್ಣೂರು, ಕೋಜಿಕ್ಕೋಡ್, ಮಲಪ್ಪುರಂ, ಕಾಸರಗೋಡು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೋಪಿಗಳು ಜಾಲ ಬೀಸಿದ್ದು, ಜನರನ್ನು ನಂಬಿಸಿ ಹಣ ಸಂಗ್ರಹಿಸಿದ್ದಾರೆ. ಲಾಂಗ್ ರಿಚ್ ಟೆಕ್ನಾಲಜೀಸ್ ಎನ್ನುವ ಕಂಪನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದು, ಕ್ರಿಪ್ಟೋಕರೆನ್ಸಿಯಾಗಿ ಮರಳಿಸುವುದಾಗಿ ನಂಬಿಸಿದ್ದರು. ಉತ್ತರ ಕೇರಳದ ಜಿಲ್ಲೆಗಳಲ್ಲಿ ನೂರಾರು ಮಂದಿ ಕೋಟ್ಯಂತರ ರೂ. ದುಡ್ಡನ್ನು ಇವರ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, ಕ್ರಿಪ್ಟೋಕರೆನ್ಸಿ ಸಿಗದೆ ಮೋಸ ಹೋಗಿದ್ದಾರೆ.
ಹೆಚ್ಚಿನ ಮಂದಿಗೆ ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್ ಏನೆಂದೇ ತಿಳಿಯದಿದ್ದರೂ ಒಂದೇ ವರ್ಷದಲ್ಲಿ ಡಬಲ್ ಆಗುತ್ತೆ ಅನ್ನುವ ಆಸೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಹಣ ಇದ್ದು ಮತ್ತಷ್ಟು ಪಡೆಯಬೇಕೆಂದು ಆಸೆಗೆ ಬೀಳುವ ಮಂದಿಯನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡಿ ಹಣ ಪಡೆದಿತ್ತು.
Senior Kannur city police officer P P Sadanandan said Muhammed Riyas, C Shafeeque, Munavvarali and Muhammed Shafeeque have been arrested by police on the charge of embezzling crores of rupees from investors in connection with the cryptocurrency deal.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm