ಬ್ರೇಕಿಂಗ್ ನ್ಯೂಸ್
09-11-21 08:53 pm Mangaluru Correspondent ಕ್ರೈಂ
ಮಂಗಳೂರು, ನ.9: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಸಿಟ್ಟಿನಲ್ಲಿ ಆಕೆಯ ಚಿಕ್ಕಮ್ಮನಿಗೆ ತನ್ನದೇ ಅಶ್ಲೀಲ ವಿಡಿಯೋ ಕಳುಹಿಸಿ, ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ನಿವಾಸಿ ಸಂತೋಷ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹುಡುಗಿಯ ಚಿಕ್ಕಮ್ಮ ಪೊಲೀಸ್ ದೂರು ನೀಡಿದ್ದಾರೆ. ಮಹಿಳೆಯ ಅಕ್ಕನ ಮಗಳನ್ನು ಮೂಡಿಗೆರೆ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸಂತೋಷ್ ಎಂಬಾತ ಪ್ರೀತಿಸುತ್ತಿದ್ದ. ಈ ವಿಚಾರ ಹುಡುಗಿಯ ಮನೆಯವರಿಗೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಆಕೆಯನ್ನು ಮಂಗಳೂರಿನಲ್ಲಿರುವ ಚಿಕ್ಕಮ್ಮ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿದ್ದರು. ಆದರೆ, ಅಲ್ಲಿಯೂ ಹುಡುಗಿಯ ನಂಬರ್ ಪಡೆದು ವಾಟ್ಸಪ್ ಸಂದೇಶ ಕಳುಹಿಸುವುದು ಮತ್ತು ಕರೆ ಮಾಡಿ ಮಾತನಾಡುವುದನ್ನು ಮುಂದುವರಿಸಿದ್ದ. ಇದನ್ನು ತಿಳಿದ ಚಿಕ್ಕಮ್ಮ, ಹುಡುಗಿಯ ಮೊಬೈಲಿನ ಸಿಮ್ ಕಾರ್ಡನ್ನು ತೆಗೆದಿಟ್ಟಿದ್ದರು. ಆನಂತರ ಆರೋಪಿ ಸಂತೋಷ್, ಹುಡುಗಿಯ ಚಿಕ್ಕಮ್ಮನ ಮೊಬೈಲ್ ನಂಬರ್ ಪಡೆದು ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡತೊಡಗಿದ್ದ. ಇದರಿಂದ ಬೇಸತ್ತ ಮಹಿಳೆ ಸಂತೋಷ್ ಕರೆ ಮಾಡುತ್ತಿದ್ದ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದರು.
ಈ ನಡುವೆ, ಸಂತೋಷ್ ಬೇರೊಂದು ನಂಬರಿನಿಂದ ಚಿಕ್ಕಮ್ಮನ ಮೊಬೈಲಿಗೆ ಗಂಡಸಿನ ಗುಪ್ತಾಂಗದ ನಗ್ನ ಚಿತ್ರವನ್ನು ಕಳುಹಿಸಿದ್ದಾನೆ. ಅಲ್ಲದೆ, ತನ್ನದೇ ಅಶ್ಲೀಲ ವಿಡಿಯೋ ಒಂದನ್ನು ಕಳುಹಿಸಿದ್ದಲ್ಲದೆ, ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಮಾನಸಿಕ ಹಿಂಸೆಗೊಳಗಾದ ಮಹಿಳೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Man arrested for Sending his Nude video and obscene text messages to Women in Mangalore. The arrested has been identified as Santosh from Mudigere.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm