ಬ್ರೇಕಿಂಗ್ ನ್ಯೂಸ್
09-11-21 10:42 pm HK News Desk ಕ್ರೈಂ
Photo credits : Representatioanl Image
ಮಂಗಳೂರು, ನ.9: ಕರ್ನಾಟಕದ ನಕ್ಸಲ್ ಚಳವಳಿಯ ಮುಂಚೂಣಿಯಲ್ಲಿದ್ದು ಹಲವು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ಸ ಶೃಂಗೇರಿ ಮೂಲದ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳದ ವಯನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆ ಮೂಡಿಗೆರೆಯಿಂದ ನಾಪತ್ತೆಯಾಗಿ ನಕ್ಸಲರ ಜೊತೆ ಸೇರಿದ್ದಾಳೆಂದು ಹೇಳಲಾಗಿದ್ದ ಸಾವಿತ್ರಿ ಎಂಬ ಮಹಿಳೆಯನ್ನೂ ಬಂಧಿಸಲಾಗಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಳಿಯ ಬುಕ್ಕಡಿಬೈಲು ನಿವಾಸಿಯಾಗಿದ್ದ ಬಿಜಿ ಕೃಷ್ಣಮೂರ್ತಿ (52) ವಿರುದ್ಧ ಕರ್ನಾಟಕ ರಾಜ್ಯ ಒಂದರಲ್ಲೇ ವಿವಿಧ ಠಾಣೆಗಳಲ್ಲಿ 22 ಕೇಸುಗಳಿವೆ.
ಶಿವಮೊಗ್ಗದ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದ ಕೃಷ್ಣಮೂರ್ತಿ ಕಾಲೇಜು ದಿನಗಳಲ್ಲೇ ಮಾವೋವಾದಿ ಪರವಾಗಿ ವಾಲಿಕೊಂಡಿದ್ದ. ಆನಂತರ 2000 ನೇ ಇಸವಿಯಲ್ಲಿ ಕುದ್ರೆಮುಖ ನೇಶನಲ್ ಪಾರ್ಕ್ ಘೋಷಣೆಯಾದ ಸಂದರ್ಭದಲ್ಲಿ ಸ್ಥಳೀಯ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುತ್ತಾರೆಂದು ಸರಕಾರದ ವಿರುದ್ಧ ಎತ್ತಿಕಟ್ಟಿದ್ದ. ಜನರಿಗೆ ತಮ್ಮನ್ನು ಕಾಡಿನಿಂದ ಒಕ್ಕಲೆಬ್ಬಿಸಿ ಓಡಿಸುತ್ತಾರೆಂಬ ಭಯ ಇದ್ದುದರಿಂದ ಕೃಷ್ಣಮೂರ್ತಿ ಕೊಟ್ಟಿದ್ದ ನಕ್ಸಲ್ ಚಳವಳಿಗೆ ಬೆಂಬಲ ನೀಡಿದ್ದರು. ಕರ್ನಾಟಕ ಸರಕಾರ ನಕ್ಸಲ್ ನಿಗ್ರಹದ ಕಾರ್ಯಾಚರಣೆ ನಡೆಸುತ್ತಿದ್ದಂತೆ ನಕ್ಸಲ್ ನಾಯಕರು ತಲೆಮರೆಸಿಕೊಂಡಿದ್ದರು. ಸಿಪಿಐ ಮಾವೋವಾದಿ ದಳದ ರಾಜ್ಯ ನಾಯಕನಾಗಿದ್ದ ಬಿಜಿ ಕೃಷ್ಣಮೂರ್ತಿ, ಆತನ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ, ಮುಂಡಗಾರು ಲತಾ, ವಿಕ್ರಮ್ ಗೌಡ, ವನಜಾಕ್ಷಿ , ಅಂಗಡಿ ಪ್ರದೀಪ್ ಮುಂತಾದವರು ಆಬಳಿಕ ಕೇರಳದ ವಯನಾಡಿಗೆ ಓಡಿ ತಪ್ಪಿಸಿಕೊಂಡಿದ್ದರು. ಅಲ್ಲಿಯೂ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಕಾರಣದಿಂದ ಅವರ ವಿರುದ್ಧ ಅಲ್ಲಿಯೂ ಹಲವು ಪ್ರಕರಣ ದಾಖಲಾಗಿತ್ತು.
ಈ ನಡುವೆ, ಕಾಡಿನಲ್ಲಿ ಯಾವುದೋ ಜಂತು ಕಚ್ಚಿ ಗಾಯಗೊಂಡಿದ್ದ ಕೃಷ್ಣಮೂರ್ತಿಯನ್ನು 2006 ರ ಮೇ 22 ರಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಕೃಷ್ಣಮೂರ್ತಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದು ಗೊತ್ತಾಗುತ್ತಲೇ ಎಎನ್ಎಫ್ ಪಡೆಯ ಸದಸ್ಯರು ವೇಷ ಮರೆಸಿಕೊಂಡು ಬಂಧನಕ್ಕೆ ತೆರಳಿದ್ದರು. ಈ ವಿಚಾರವನ್ನು ಅದ್ಹೇಗೋ ಅರಿತ ಕೃಷ್ಣಮೂರ್ತಿ, ಆಸ್ಪತ್ರೆಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದ. ರಾಜ್ಯದ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದರಲ್ಲಿ ಮುಂಚೂಣಿಯಲ್ಲಿದ್ದ ಕೃಷ್ಣಮೂರ್ತಿ, ಯುವಕರನ್ನು ತಮ್ಮ ಚಳವಳಿಗೆ ಆಕರ್ಷಿಸಿ ಆಂದೋಲನದ ಹೆಸರಲ್ಲಿ ಸೇರಿಸಿಕೊಳ್ಳುತ್ತಿದ್ದ.
ಕಳೆದ 2020 ರಲ್ಲಿ ಕೃಷ್ಣಮೂರ್ತಿಯ ತಂದೆ ಕಾನು ಗೋಪಾಲಯ್ಯ ನಿಧನರಾದ ಸಂದರ್ಭದಲ್ಲಿ ಕೃಷ್ಣಮೂರ್ತಿ ಅಂತ್ಯಕ್ರಿಯೆಗೆ ಬರುತ್ತಾನೆ ಎನ್ನುವ ಗುಮಾನಿ ಇತ್ತು. ಹೀಗಾಗಿ ಪೊಲೀಸರು ಅದರ ಬಗ್ಗೆ ನಿಗಾ ಇಟ್ಟಿದ್ದರು. ಆದರೆ, ತಂದೆಯ ಅಂತ್ಯವಿಧಿಯಿಂದಲೂ ತಪ್ಪಿಸಿಕೊಂಡಿದ್ದ ಕೃಷ್ಣಮೂರ್ತಿ ಬಗ್ಗೆ ಯಾವುದೇ ಮಾಹಿತಿ ಪೊಲೀಸರ ಬಳಿ ಇರಲಿಲ್ಲ. ಕರ್ನಾಟಕದಲ್ಲಿ ಕೊನೆಯ ಬಾರಿಗೆ 2018 ರಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದ ಬಳಿಕ ರಾಜ್ಯದಲ್ಲಿ ನಕ್ಸಲ್ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಆದರೆ, ನಾಲ್ಕು ವರ್ಷಗಳ ಬಳಿಕ ವಯನಾಡಿನಲ್ಲಿ ತಲೆಮರೆಸಿಕೊಂಡಿದ್ದ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Karnataka Most wanted Maoist leader B G Krishnamurthy and Savithri arrested by Keralas Wayanad Police. “The top leaders of the proscribed CPI (Maoist) from the state - B.G. Krishnamurthy, his wife Hosaggade Prabha, Mundgaru Latha, Vikram Gowda, Vanajakshi and Angadi Pradeep have reportedly moved to Wayanad in Kerala, where they have been sighted and criminal cases have been registered against them
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm