ಬ್ರೇಕಿಂಗ್ ನ್ಯೂಸ್
11-11-21 08:54 pm Headline Karnataka News Desk ಕ್ರೈಂ
ಮಂಗಳೂರು, ನ.11: ನಗರದ ಮಣ್ಣಗುಡ್ಡೆಯ ಗಾಂಧಿನಗರದಲ್ಲಿ ಶಾಸಕ ವೇದವ್ಯಾಸ ಕಾಮತ್ ಮನೆ ಬಳಿಯಲ್ಲೇ ಕಳ್ಳರು ಕೈಚಳಕ ಮೆರೆದಿದ್ದಾರೆ. ಗಾಂಧಿನಗರದ ಆರು ಮನೆಗಳಿಗೆ ಕಳ್ಳರು ತೆರಳಿದ್ದು, ಮನೆಮಂದಿ ಮಲಗಿರುವಾಗಲೇ ಎರಡು ಮನೆಗಳ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದೊಯ್ದಿದ್ದಾರೆ.
ಇಬ್ಬರು ಕಳ್ಳರ ಕೈಚಳಕ ಅಲ್ಲಿನ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ರಥಬೀದಿಯ ಸ್ಕೂಲ್ ಬುಕ್ ಕಂಪನಿಯ ಮಾಲೀಕರದ್ದು ಎನ್ನಲಾದ ಮನೆಯ ಒಳಗೆ ನುಗ್ಗಿದ್ದ ಕಳ್ಳರು ಆ ಮನೆಯಲ್ಲಿ ಒಂದೂವರೆ ಲಕ್ಷ ಮೌಲ್ಯದ ಎರಡು ಬಳೆ ಮತ್ತು ಒಂದು ಸರವನ್ನು ಕದ್ದೊಯ್ದಿದ್ದಾರೆ. ಮನೆಯ ಹಿಂಬದಿ ಬಾಗಿಲನ್ನು ಒಡೆದು ಒಳನುಗ್ಗಿದ್ದ ಕಳ್ಳರು ಮನೆಮಂದಿ ಮಲಗಿದ್ದಾಗಲೇ ಕಳ್ಳತನ ನಡೆಸಿದ್ದಾರೆ. ಮನೆ ಆವರಣದಲ್ಲಿ ಹತ್ತು ಅಡಿ ಎತ್ತರ ಗೋಡೆ ಇದ್ದು ಅದನ್ನು ಹಾರಿ ಕಂಪೌಂಡ್ ಒಳಗೆ ಬಂದಿದ್ದರು. ರಾತ್ರಿ ವೇಳೆ ಏನೋ ಶಬ್ದ ಆಗಿದ್ದರಿಂದ ಮನೆಯ ಒಬ್ಬರು ಎದ್ದು ಲೈಟ್ ಹಾಕಿದ್ದರು. ಆನಂತರ ಯಾರೂ ಇಲ್ಲವೆಂದು ಬಾಗಿಲು ಮುಚ್ಚಿ ಮಲಗಿದ್ದರು. ಆದರೆ ಹಿಂಬಾಗಿಲನ್ನು ಒಡೆದು ಕಳವುಗೈದಿದ್ದು ಬೆಳಗ್ಗಿನ ಹೊತ್ತಲ್ಲಿ ಬೆಳಕಿಗೆ ಬಂದಿದೆ. ಕಳ್ಳ ಮನೆ ಕಂಪೌಂಡ್ ಹಾರಿ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದರ ಬಳಿಯಲ್ಲೇ ಇರುವ ಮೈಸೂರು ಮೂಲದ ಎಸ್.ಕೆ. ರಾಜೇಂದ್ರ ಎಂಬವರ ಮನೆಗೂ ಕಳ್ಳರು ನುಗ್ಗಿದ್ದಾರೆ. ಮನೆಮಂದಿ ಬಾಗಿಲು ಹಾಕಿ ಮೈಸೂರಿಗೆ ತೆರಳಿದ್ದರು. ಆ ಮನೆಯಲ್ಲಿ ಏನೂ ಕಳವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಪರಿಸರದ ಇತರ ನಾಲ್ಕು ಮನೆಗಳಿಗೂ ಕಳ್ಳರು ಹೋಗಿದ್ದರು. ಅಲ್ಲಿ ಮನೆಯ ಒಳಗೆ ನುಗ್ಗಲು ಸಾಧ್ಯವಾಗಿರಲಿಲ್ಲ. ಎರಡು ಮನೆಗೆ ನುಗ್ಗಿದ್ದು, ಒಂದರಲ್ಲಿ ಮಾತ್ರ ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು 25ರಿಂದ 30ರ ವಯಸ್ಸಿನವರಾಗಿದ್ದು, ಸದ್ದಿಲ್ಲದೆ ಕಳವು ಮಾಡಿಕೊಂಡು ತೆರಳಿದ್ದಾರೆ. ಕಳ್ಳರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
Mangalore Burglars break into three houses in Gandhinagar in Mangalore near MLAs house, steal lakhs worth of valuables. Barke police have formed a special team to nab the accused.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm