ಬ್ರೇಕಿಂಗ್ ನ್ಯೂಸ್
14-11-21 03:41 pm HK News Desk ಕ್ರೈಂ
ಮುಂಬೈ, ನ.14: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿಸಿನೆಸ್ ಮ್ಯಾನ್ ಒಬ್ಬರಿಂದ 1.51 ಕೋಟಿ ಹಣವನ್ನು ಪಡೆದು ವಂಚನೆ ನಡೆಸಿದ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿತಿನ್ ಬರಾರಿ ಎಂಬ ಬಿಸಿನೆಸ್ ಮ್ಯಾನ್ ಶನಿವಾರ ಬಾಂದ್ರಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. 2014ರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ ಎಸ್ಎಫ್ಎಲ್ ಫಿಟ್ನೆಸ್ ಕಂಪನಿಗೆ ಹಣ ಹೂಡಿಕೆ ಮಾಡುವಂತೆ ಅದರ ಡೈರೆಕ್ಟರ್ ಖಾಶಿಫ್ ಖಾನ್, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮನವೊಲಿಕೆ ಮಾಡಿದ್ದರು. ಅದರಂತೆ ಹಣ ಹೂಡಿಕೆ ಮಾಡಿದ್ದು, ಒಪ್ಪಂದ ಪ್ರಕಾರ ಕಂಪನಿಯ ಫ್ರಾಂಚೈಸಿ ನೀಡಬೇಕಾಗಿತ್ತು. ಕಂಪನಿ ಅಡಿಯಲ್ಲೇ ಪುಣೆಯ ಹಡಪ್ಸರ್ ಮತ್ತು ಕೋರೆಗಾಂವ್ ನಲ್ಲಿ ಜಿಮ್ ಮತ್ತು ಸ್ಪಾ ಸೆಂಟರನ್ನು ಆರಂಭಿಸಬೇಕಿತ್ತು. ಆದರೆ ಅದನ್ನು ಮಾಡಿಕೊಡದೆ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಬಳಿಕ ತನ್ನ ಹಣವನ್ನು ಮರಳಿಸುವಂತೆ ತಿಳಿಸಿದಾಗ, ಬೆದರಿಕೆ ಒಡ್ಡಲಾಗಿತ್ತು ಅನ್ನುವುದನ್ನೂ ದೂರಿನಲ್ಲಿ ಹೇಳಲಾಗಿದೆ. ರಾಜ್ ಕುಂದ್ರಾ ಅವರನ್ನು ಪೋರ್ನೋಗ್ರಫಿ ವಿಡಿಯೋ ಚಿತ್ರೀಕರಣದ ಪ್ರಕರಣದಲ್ಲಿ ಬಂಧಿಸಿ, ಆನಂತರ ಜಾಮೀನಿನಲ್ಲಿ ಹೊರಬಂದ ಮೂರು ತಿಂಗಳ ಬಳಿಕ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಆದರೆ, ಪತಿಯ ಈ ರೀತಿಯ ಚಟುವಟಿಕೆ ಬಗ್ಗೆ ತನ್ನ ಅರಿವಿಗೆ ಬಂದಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು.
ಶಿಲ್ಪಾ ಶೆಟ್ಟಿ ತನ್ನದೇ ಆದ ಫಿಟ್ನೆಸ್ ಜಿಮ್ ಕಂಪನಿ ಹೊಂದಿದ್ದು, ಯೂಟ್ಯೂಬನ್ನೂ ಹೊಂದಿದ್ದಾರೆ. ಇವರೆಡು ಕೂಡ ಮುಂಬೈನಲ್ಲಿ ಭಾರೀ ಜನಪ್ರಿಯತೆ ಪಡೆದಿದೆ.
Actor Shilpa Shetty, her husband Raj Kundra and Kaashif Khan, director of SFL Fitness Pvt Ltd, have been booked by the Bandra police on the complaint of a Pune youth who alleged he was cheated of ₹1.51 crores by them.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm