ಬ್ರೇಕಿಂಗ್ ನ್ಯೂಸ್
14-11-21 10:54 pm HK News Desk ಕ್ರೈಂ
ಕೊಯಂಬತ್ತೂರು, ನ.14: ಶಾಲಾ ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದ ಘಟನೆ ಕೊಯಂಬತ್ತೂರಿನಲ್ಲಿ ಭಾರೀ ಆಕ್ರೋಶದ ಅಲೆ ಎಬ್ಬಿಸಿದೆ. ಪ್ರಕರಣ ಸಂಬಂಧಿಸಿ ಪೊಲೀಸರು ಕಾಲೇಜು ಪ್ರಿನ್ಸಿಪಾಲ್ ಮತ್ತು ಶಿಕ್ಷಕನನ್ನು ಬಂಧಿಸಿದ್ದಾರೆ.
ಕೊಯಂಬತ್ತೂರಿನ ಚಿನ್ಮಯ ವಿದ್ಯಾಲಯದ ಪ್ರಿನ್ಸಿಪಾಲ್ ಮೀರಾ ಜಾಕ್ಸನ್ ಮತ್ತು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಶಿಕ್ಷಕ ಮಿಥುನ್ ಚಕ್ರವರ್ತಿ ಬಂಧಿತರು. ಕಾಲೇಜಿನಲ್ಲಿ ಪ್ರಥಮ ಪಿಯು ಕಲಿಯುತ್ತಿದ್ದ ವಿದ್ಯಾರ್ಥಿನಿಗೆ ಅದೇ ಕಾಲೇಜಿನಲ್ಲಿ ಶಿಕ್ಷಕನಾಗಿದ್ದ 31 ವರ್ಷದ ಮಿಥುನ್ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿ, ಘಟನೆ ಬಗ್ಗೆ ಪ್ರಾಂಶುಪಾಲರಿಗೂ ದೂರು ನೀಡಿದ್ದಳು. ಆಕೆ ಕ್ರಮ ಜರುಗಿಸದು ಬಿಟ್ಟು ಬುದ್ಧಿಮಾತು ಹೇಳಿ ಕಳುಹಿಸಿದ್ದರಿಂದ 17 ವರ್ಷದ ವಿದ್ಯಾರ್ಥಿನಿ ನ.11ರಂದು ತನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಸಾವನ್ನಪ್ಪಿದ್ದಳು.
ವಿಷಯ ಬೆಳಕಿಗೆ ಬರುತ್ತಲೇ ಪೊಲೀಸರು ಮರುದಿನ ಆರೋಪಿ ಶಿಕ್ಷಕನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲರನ್ನೂ ಬಂಧಿಸಬೇಕು ಎಂದು ಆಕೆಯ ಹೆತ್ತವರು ಮತ್ತು ಸಂಬಂಧಿಕರು ಆಗ್ರಹಿಸಿದ್ದರು. ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದು ತಮಿಳುನಾಡಿನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಈ ನಡುವೆ, ಪ್ರಾಂಶುಪಾಲೆ ಮೀರಾ ಜಾಕ್ಸನ್ ನಾಪತ್ತೆಯಾಗಿದ್ದು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಪೊಲೀಸರು ಆರೋಪಿ ಮತ್ತು ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದು ಜೈಲಿಗೆ ತಳ್ಳಿದ್ದಾರೆ. ಮೃತ ವಿದ್ಯಾರ್ಥಿನಿಯ ಗೆಳತಿ ಹೇಳುವ ಪ್ರಕಾರ, ಶಿಕ್ಷಕ ಮಿಥುನ್ ವಿದ್ಯಾರ್ಥಿನಿಯ ಜೊತೆಗೆ ಗೆಳೆತನದ ಸಂಬಂಧ ಹೊಂದಿದ್ದ. ಆಕೆಯ ಮೊಬೈಲಿಗೆ ಮೆಸೇಜ್ ಮಾಡುತ್ತಿದ್ದು ಆತನ ನಡತೆ ಏನೋ ಅಸಹಜ ಇತ್ತು. ಈ ಬಗ್ಗೆ ಕಾಲೇಜು ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಪತ್ನಿಗೂ ಗೊತ್ತಿತ್ತು. ಆದರೆ ಅವರೇನೂ ಕ್ರಮ ತೆಗೆದುಕೊಂಡಿರಲಿಲ್ಲ.
ಇದಲ್ಲದೆ, ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ನೇರವಾಗಿ ಪ್ರಿನ್ಸಿಪಾಲ್ ಬಳಿ ದೂರು ಹೇಳಿಕೊಂಡಿದ್ದಳು. ಆದರೆ ಪ್ರಿನ್ಸಿಪಾಲ್, ಈ ಬಗ್ಗೆ ಹೆತ್ತವರಿಗೆ ಹೇಳದಂತೆ ಸೂಚನೆ ನೀಡಿದ್ದಲ್ಲದೆ, ಕಾಲೇಜು ಸ್ಟಾಫ್ ರೂಮಿಗೆ ಕರೆದು ಕೌನ್ಸೆಲಿಂಗ್ ಮಾಡಿದ್ದರು. ಈ ವೇಳೆ ಆಕೆ ಪ್ರಶ್ನೆ ಮಾಡಿದ್ದಕ್ಕೆ ಬೆತ್ತದಿಂದ ಏಟನ್ನೂ ಕೊಟ್ಟಿದ್ದರು ಎಂದು ದೂರಲಾಗಿದೆ. ಈ ನಡುವೆ, ವಿದ್ಯಾರ್ಥಿನಿ ಮತ್ತು ಶಿಕ್ಷಕನ ನಡುವಿನ ವಾಟ್ಸಪ್ ಚಾಟ್ ಮತ್ತು ಆಡಿಯೋ ಸಂಭಾಷಣೆ ಲೀಕ್ ಆಗಿ ವೈರಲ್ ಆಗಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಳು.
ಶನಿವಾರ ವಿದ್ಯಾರ್ಥಿನಿಯ ಶವವನ್ನು ಕಾಲೇಜು ಮುಂದಿಟ್ಟು ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಶಾಲಾಡಳಿತದ ಮುಖ್ಯಸ್ಥರನ್ನೂ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಡೆತ್ ನೋಟ್ ನಲ್ಲಿ ಇನ್ನಿಬ್ಬರ ಹೆಸರುಗಳಿದ್ದು, ಅವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
Cracking down on Chinmaya Vidyalaya's authorities over a 17-yr-old student's suicide, Coimbatore police have arrested the school's principal Mira Jackson on Sunday. Jackson, who was booked for not acting on the victim's complaint on sexual abuse, was arrested by police while she was in hiding in Bangalore. The accused is being investigated at RS Puram police station and over 20 police personnel deployed outside school premises as a safety measure.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm