ಪಾಲಕ್ಕಾಡ್ ; ಪತ್ನಿ ಎದುರಲ್ಲೇ ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ, ಎಸ್ಡಿಪಿಐ ಕೃತ್ಯ ಶಂಕೆ

15-11-21 10:26 pm       HK News Desk   ಕ್ರೈಂ

ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಪತ್ನಿ ಎದುರಲ್ಲೇ ನಾಲ್ವರು ದುಷ್ಕರ್ಮಿಗಳು ಸೇರಿ ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಳ್ಳಿ ಗ್ರಾಮದಲ್ಲಿ ನಡೆದಿದೆ.

ಪಾಲಕ್ಕಾಡ್, ನ.15: ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಪತ್ನಿ ಎದುರಲ್ಲೇ ನಾಲ್ವರು ದುಷ್ಕರ್ಮಿಗಳು ಸೇರಿ ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಮತ್ತು ಆರೆಸ್ಸೆಸ್ ಸಕ್ರಿಯ ಕಾರ್ಯಕರ್ತನಾಗಿದ್ದ ಸಂಜಿತ್ (27) ಕೊಲೆಯಾದವರು. ಸಂಜಿತ್ ಆರೆಸ್ಸೆಸ್ ಮಂಡಲ ಕಾರ್ಯವಾಹರಾಗಿ ಜವಾಬ್ದಾರಿ ಹೊಂದಿದ್ದರು. ಅವರು ಇಂದು ಬೆಳಗ್ಗೆ ಪತ್ನಿಯನ್ನು ಬೈಕಿನಲ್ಲಿ ಕೆಲಸದ ಜಾಗಕ್ಕೆ ಒಯ್ಯುತ್ತಿದ್ದಾಗ ದುಷ್ಕರ್ಮಿಗಳ ತಂಡ ಕಾರಿನಲ್ಲಿ ಹಿಂಬಾಲಿಸಿದ್ದು, ಕಿನಾಶ್ಶೇರಿ ಎಂಬಲ್ಲಿ ಹಿಂದಿನಿಂದ ಡಿಕ್ಕಿಯಾಗಿದ್ದಾರೆ. ನೆಲಕ್ಕೆ ಬಿದ್ದ ಸಂಜಿತ್ ಅವರನ್ನು ಪತ್ನಿಯ ಎದುರಲ್ಲೇ ಅತ್ಯಂತ ಭೀಕರವಾಗಿ ತಲವಾರಿನಿಂದ ಕಡಿದು ಆಗಂತುಕರು ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಗಿದ್ದು, ಅಲ್ಲಿ ಸಂಜಿತ್ ಮೃತಪಟ್ಟಿದ್ದಾರೆ.

ಎಸ್ ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರು ಈ ಕೊಲೆಯ ಕೃತ್ಯದ ಹಿಂದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಎಲಪ್ಪುಳ್ಳಿ ಗ್ರಾಮದಲ್ಲಿ ಎಸ್ ಡಿಪಿಐ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಕೊಲೆ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.

ಘಟನೆಯನ್ನು ಖಂಡಿಸಿ ಬಿಜೆಪಿ ಮಲಪ್ಪುಝ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಹರತಾಳ ಘೋಷಣೆ ಮಾಡಿದೆ. ಹತ್ಯೆ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್ ಡಿಪಿಐ ಗೂಂಡಾಗಳನ್ನು ಪಿಣರಾಯಿ ವಿಜಯನ್ ಸರಕಾರ ರಕ್ಷಣೆ ಮಾಡುತ್ತಿದೆ. ಸ್ಥಳೀಯವಾಗಿ ಸಿಪಿಎಂ- ಎಸ್ಡಿಪಿಐ ಮೈತ್ರಿ ಇದ್ದು, ಆಡಳಿತಾರೂಢರು ಗೂಂಡಾಗಳಿಗೆ ಬೆಂಬಲ ಹೊಂದಿದ್ದಾರೆ. ಹತ್ತು ದಿನಗಳಲ್ಲಿ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗಿದೆ ಎಂದು ಹೇಳಿದ್ದಾರೆ.

ಈ ರೀತಿಯ ಬೆಳವಣಿಗೆಯನ್ನು ಸರಕಾರ ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಅದಕ್ಕೆ ಬೇಕಾದ ಉತ್ತರ ನೀಡಲಿದ್ದಾರೆ. ಬೆಂಕಿಗೆ ಬೆಂಕಿಯಿಂದಲೇ ಉತ್ತರ ನೀಡುವುದೂ ಗೊತ್ತಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.  

A worker of the Rashtriya Swayamsevak Sangh (RSS) was hacked to death in Mambaram of Kannur district in Kerala, police said on Monday. The deceased has been identified as S Sanjith. Police said that the 27-year-old was allegedly hacked to death in front of his wife at around 9 am today. The incident took place when he was taking her to her place of work. Even though Sanjith was immediately rushed to a nearby hospital, he succumbed to his injuries.