ಬ್ರೇಕಿಂಗ್ ನ್ಯೂಸ್
16-11-21 04:47 pm Mangaluru Correspondent ಕ್ರೈಂ
ಸುಳ್ಯ, ನ.16: ತನ್ನನ್ನು ಹಿಂದು ಎಂದು ಹೇಳಿಕೊಂಡು ನಂಬಿಸಿ ಗೆಳೆತನ ಸಾಧಿಸಿದ್ದಲ್ಲದೆ, ಮಡಿಕೇರಿಗೆ ಕರೆದೊಯ್ದು ದುರ್ನಡತೆ ತೋರಿದ್ದಾಗಿ ಯುವತಿಯೊಬ್ಬಳು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಡಿಕೇರಿ ನಿವಾಸಿ ತಸ್ಲೀಮ್ ಎಂಬುದಾಗಿ ತಿಳಿದುಬಂದಿದೆ.
ಎರಡು ತಿಂಗಳ ಹಿಂದೆ ಫೇಸ್ಬುಕ್ ಜಾಲತಾಣದಲ್ಲಿ ಯುವಕನ ಪರಿಚಯ ಆಗಿತ್ತು. ತನ್ನ ಹೆಸರನ್ನು ಕೌಶಲ್ ಎಂದು ಹೇಳಿಕೊಂಡಿದ್ದ ಯುವಕ, ಸ್ನೇಹ ಬೆಳೆಸಿದ್ದ. ಮೊಬೈಲಿನಲ್ಲಿ ಮಾತನಾಡುತ್ತಾ ಹತ್ತಿರವಾಗಿದ್ದ ಯುವಕ, ನ.11ರಂದು ಸುಳ್ಯಕ್ಕೆ ಬೈಕಿನಲ್ಲಿ ಬಂದಿದ್ದಾನೆ. ಅಲ್ಲದೆ, ನಾವು ಬೈಕಿನಲ್ಲಿ ರೈಡ್ ಹೋಗುವ ಎಂದು ಹೇಳಿ ನೇರವಾಗಿ ಮಡಿಕೇರಿಗೆ ಕರೆದೊಯ್ದಿದ್ದಾನೆ.
ಮಡಿಕೇರಿಯಲ್ಲಿ ಪಾರ್ಕ್ ಒಂದಕ್ಕೆ ಕರೆದೊಯ್ದು ಅಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ, ತನ್ನ ಕೆಲಸ ಮುಗಿಸಿದ ಬಳಿಕ ತಾನು ಮುಸ್ಲಿಂ ಎಂದು ಹೇಳಿದ್ದಲ್ಲದೆ, ಈ ಬಗ್ಗೆ ಬೇರೆಯವರಿಗೆ ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಯುವತಿ ಬಳಿಕ ಮಡಿಕೇರಿಯಿಂದ ಮರಳಿ ಸುಳ್ಯಕ್ಕೆ ಬಂದಿದ್ದಳು. ಆನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಇಂಜಿನಿಯರಿಂಗ್ ವಿದ್ಯಾರ್ಥಿ ಅನ್ನುವುದನ್ನು ಹೇಳಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
The police here have taken a youth into custody on the basis of a complaint filed by a lady. The girl claimed that the youth falsely told her that he was a Hindu, earned her trust, moved around with her and behaved indecently.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm