ಬ್ರೇಕಿಂಗ್ ನ್ಯೂಸ್
16-11-21 04:58 pm HK News Desk ಕ್ರೈಂ
ಮುಂಬೈ, ನ.16: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅತ್ಯಂತ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಪೊಲೀಸ್ ಸಿಬಂದಿ ಸೇರಿ 400ಕ್ಕೂ ಹೆಚ್ಚು ಮಂದಿ ಆರು ತಿಂಗಳ ಪರ್ಯಂತ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು ತಡವಾಗಿ ಬಯಲಿಗೆ ಬಂದಿದೆ. ಪೊಲೀಸರಿಗೆ ದೂರು ನೀಡಲು ಹೋದರೂ, ದೂರು ಸ್ವೀಕರಿಸದೆ ಅಲ್ಲಿನ ಸಿಬಂದಿಯೂ ಆಕೆಯನ್ನೇ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ.
ಅಪ್ರಾಪ್ತ ಬಾಲಕಿಯ ತಾಯಿ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆನಂತರ, ತಂದೆ ಬೇರೆ ಮದುವೆಯಾಗಿದ್ದು ಮಗಳು ತನ್ನ ಅಜ್ಜಿ ಮನೆಗೆ ತೆರಳಿದ್ದಳು. ಆದರೆ ಅಲ್ಲಿಯೂ ಅತ್ತೆ ಮತ್ತು ಮಾವ ಆಕೆಯನ್ನು ಪೀಡಿಸುತ್ತಿದ್ದರು. ಅಲ್ಲಿ ಒಂದು ವರ್ಷ ಕಾಲ ಹೊಂದಿಕೊಂಡಿದ್ದ ಬಾಲಕಿ ಆನಂತರ ಮರಳಿ ತಂದೆಯ ಮನೆಗೆ ಬಂದಿದ್ದಳು. ಮಗಳು ಮನೆಗೆ ಬಂದಿದ್ದನ್ನು ನೋಡಿ ಸಿಟ್ಟಾದ ತಂದೆ, ಮನೆಯಲ್ಲಿ ಇರಕೂಡದು ಎಂದು ಮನೆಯಿಂದ ಹೊರಕ್ಕೆ ಹಾಕಿದ್ದ. ಇದರಿಂದ ಬೀದಿಗೆ ಬಿದ್ದಿದ್ದ ಬಾಲಕಿ ಅಂಬಜೋಗಾಯಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಳು.
ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬದುಕುತ್ತಿದ್ದ ಬಾಲಕಿಯನ್ನು ಕಾಮುಕರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸಿದ್ದಾರೆ. ನೂರಾರು ಮಂದಿ ಸರಣಿಯಂತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆರು ತಿಂಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಮಂದಿ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಈ ನಡುವೆ, ಬಾಲಕಿ ಅಂಬಜೋಗಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಳು. ಆದರೆ, ಅಲ್ಲಿನ ಸಿಬಂದಿ ದೂರನ್ನು ಸ್ವೀಕರಿಸದೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದರು. ಒಬ್ಬ ಸಿಬಂದಿಯಂತೂ ಆಕೆಯ ದೈನೇಸಿ ಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಕಡೆಗೂ ಬಾಲಕಿಯ ದೂರನ್ನು ವಾರದ ಹಿಂದೆ ಪೊಲೀಸರು ಪರಿಗಣಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಂಬಂಧಿಕರು ಮತ್ತು ಹೆತ್ತವರ ವಿರುದ್ಧವೂ ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ವಿವಾಹ ಕಾಯ್ದೆಯಡಿ ಕೇಸು ದಾಖಲಾಗಿದೆ. ಬೀಡ್ ಜಿಲ್ಲೆಯ ಎಸ್ಪಿ ರಾಜಾ ರಾಮಸ್ವಾಮಿ ಪ್ರಕಾರ, ಪೊಲೀಸರು ಪ್ರಕರಣ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಯುವತಿ ಈಗ ನಿರಂತರ ಅತ್ಯಾಚಾರದಿಂದಾಗಿ ಎರಡು ತಿಂಗಳ ಗರ್ಭಿಣಿಯಾಗಿದ್ದು ಚೈಲ್ಡ್ ವೆಲ್ಫೇರ್ ಕಮಿಟಿಯವರು ಆಕೆಗೆ ಆಶ್ರಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾಮುಕ ದುರುಳರು ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮತ್ತು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ವಿಚಾರ ತಿಳಿದಿದ್ದ ಸಂಬಂಧಿಕರು ಆಕೆಗೆ ಪ್ರಾಯ ಪೂರ್ತಿಯಾಗಿರದಿದ್ದರೂ ಯಾರೊಂದಿಗೋ ಮದುವೆಗೆ ಪ್ರಯತ್ನಿಸಿದ್ದರು. ಆದರೆ, ಮದುವೆ ಕಾರ್ಯ ನಡೆದಿರಲಿಲ್ಲ. ಈ ಬಗ್ಗೆಯೂ ಪೊಲೀಸರು ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ವಿವಾಹ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
A horrifying case of gang-rape has come to light in district Beed, Maharashtra, where a minor girl was gang-raped by around 400 different people, including a policeman, over a period of six months. According to a report in News 18 Lokmat, the victim tried multiple times to file a case, but the Police did not take any action.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm